Home Uncategorized ಕೊಡಗಿನಲ್ಲಿ ವಿದ್ಯುತ್ ಬಿಲ್ ನೀಡಲು ಬಂದಿದ್ದ ಮೀಟರ್ ರೀಡರ್‌ಗೆ ಚಾಕು ಇರಿತ

ಕೊಡಗಿನಲ್ಲಿ ವಿದ್ಯುತ್ ಬಿಲ್ ನೀಡಲು ಬಂದಿದ್ದ ಮೀಟರ್ ರೀಡರ್‌ಗೆ ಚಾಕು ಇರಿತ

13
0
Advertisement
bengaluru

ಉಚಿತ ವಿದ್ಯುತ್ ಯೋಜನೆ ವಿಚಾರವಾಗಿ ಬಿಲ್ ಕಟ್ಟಲು ನಿರಾಕರಿಸುವ ಸಾರ್ವಜನಿಕರ ಮಧ್ಯೆ ಅಲ್ಲಲ್ಲಿ ಹಲ್ಲೆ ಪ್ರಕರಣಗಳೂ ವರದಿಯಾಗಿದ್ದವು. ಇದೀಗ ವಿದ್ಯುತ್ ಬಿಲ್ ಸರಿ ಇಲ್ಲ ಎಂದು ಆರೋಪಿಸಿ ಬಿಲ್ ಕಲೆಕ್ಟರ್‌ಗೆ ಚಾಕುವಿನಿಂದ ಇರಿದ ಆತಂಕಕಾರಿ ಘಟನೆ ಕೊಡಗಿನ ಮಾದಾಪುರದಲ್ಲಿ ನಡೆದಿದೆ. ಮಡಿಕೇರಿ: ಉಚಿತ ವಿದ್ಯುತ್ ಯೋಜನೆ ವಿಚಾರವಾಗಿ ಬಿಲ್ ಕಟ್ಟಲು ನಿರಾಕರಿಸುವ ಸಾರ್ವಜನಿಕರ ಮಧ್ಯೆ ಅಲ್ಲಲ್ಲಿ ಹಲ್ಲೆ ಪ್ರಕರಣಗಳೂ ವರದಿಯಾಗಿದ್ದವು. ಇದೀಗ ವಿದ್ಯುತ್ ಬಿಲ್ ಸರಿ ಇಲ್ಲ ಎಂದು ಆರೋಪಿಸಿ ಮೀಟರ್ ರೀಡರ್‌ಗೆ ಚಾಕುವಿನಿಂದ ಇರಿದ ಆತಂಕಕಾರಿ ಘಟನೆ ಕೊಡಗಿನ ಮಾದಾಪುರದಲ್ಲಿ ನಡೆದಿದೆ.

ಬಿಲ್ ಕೊಡಲು ಬಂದಿದ್ದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಮೀಟರ್ ರೀಡರ್ ವಿರುದ್ಧ ಗುರುವಾರ ಸಿಟ್ಟಿಗೆದ್ದ ಗ್ರಾಹಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಮೀಟರ್ ರೀಡರ್ ಪ್ರಶಾಂತ್ ಅವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ಐಸಿಯುಗೆ ಸ್ಥಳಾಂತರಿಸಲಾಗಿದೆ.

‘ಹೆಚ್ಚಿನ’ ಮೊತ್ತದ ವಿದ್ಯುತ್ ಬಿಲ್ ನೀಡಿದಾಗ ಗ್ರಾಹಕ ರಿತೇಶ್ ಕೋಪಗೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣದಲ್ಲಿ ಯಾವುದೇ ಬಂಧನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

bengaluru bengaluru

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಬರ್ತಿದೆ, ನಾವು ಕರೆಂಟ್ ಬಿಲ್ ಕಟ್ಟಲ್ಲ: ಬೆಸ್ಕಾಂ ಸಿಬ್ಬಂದಿ ಮುಂದೆ ಪಟ್ಟುಹಿಡಿದ ಗ್ರಾಮಸ್ಥರು!

ಹೆಚ್ಚಿನ ವಿದ್ಯುತ್ ಬಿಲ್ ನೀಡಿದ ಹಿನ್ನೆಲೆ ರಿತೇಶ್ ಬಿಲ್ ಸರಿಯಿಲ್ಲ ಎಂದು ಆರೋಪಿಸಿ ಬಿಲ್ ಕಲೆಕ್ಟರ್ ಪ್ರಶಾಂತ್ ಜತೆಗೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಕೋಪಗೊಂಡು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಪ್ರಶಾಂತ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆ ಮಾಡಿದ ರಿತೇಶ್ ತಲೆಮರೆಸಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


bengaluru

LEAVE A REPLY

Please enter your comment!
Please enter your name here