Home Uncategorized ಅಂಕೋಲಾ ಬಳಿ ಭೀಕರ ಅಪಘಾತ; ಸಾರಿಗೆ ಬಸ್‍ಗೆ ಕಾರು ಡಿಕ್ಕಿ, ತಮಿಳುನಾಡಿನ ನಾಲ್ವರ ಸಾವು

ಅಂಕೋಲಾ ಬಳಿ ಭೀಕರ ಅಪಘಾತ; ಸಾರಿಗೆ ಬಸ್‍ಗೆ ಕಾರು ಡಿಕ್ಕಿ, ತಮಿಳುನಾಡಿನ ನಾಲ್ವರ ಸಾವು

6
0
bengaluru

ಹೊಸ ವರ್ಷಾಚರಣೆ ಸಂಭ್ರಮಾಚರಣೆಯ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಾರಿಗೆ ಬಸ್‍ಗೆ ಕಾರು ಡಿಕ್ಕಿಯಾಗಿ ತಮಿಳುನಾಡು ಮೂಲದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಉತ್ತರಕನ್ನಡ: ಹೊಸ ವರ್ಷಾಚರಣೆ ಸಂಭ್ರಮಾಚರಣೆಯ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಾರಿಗೆ ಬಸ್‍ಗೆ ಕಾರು ಡಿಕ್ಕಿಯಾಗಿ ತಮಿಳುನಾಡು ಮೂಲದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬಾಳೆಗುಳಿ ಕ್ರಾಸ್ ಬಳಿ ಭಾನುವಾರ ಕಾರು ಎದುರಿನಿಂದ ಬರುತ್ತಿದ್ದ  ಸಾರಿಗೆ ಸಂಸ್ಥೆಯ ಬಸ್‍ಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಪ್ರವಾಸಿಗರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಹೊಸ ವರ್ಷ ಸೋಗಿನಲ್ಲಿ ಸ್ನೇಹಿತರಿಂದಲೇ ಯುವಕನ ಕೊಲೆ

ಮೃತರನ್ನು ತಮಿಳುನಾಡು ಮೂಲದ ಅರುಣ್ ಪಾಂಡ್ಯನ್, ನಿಫುಲ್, ಮಹ್ಮದ್ ಬಿಲ್ಲಾಲ್ ಮತ್ತು ಶೇಖರನ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಮತ್ತೊಬ್ಬ ಪ್ರವಾಸಿಗ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

bengaluru

ಇದನ್ನೂ ಓದಿ: ಮಂಡ್ಯ: ಕೇಂದ್ರ ಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೆಂದು ಸಿದ್ದಪಡಿಸಿದ್ದ ಟನ್ ಗಟ್ಟಲೆ ಆಹಾರ ಮಣ್ಣುಪಾಲು!

‘ಹೊಸ ವರ್ಷಾಚರಣೆ ನಿಮಿತ್ತ ಗೋವಾಕ್ಕೆ ತೆರಳಿದ್ದ ಈ ಪ್ರವಸಿಗರು ಅಲ್ಲಿಂದ ಗೋಕರ್ಣಕ್ಕೆ ತೆರಳುತ್ತಿದ್ದರು. ಹೆದ್ದಾರಿ ಮಧ್ಯದ ವಿಭಜಕಕ್ಕೆ ಬಡಿದು ತದಡಿಯಿಂದ ಹುಬ್ಬಳ್ಳಿಯತ್ತ ಸಂಚರಿಸುತ್ತಿದ್ದ ಬಸ್‍ಗೆ ಡಿಕ್ಕಿಯಾಗಿದೆ’ ಎಂದು ಅಂಕೋಲಾ ಠಾಣೆ ಪೊಲೀಸರು ತಿಳಿಸಿದ್ದಾರೆ.
 

bengaluru

LEAVE A REPLY

Please enter your comment!
Please enter your name here