Home Uncategorized ಒಂದೇ ವರ್ಷದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಠಾಣೆಗಳ ನಿರ್ಮಾಣ ಸಿಎಂ ಬೊಮ್ಮಾಯಿ

ಒಂದೇ ವರ್ಷದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಠಾಣೆಗಳ ನಿರ್ಮಾಣ ಸಿಎಂ ಬೊಮ್ಮಾಯಿ

0
0
bengaluru

ರಾಜ್ಯದಲ್ಲಿ ಒಂದೇ ವರ್ಷದಲ್ಲಿ ನೂರಕ್ಕೂ  ಹೆಚ್ಚು ಪೊಲೀಸ್  ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  ಬೆಳಗಾವಿ: ರಾಜ್ಯದಲ್ಲಿ ಒಂದೇ ವರ್ಷದಲ್ಲಿ ನೂರಕ್ಕೂ  ಹೆಚ್ಚು ಪೊಲೀಸ್  ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಳಗಾವಿ ಪೊಲೀಸ್  ಆಯುಕ್ತರ ನೂತನ ಕಚೇರಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. 

ವಾಹನ ಖರೀದಿ 
ಪೊಲೀಸ್  ‌ಗೃಹ ಮಂಡಳಿಯಿಂದ  ರಾಜ್ಯಾದ್ಯಂತ ಒಳ್ಳೆಯ ಕೆಲಸ ಆಗುತ್ತಿದೆ.‌ರಾಜ್ಯದಲ್ಲಿ 2500 ಪೊಲೀಸ್ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಈಗಾಗಲೇ 16 ಪೊಲೀಸ್ ಠಾಣೆ ನಿರ್ಮಾಣದ ಹಂತದಲ್ಲಿವೆ. ‌ಒಂದೇ ವರ್ಷದಲ್ಲಿ ನೂರಕ್ಕೂ  ಹೆಚ್ಚು ಪೊಲೀಸ್  ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 80 ಕೋಟಿ ರೂ.ಗಳ ವೆಚ್ಚದಲ್ಲಿ 300 ಜೀಪ್ ಹಾಗೂ ಸ್ಕಾರ್ಪಿಯೊ ಖರೀದಿ ಮಾಡಲಾಗುತ್ತಿದೆ.‌ಡಿವೈ ಎಸ್ಪಿಗಳಿಗೆ ಸ್ಕಾರ್ಪಿಯೊ ವಾಹನಗಳನ್ನು  ನೀಡಲಾಗುತ್ತಿದೆ ಎಂದರು.

ಇದನೂ ಓದಿ: ಪ್ರತಿ ಜಿಲ್ಲೆ, ನಗರ ವ್ಯಾಪ್ತಿಯಲ್ಲಿ ಸೈಬರ್ ಪೊಲೀಸ್ ಠಾಣೆ ಸ್ಥಾಪನೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಜನರೊಂದಿಗೆ ನಿಕಟ ಸಂಪರ್ಕ
ಗೃಹ ಇಲಾಖೆ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ಕರ್ನಾಟಕ ಪೊಲೀಸ್ ಪಡೆಗೆ ಅಭಿನಂದನೆ ಸಲ್ಲಿಸಿದ ಅವರು,  ಗಡಿ ಭಾಗದಲ್ಲಿ ಕೇವಲ ಶಕ್ತಿ ಪ್ರದರ್ಶನ ಮಾಡುವುದಲ್ಲ.‌ ಜನರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು‌.‌ ಗಡಿ ಭಾಗದ ಸಮಸ್ಯೆ  ಪರಿಹರಿಸಿದರೆ ಹೆಚ್ಚು ಅನುಕೂಲ . ಇತ್ತೀಚೆಗೆ ವಿದ್ವಂಸಕ ಕೃತ್ಯಗಳು ನಡೆಯುತ್ತಿವೆ‌ ಅವುಗಳನ್ನು ಅತ್ಯಂತ ವೇಗವಾಗಿ ಪತ್ತೆ ಹಚ್ಚುವ ಕೆಲಸ ಆಗುತ್ತಿದೆ. ದಕ್ಷತೆಯಿಂದ ನಮ್ಮ ಪೊಲಿಸರು ಕೆಲಸ ಮಾಡುತ್ತಿದ್ದಾರೆ‌. ನಾನು ಗೃಹ ಸಚಿವನಾಗಿದ್ದಾಗ ಅಡಿಗಲ್ಲು ಹಾಕಿದ ಕಟ್ಟಡಗಳು ಈಗ ಉದ್ಘಾಟನೆಯಾಗುತ್ತಿವೆ‌ .ಎಫ್ ಎಸ್ ಎಲ್ ರಿಪೋರ್ಟ್ 15 ದಿನದಲ್ಲಿ ಬಂದರೆ ಅಪರಾಧ ನಿಯಂತ್ರಣಕ್ಕೆ ಹೆಚ್ಚು ಅನುಕೂಲ ಆಗುತ್ತದೆ ಎಂದರು.

bengaluru

ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಳಾ ಅಂಗಡಿ, ಶಾಸಕ  ಅನಿಲ್ ಬೆನಕೆ, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

bengaluru

LEAVE A REPLY

Please enter your comment!
Please enter your name here