Home Uncategorized ಡೇಟಿಂಗ್ ಆ್ಯಪ್‌ ಮೂಲಕ ಪ್ರೀತಿಯನ್ನು ಹುಡುಕಿಕೊಂಡು ಹೋಗಿ ವಂಚನೆಗೆ ಬಲಿಯಾದ ಬೆಂಗಳೂರಿನ ಟೆಕ್ಕಿ!

ಡೇಟಿಂಗ್ ಆ್ಯಪ್‌ ಮೂಲಕ ಪ್ರೀತಿಯನ್ನು ಹುಡುಕಿಕೊಂಡು ಹೋಗಿ ವಂಚನೆಗೆ ಬಲಿಯಾದ ಬೆಂಗಳೂರಿನ ಟೆಕ್ಕಿ!

8
0

ಜನಪ್ರಿಯ ಡೇಟಿಂಗ್ ಆ್ಯಪ್‌ನ ಜಾಹೀರಾತಿನಿಂದ ಪ್ರಭಾವಿತರಾದ 30 ವರ್ಷದ ಟೆಕ್ಕಿಯೊಬ್ಬರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದು, ವಂಚನೆಗೆ ಬಲಿಯಾಗುವ ಮೂಲಕ ಭಾರಿ ಬೆಲೆ ತೆತ್ತಿದ್ದಾರೆ. ಮಹಿಳೆ ಸೇರಿದಂತೆ ಇಬ್ಬರು ಸೈಬರ್ ವಂಚಕರು ಟೆಕ್ಕಿಯ ನಗ್ನ ಫೋಟೊಗಳು ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾರೆ. ಬೆಂಗಳೂರು: ಜನಪ್ರಿಯ ಡೇಟಿಂಗ್ ಆ್ಯಪ್‌ನ ಜಾಹೀರಾತಿನಿಂದ ಪ್ರಭಾವಿತರಾದ 30 ವರ್ಷದ ಟೆಕ್ಕಿಯೊಬ್ಬರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದು, ವಂಚನೆಗೆ ಬಲಿಯಾಗುವ ಮೂಲಕ ಭಾರಿ ಬೆಲೆ ತೆತ್ತಿದ್ದಾರೆ. ಮಹಿಳೆ ಸೇರಿದಂತೆ ಇಬ್ಬರು ಸೈಬರ್ ವಂಚಕರು ಟೆಕ್ಕಿಯ ನಗ್ನ ಫೋಟೊಗಳು ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾರೆ.

ಸಂತ್ರಸ್ತ ಪ್ರೀತಿಯನ್ನು ಹುಡುಕುತ್ತಿದ್ದನು. ಹೀಗಾಗಿ ಅವರು ಡೇಟಿಂಗ್ ಅಪ್ಲಿಕೇಶನ್‌ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಅಲ್ಲಿ ಅವರಿಗೆ ಮಹಿಳೆಯೊಬ್ಬಳು ಪರಿಚಯವಾಗಿದ್ದಾಳೆ. ಆಕೆ ಅವರೊಂದಿಗೆ ನಯವಾಗಿ ಮಾತನಾಡಿದ್ದಾಳೆ ಮತ್ತು ತನ್ನ ‘ಸ್ವೀಟ್ ಟಾಕ್’ ಜಾಲದಲ್ಲಿ ಸಿಲುಕಿಸಿದ್ದಾಳೆ. ಈ ಸಂಬಂಧ ಸಂತ್ರಸ್ತ ವೈಟ್‌ಫೀಲ್ಡ್ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾರೆ.

ಸೀಗೇಹಳ್ಳಿ ನಿವಾಸಿಯಾದ ಸಂತ್ರಸ್ತ ಮಂಗಳವಾರ ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ನಿಕಿತಾ (25) ಮತ್ತು ಅರವಿಂದ್ ಶುಕ್ಲಾ (33) ಎಂದು ಗುರುತಿಸಲಾಗಿದೆ.

ಸಂತ್ರಸ್ತ ಆಗಸ್ಟ್ 16ರಂದು ನಿಕಿತಾ ಅವರ ಸಂಪರ್ಕಕ್ಕೆ ಬಂದಿದ್ದರು. ಅವರು ಆಕೆಯ ವಾಟ್ಸಾಪ್ ಸಂಖ್ಯೆ ಮತ್ತು ಆಕೆಯ ಸಾಮಾಜಿಕ ಮಾಧ್ಯಮ ಬಳಕೆದಾರರ ಐಡಿಯನ್ನು ತೆಗೆದುಕೊಂಡಿದ್ದಾರೆ. ಮಹಿಳೆ ವಾಟ್ಸಾಪ್ ವಿಡಿಯೋ ಕರೆಗಳನ್ನು ಮಾಡಲು ಪ್ರಾರಂಭಿಸಿದ್ದಾಳೆ.

ಇದನ್ನೂ ಓದಿ: ಬೆಂಗಳೂರು: ಡೇಟಿಂಗ್ ಆ್ಯಪ್’ನಲ್ಲಿ ಮಹಿಳಾ ಟೆಕ್ಕಿಗೆ ವಂಚನೆ: ಆರೋಪಿ ಬಂಧನ

ಅಂತಹ ಒಂದು ಕರೆ ಸಮಯದಲ್ಲಿ, ಆಕೆ ಸಂತ್ರಸ್ತನು ವಿವಸ್ತ್ರವಾಗುವಂತೆ ಮನವೊಲಿಸಿದ್ದಾಳೆ ಮತ್ತು ನಂತರ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದು, ಆತನ ವಾಟ್ಸಾಪ್‌ಗೆ ಕಳುಹಿಸಿ ಬೆದರಿಕೆಯೊಡ್ಡಿದ್ದಾಳೆ. ಹಣ ಕಳುಹಿಸಲು ವಿಫಲವಾದರೆ ಆತನ ವಿಡಿಯೋವನ್ನು ಆತನ ಸಾಮಾಜಿಕ ಜಾಲತಾಣಗಳ ಹಿಂಬಾಲಕರಿಗೆ ಹಂಚುವುದಾಗಿ ಬೆದರಿಕೆಯೊಡ್ಡಿದ್ದಾಳೆ.

ಬೇರೆ ಬೇರೆ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ನೀಡಿ ಆತನಿಂದ ಹಣ ವಸೂಲಿ ಮಾಡಿದ್ದಾಳೆ. ಉತ್ತರ ಪ್ರದೇಶದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಂದು ಹೇಳಿಕೊಳ್ಳುವ ಶುಕ್ಲಾ ಎಂದು ಗುರುತಿಸಲಾದ ಇನ್ನೊಬ್ಬ ಆರೋಪಿಯಿಂದಲೂ ಸಂತ್ರಸ್ತೆನಿಗೆ ಕರೆ ಬಂದಿದೆ.

ಇದನ್ನೂ ಓದಿ: ಡೇಟಿಂಗ್ ಆ್ಯಪ್‌ ಮೂಲಕ ಪರಿಚಯ: ಯುವಕನನ್ನು ದೋಚಿದ ವೈದ್ಯಕೀಯ ವಿದ್ಯಾರ್ಥಿ, ವಿಧವೆ ಮಹಿಳೆ!

ಈ ತನಿಖೆಯ ಉಸ್ತುವಾರಿ ಅಧಿಕಾರಿಯೊಬ್ಬರು ಮಾತನಾಡಿ, ‘ಸಂತ್ರಸ್ತರು ಸುಮಾರು 2.6 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಸಬ್ಇನ್ಸ್‌ಪೆಕ್ಟರ್ ಎಂದು ಹೇಳಿಕೊಳ್ಳುವ ವ್ಯಕ್ತಿಯಿಂದ ಬೆದರಿಕೆ ಕರೆಗಳು ಬಂದ ನಂತರ, ಅವರು ಪೊಲೀಸರನ್ನು ಸಂಪರ್ಕಿಸಿದರು. ಸಂತ್ರಸ್ತ ಹಣ ಕಳುಹಿಸಿರುವ ಖಾತೆ ಸಂಖ್ಯೆಗಳು ನಮಗೆ ಸಿಕ್ಕಿವೆ. ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದರು.

ಅಪರಾಧ ತನಿಖಾ ವಿಭಾಗದ (ಸಿಐಡಿ) ಸೈಬರ್ ಕ್ರೈಂ ವಿಭಾಗವು ಇತ್ತೀಚೆಗೆ ಅಪರಿಚಿತ ವ್ಯಕ್ತಿಗಳಿಂದ ಬರುವ ಯಾವುದೇ ಫ್ರೆಂಡ್ ರಿಕ್ವೆಸ್ಟ್‌ಗಳಿಗೆ ಪ್ರತಿಕ್ರಿಯಿಸುವ ಮುನ್ನ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ವಿನಂತಿಸಿತ್ತು.

LEAVE A REPLY

Please enter your comment!
Please enter your name here