Home Uncategorized ಕೆಲವೇ ದಿನಗಳಲ್ಲಿ ಕಿತ್ತು ಬಂದ ಹೊಸದಾದ ರಸ್ತೆ; ನಿವಾಸಿಗಳಿಂದ ಬಿಬಿಎಂಪಿಗೆ ದೂರು

ಕೆಲವೇ ದಿನಗಳಲ್ಲಿ ಕಿತ್ತು ಬಂದ ಹೊಸದಾದ ರಸ್ತೆ; ನಿವಾಸಿಗಳಿಂದ ಬಿಬಿಎಂಪಿಗೆ ದೂರು

6
0
Advertisement
bengaluru

ಎಚ್‌ಎಎಲ್ ವಾರ್ಡ್‌ನ ವರ್ತೂರು, ವೈಟ್‌ಫೀಲ್ಡ್ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸದಾಗಿ ಹಾಕಲಾದ ರಸ್ತೆಗಳು ಕಿತ್ತು ಬಂದಿದ್ದು, ರಸ್ತೆಗುಂಡಿಗಳು ಬಾಯಿ ತೆರೆದು ಅಪಾಯಕ್ಕಾಗಿ ಕಾದು ಕುಳಿತಿರುವಂತೆಯೇ ಈ ಕುರಿತು ಸ್ಥಳೀಯ ನಿವಾಸಿಗಳು ಬಿಬಿಎಂಪಿಗೆ  ದೂರು ನೀಡಿದ್ದಾರೆ. ಬೆಂಗಳೂರು: ಎಚ್‌ಎಎಲ್ ವಾರ್ಡ್‌ನ ವರ್ತೂರು, ವೈಟ್‌ಫೀಲ್ಡ್ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸದಾಗಿ ಹಾಕಲಾದ ರಸ್ತೆಗಳು ಕಿತ್ತು ಬಂದಿದ್ದು, ರಸ್ತೆಗುಂಡಿಗಳು ಬಾಯಿ ತೆರೆದು ಅಪಾಯಕ್ಕಾಗಿ ಕಾದು ಕುಳಿತಿರುವಂತೆಯೇ ಈ ಕುರಿತು ಸ್ಥಳೀಯ ನಿವಾಸಿಗಳು ಬಿಬಿಎಂಪಿಗೆ  ದೂರು ನೀಡಿದ್ದಾರೆ.

ಹೊಸದಾಗಿ ಅಭಿವೃದ್ದಿ ಪಡಿಸಲಾದ ರಸ್ತೆಗಳಲ್ಲಿ ರಸ್ತೆಗುಂಡಿಗಳು ಕಾಣಲಾರಂಭಿಸಿದ್ದು, ಟಾರ್ ಕಿತ್ತುಹೋಗಿದೆ ಎಂದು ನಿವಾಸಿಗಳು ದೂರಿದ್ದಾರೆ. ಸಮಗ್ರ ಅಭಿವೃದ್ಧಿ ಯೋಜನಾ ರಸ್ತೆಯ ಭಾಗವಾಗಿರುವ ವರ್ತೂರು-ಬಳಗೆರೆ ಹಾಗೂ ಬಳಗೆರೆ ಪಾಣತ್ತೂರು ಮುಖ್ಯರಸ್ತೆಯಲ್ಲಿ ಮಳೆ ಬೆನ್ನಲ್ಲೇ ರಸ್ತೆಗುಂಡಿಗಳು  ಅಭಿವೃದ್ಧಿಯಾಗುತ್ತಿವೆ. ಕಳಪೆ ಕಾಮಗಾರಿಯನ್ನು ಆರೋಪಿಸಿ ಬಿಬಿಎಂಪಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಪಾವತಿಯನ್ನು ಬಾಕಿ ಇರಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. 

ಇದನ್ನೂ ಓದಿ: ಬೆಂಗಳೂರು: ಬೈಕ್ ಚಲಾಯಿಸುತ್ತಿದ್ದ ಟೆಕ್ಕಿಗೆ ಒದ್ದು, ಮೂವರಿಂದ ದರೋಡೆ!

ವರ್ತೂರು ಸಮೀಪದ ಆದಿತ್ಯ ಫ್ರಾಂಡೋಸೊ ಅಪಾರ್ಟ್‌ಮೆಂಟ್‌ನ ನಿವಾಸಿಯೊಬ್ಬರು ಮಾತನಾಡಿ, ವಿಧಾನಸಭೆ ಚುನಾವಣೆಗೆ ಮುನ್ನವೇ ಟಾರ್‌ ಹಾಕಲಾಗಿತ್ತು. ಆದರೆ ಕೇವಲ ಎರಡು ತಿಂಗಳಲ್ಲೇ ವರ್ತೂರು ಸಂಪರ್ಕಿಸುವ ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಆದಿತ್ಯ ಫ್ರಾಂಡೋಸೊ ಅವರ ಅಪಾರ್ಟ್‌ಮೆಂಟ್‌ನಿಂದ ಅಕಾಟಕಾ ಗಲೀಜಿ (ಹೆಸರು ಬದಲಾಯಿಸಲಾಗಿದೆ) ಹೇಳಿದರು, “ಗುಂಡಿಗಳನ್ನು ಬೇಗನೆ ಮುಚ್ಚಬೇಕು, ಇಲ್ಲದಿದ್ದರೆ, ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ, ಧೂಳಿನ ಸಂಬಂಧಿತ ಸೋಂಕುಗಳು ಕಂಡುಬರುತ್ತವೆ ಎಂದು ಹೇಳಿದ್ದಾರೆ.

bengaluru bengaluru

ವರ್ತೂರು ರೈಸಿಂಗ್‌ ಸಂಸ್ಥೆಯ ಜಗದೀಶ್‌ ರೆಡ್ಡಿ ಅವರು ಮಾತನಾಡಿ, ‘ರಸ್ತೆ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಹಣ ಪಾವತಿಯಾಗದಂತೆ ಹಾಗೂ ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ವಿಶೇಷ ಆಯುಕ್ತ ತ್ರಿಲೋಕ್‌ ಚಂದ್ರ ಅವರಿಗೆ ಮನವಿ ಸಲ್ಲಿಸಲಾಗುವುದು. “ದೋಷಯುಕ್ತ ಹೊಣೆಗಾರಿಕೆ ಅವಧಿ ಇದೆ. ಸಂಬಂಧಪಟ್ಟ ಗುತ್ತಿಗೆದಾರರು ರಸ್ತೆಗಳನ್ನು ಸರಿಪಡಿಸಬೇಕು. ಸೊರಹುಣ್ಸೆ ಮುಖ್ಯರಸ್ತೆ, ಹಲಸಹಳ್ಳಿ ಮುಖ್ಯರಸ್ತೆ, ಬಳಗೆರೆ-ಪಾಣತ್ತೂರು ರಸ್ತೆ, ಬಳಗೆರೆ-ಗುಂಜೂರು ರಸ್ತೆಗಳಲ್ಲಿ ಇತ್ತೀಚೆಗೆ ಡಾಂಬರೀಕರಣ ಮಾಡಲಾಗಿದೆ’ ಎಂದು ರೆಡ್ಡಿ ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು: ಎನ್‌ಇಪಿ ಬದಲಿಗೆ ಕರ್ನಾಟಕದಲ್ಲಿ ಪ್ರಗತಿಪರ ಶಿಕ್ಷಣ ನೀತಿಗೆ ಸಚಿವರು, ತಜ್ಞರ ಸಲಹೆ!

ಮಹಾದೇವಪುರ ವಲಯದ ಕಾರ್ಯನಿರ್ವಾಹಕ ಇಂಜಿನಿಯರ್ ಮುನಿ ರೆಡ್ಡಿ ಮಾತನಾಡಿ, ಹೊಂಡಗಳ ಬಗ್ಗೆ ಹೆಚ್ಚಿನ ದೂರುಗಳು ಆರ್ಟಿರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಿಂದ ಬಂದಿವೆ ಮತ್ತು ಇದು ಮುಖ್ಯವಾಗಿ ಬಿಡಬ್ಲ್ಯುಎಸ್‌ಎಸ್‌ಬಿಯ (ಜಲಮಂಡಳಿ) ಕಾಮಗಾರಿಗಳಿಂದಾಗಿ ಸಮಸ್ಯೆ ಎದುರಾಗಿದೆ ಎಂದು ಹೇಳಿದ್ದಾರೆ.
 


bengaluru

LEAVE A REPLY

Please enter your comment!
Please enter your name here