ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 95.78 ಲಕ್ಷ ವಿಮಾನ ಪ್ರಯಾಣಿಕರೊಂದಿಗೆ ಆರೋಗ್ಯಕರ ಬೆಳವಣಿಗೆ ಪ್ರವೃತ್ತಿಯನ್ನು ದಾಖಲಿಸುತ್ತಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 36.8ರಷ್ಟು ಹೆಚ್ಚಳವಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ತಿಳಿಸಿದೆ. ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 95.78 ಲಕ್ಷ ವಿಮಾನ ಪ್ರಯಾಣಿಕರೊಂದಿಗೆ ಆರೋಗ್ಯಕರ ಬೆಳವಣಿಗೆ ಪ್ರವೃತ್ತಿಯನ್ನು ದಾಖಲಿಸುತ್ತಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 36.8ರಷ್ಟು ಹೆಚ್ಚಳವಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ತಿಳಿಸಿದೆ.
ಜೂನ್ ತಿಂಗಳ ಪ್ರತ್ಯೇಕ ಅಂಕಿಅಂಶ ಪ್ರಕಾರ, ಭಾರತದಾದ್ಯಂತ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ವಾಯು ಸಂಚಾರ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷದ 25.27 ಮಿಲಿಯನ್‌ಗೆ ಹೋಲಿಸಿದರೆ 30.45 ಮಿಲಿಯನ್ ಪ್ರಯಾಣಿಕರೊಂದಿಗೆ ಭಾರತದಲ್ಲಿ ಶೇಕಡಾ 20.5ರಷ್ಟು ಹೆಚ್ಚಳವಾಗಿದೆ ಎಂದು ಅಂಕಿಅಂಶ ಹೇಳುತ್ತದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಚಾರ ಅಂಕಿಅಂಶಗಳಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 7,55,090 ಪ್ರಯಾಣಿಕರು ಸಂಚಾರ ಮಾಡಿದ್ದು, ಕಳೆದ ಮೂರು ತಿಂಗಳಲ್ಲಿ 11,16,385 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಅಂದರೆ ಶೇಕಡಾ 47.8ರಷ್ಟು ಹೆಚ್ಚಳವಾಗಿದೆ. ಅದರಲ್ಲಿ ಜೂನ್ ತಿಂಗಳೊಂದರಲ್ಲೇ 3,81,739 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ.
ದೇಶದೊಳಗೆ ಸಂಚಾರ ನಡೆಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಕೂಡ ಶೇಕಡಾ 35.5ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 62, 46,695 ಪ್ರಯಾಣಿಕರು ಸಂಚಾರ ನಡೆಸಿದ್ದರೆ ಈ ವರ್ಷದ ಜೂನ್‌ವರೆಗೆ 84,61,615 ಪ್ರಯಾಣಿಕರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಚಾರ ಕಂಡಿದ್ದಾರೆ. ಅದೇ ರೀತಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಅಥವಾ ಸಂಚಾರದಲ್ಲಿ ಕೂಡ ಶೇಕಡಾ 16.2ರಷ್ಟು ಹೆಚ್ಚಳವಾಗಿದ್ದು 60 ಸಾವಿರದ 286 ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೊಳ್ಳೆಗಳ ಕಾಟ: ಪ್ರಯಾಣಿಕರ ಪರದಾಟ ಕೇಳುವವರಾರು?
ಹೆಚ್ ಎಎಲ್ ನಲ್ಲಿಯೂ ದಾಖಲೆ ಹಾರಾಟ: ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಏಪ್ರಿಲ್ ತಿಂಗಳಲ್ಲಿ ಗಣ್ಯರು ಮತ್ತು ಅತಿ ಗಣ್ಯ ವ್ಯಕ್ತಿಗಳ ಸಂಚಾರದೊಂದಿಗೆ ಎಚ್‌ಎಎಲ್ ವಿಮಾನ ನಿಲ್ದಾಣವು ಪ್ರಯಾಣಿಕರ ಸಂಖ್ಯೆಯಲ್ಲಿ ಅಭೂತಪೂರ್ವ ಹೆಚ್ಚಳಕ್ಕೆ ಸಾಕ್ಷಿಯಾಗಿದೆ, ಏಪ್ರಿಲ್ ನಿಂದ ಜೂನ್ 2022 ರವರೆಗೆ 361 ಪ್ರಯಾಣಿಕರಿಗೆ ಹೋಲಿಸಿದರೆ, ಈ ವರ್ಷ ಇದೇ ಅವಧಿಯಲ್ಲಿ 5,102 ಪ್ರಯಾಣಿಕರನ್ನು ಕಂಡಿದೆ. ಕಳೆದ ತಿಂಗಳು 1,045 ಮಂದಿ ಹೆಚ್ ಎಎಲ್ ನಲ್ಲಿ ಬಳಸುತ್ತಿದ್ದರೆ, ಕಳೆದ ವರ್ಷ ಜೂನ್‌ನಲ್ಲಿ ಶೂನ್ಯ ಬಳಕೆ ಕಂಡಿದೆ.
ಕರ್ನಾಟಕದ ಇತರ ಭಾಗಗಳಲ್ಲಿ, ರಾಜ್ಯದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾದ ಮಂಗಳೂರು, ಹಿಂದಿನ ಆರ್ಥಿಕ ವರ್ಷಕ್ಕಿಂತ 4,62,590 ಪ್ರಯಾಣಿಕರ ಹಾರಾಟದೊಂದಿಗೆ ಕೇವಲ ಶೇಕಡಾ 1.2ರಷ್ಟು ಹೆಚ್ಚಳವನ್ನು ಕಂಡಿದೆ. ಮಾರ್ಚ್ 10 ರಿಂದ ಮೇ 28 ರವರೆಗೆ ಪ್ರತಿದಿನ 8.5 ಗಂಟೆಗಳ ಕಾಲ ರನ್ ವೇಯನ್ನು ಮರು ಕಾರ್ಪೆಟ್ ಕಾಮಗಾರಿ ಹಿನ್ನೆಲೆಯಲ್ಲಿ ಮುಚ್ಚಿದ್ದರಿಂದ ಈ ಆರ್ಥಿಕ ವರ್ಷದಲ್ಲಿ ಅಷ್ಟೊಂದು ಪ್ರಯಾಣಿಕರ ಸಂಚಾರ ಕಂಡಿಲ್ಲ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 95,809 ಪ್ರಯಾಣಿಕರನ್ನು ಕಂಡಿದ್ದು ಶೇಕಡಾ 40.9ರಷ್ಟು ಹೆಚ್ಚಳವಾಗಿದೆ.
ಮೈಸೂರು ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 48, 411 ಪ್ರಯಾಣಿಕರಿಗೆ ಹೋಲಿಸಿದರೆ ಮೈಸೂರು ಈ ಆರ್ಥಿಕ ವರ್ಷದಲ್ಲಿ 42,396 ಪ್ರಯಾಣಿಕರೊಂದಿಗೆ ಶೇಕಡಾ 11.3ರಷ್ಟು ಕುಸಿತ ಕಂಡಿದ್ದರೆ, ಬೆಳಗಾವಿಯು ಕಳೆದ ವರ್ಷ 1,04,930 ಕ್ಕೆ ಹೋಲಿಸಿದರೆ ಕೇವಲ 63,808 ಪ್ರಯಾಣಿಕರೊಂದಿಗೆ ಶೇಕಡಾ 39.2ರಷ್ಟು ಕುಸಿತ ಕಂಡಿದೆ. ಗೋ ಏರ್ ವಿಮಾನಗಳ ತರಬೇತಿ ಈ ವಿಮಾನ ನಿಲ್ದಾಣಗಳ ಮೇಲೆ ಪರಿಣಾಮ ಬೀರಿದೆ.