ಫಾರ್ಮಸಿಟಿಕಲ್ ಪಾರ್ಕ್ ನ್ನು ಸ್ಥಾಪಿಸುವ ವಿಚಾರದಲ್ಲಿ ನೀತಿ ಆಯೋಗದ ಪರೀಕ್ಷೆಯಲ್ಲಿ ಕರ್ನಾಟಕದ ಯಾದಗಿರಿ ಜಿಲ್ಲೆಯ ಕಡೆಚೂರು ವಿಫಲವಾಗಿದ್ದು ಆಂಧ್ರಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶಗಳು ಮುಂಚೂಣಿಯಲ್ಲಿವೆ. ಹುಬ್ಬಳ್ಳಿ: ಫಾರ್ಮಸಿಟಿಕಲ್ ಪಾರ್ಕ್ ಸ್ಥಾಪಿಸುವ ವಿಚಾರದಲ್ಲಿ ನೀತಿ ಆಯೋಗದ ಪರೀಕ್ಷೆಯಲ್ಲಿ ಕರ್ನಾಟಕದ ಯಾದಗಿರಿ ಜಿಲ್ಲೆಯ ಕಡೆಚೂರು ವಿಫಲವಾಗಿದ್ದು ಆಂಧ್ರಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶಗಳು ಮುಂಚೂಣಿಯಲ್ಲಿವೆ.
ನೀತಿ ಆಯೋಗ ಕರ್ನಾಟಕವನ್ನು ಪರಿಗಣಿಸಿಲ್ಲವಾದ ಕಾರಣ ಈಗ ಫಾರ್ಮ ಪಾರ್ಕ್ ಸ್ಥಾಪಿಸುವುದು ಕರ್ನಾಟಕ ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯವಾಗಿದೆ.
ರಾಸಾಯನಿಕ ಹಾಗೂ ಗೊಬ್ಬರ ರಾಜ್ಯ ಖಾತೆಯ ಕೇಂದ್ರ ಸಚಿವ ಭಗವಂತ್ ಖೂಬಾ, ಕರ್ನಾಟಕ ಸೇರಿದಂತೆ ಸರ್ಕಾರಗಳು ಪ್ರಸ್ತಾವನೆಗಳನ್ನು ಸಲ್ಲಿಸಿದ್ದವು. ಆದರೆ ನೀತಿ ಆಯೋಗ ಒದಗಿಸಿದ ವಿವಿಧ ನಿಯತಾಂಕಗಳು ಮತ್ತು ಸೌಲಭ್ಯಗಳ ಆಧಾರದ ಮೇಲೆ ಮೂರು ರಾಜ್ಯಗಳನ್ನು ಪಟ್ಟಿ ಮಾಡಿದ್ದು ವ್ಯಾಪಾರ ನಡೆಸಲು ಸ್ಥಳ ಪ್ರಯೋಜನಗಳನ್ನೂ ಪರಿಗಣಿಸಿದೆ ಎಂದು ಹೇಳಿದ್ದಾರೆ.
ಕರ್ನಾಟಕಕ್ಕೆ ಫಾರ್ಮಾ ಪಾರ್ಕ್ ಯೋಜನೆ ಲಭಿಸಲಿದೆ ಎಂಬ ವಿಶ್ವಾಸವಿತ್ತು ಆದರೆ ರಾಜ್ಯ ನೀತಿ ಆಯೋಗದ ಮಾನದಂಡಗಳನ್ನು ಪೂರೈಸಲು ವಿಫಲವಾಗಿದೆ. ಆದರೆ ಕಲ್ಯಾಣ ಕರ್ನಾಟಕ ಹಿಂದುಳಿದಿರುವ ಮಾನದಂಡವನ್ನು ಮರುಪರಿಶೀಲಿಸಲು ಸಾಧ್ಯವಿಲ್ಲ. ಆದರೆ ಇನ್ವೆಸ್ಟ್ ಕರ್ನಾಟಕದಲ್ಲಿ ರಾಜ್ಯ ಸರ್ಕಾರ 2 ಲಕ್ಷ ಕೋಟಿ ಮೌಲ್ಯದ ಎಂಒಯು ಗಳಿಗೆ ಸಹಿ ಹಾಕಿದ್ದು ಫಾರ್ಮಾ ಸಂಸ್ಥೆಗಳನ್ನು ಕಡೆಚೂರ್ ನಲ್ಲಿ ಘಟಕಗಳನ್ನು ತೆರೆಯುವುದಕ್ಕೆ ಉತ್ತೇಜಿಸುತ್ತಿದೆ ಎಂದು ಕೇಂದ್ರ ಸಚಿವ ಖೂಬಾ ತಿಳಿಸಿದ್ದಾರೆ.
ಇದನ್ನೂ ಓದಿ: ಪತಂಜಲಿ ಉತ್ಪನ್ನ ಸೇರಿ 16 ಭಾರತೀಯ ಕಂಪನಿಗಳ ಔಷಧಿ ಆಮದು ನಿಷೇಧಿಸಿದ ನೇಪಾಳ
ಉತ್ತರ ಕರ್ನಾಟಕ ಭಾಗದಲ್ಲಿ ಗೊಬ್ಬರ ಸಂಸ್ಥೆಗಳನ್ನು ಸ್ಥಾಪಿಸುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ಹೊಸ ಕಂಪನಿಗಳನ್ನು ಪ್ರಾರಂಭಿಸುವುದರ ಬದಲಿಗೆ ಈಗಾಗಲೇ ಮುಚ್ಚಿ ಹೋಗಿರುವ ಸಂಸ್ಥೆಗಳನ್ನು ಪುನಾರಂಭಗೊಳಿಸುವುದಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದು ಇಂತಹ 5 ಯುನಿಟ್ ಗಳನ್ನು ಈಗಾಗಲೇ ಪುನಾರಂಭಗೊಳಿಸಲಾಗಿದೆ ದೇಶದಲ್ಲಿ ಗೊಬ್ಬರಗಳಿಗೆ ಒಟ್ಟು 3.4 ಲಕ್ಷ ಮೆಟ್ರಿಕ್ ಟನ್ ನಷ್ಟು ಬೇಡಿಕೆ ಇದೆ. ಈ ಬೇಡಿಕೆಯನ್ನು ಈಗಿರುವ ಕಂಪನಿಗಳೇ ಪೂರೈಸುತ್ತಿವೆ ಆದ್ದರಿಂದ ಹೊಸ ಗೊಬ್ಬರ ಸಂಸ್ಥೆಗಳ ಪ್ರಾರಂಭವಕ್ಕೆ ಚಿಂತನೆ ನಡೆದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.