Home Uncategorized ಧಾರವಾಡ: ಕಳೆದ  9 ವರ್ಷಗಳಲ್ಲಿ ಆಧುನಿಕ ಮೂಲಸೌಕರ್ಯ ನಿರ್ಮಿಸಲು ಪ್ರಯತ್ನ, ಕನೆಕ್ಟಿವಿಟಿ ವಿಚಾರದಲ್ಲಿ ಕರ್ನಾಟಕ ಮೈಲಿಗಲ್ಲು-...

ಧಾರವಾಡ: ಕಳೆದ  9 ವರ್ಷಗಳಲ್ಲಿ ಆಧುನಿಕ ಮೂಲಸೌಕರ್ಯ ನಿರ್ಮಿಸಲು ಪ್ರಯತ್ನ, ಕನೆಕ್ಟಿವಿಟಿ ವಿಚಾರದಲ್ಲಿ ಕರ್ನಾಟಕ ಮೈಲಿಗಲ್ಲು- ಪ್ರಧಾನಿ ಮೋದಿ

22
0

ಪ್ರಧಾನಿ ಮೋದಿ ಧಾರವಾಡದಲ್ಲಿಂದು ನೂತನ ಐಐಟಿ ಕ್ಯಾಂಪಸ್ ಮತ್ತು ವಿಶ್ವದಲ್ಲಿಯೇ ಅತಿ ದೊಡ್ಡದಾದ ರೈಲು ನಿಲ್ದಾಣವನ್ನು ಉದ್ಘಾಟಿಸಿದರು. ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರರು ಉಪಸ್ಥಿತರಿದ್ದರು. ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಧಾರವಾಡದಲ್ಲಿಂದು ನೂತನ ಐಐಟಿ ಕ್ಯಾಂಪಸ್ ಮತ್ತು ವಿಶ್ವದಲ್ಲಿಯೇ ಅತಿ ದೊಡ್ಡದಾದ ರೈಲು ನಿಲ್ದಾಣವನ್ನು ಉದ್ಘಾಟಿಸಿದರು. ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರರು ಉಪಸ್ಥಿತರಿದ್ದರು.

 ನಂತರ ಮಾತನಾಡಿದ ಪ್ರಧಾನಿ ಮೋದಿ, 9 ವರ್ಷದ ಅವಧಿಯಲ್ಲಿ ದೇಶದ ಹಲವೆಡೆ ಐಐಟಿ, ಐಐಎಂ ಸ್ಥಾಪಿಸಲಾಗಿದೆ.  2019ರ ಫೆಬ್ರವರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದ್ದ ಐಐಟಿಯನ್ನು ಕೊರೋನಾ ಸಂಕಷ್ಟ ಕಳೆದ 4 ವರ್ಷಗಳ ನಂತರ ಉದ್ಘಾಟಿಸಲಾಗಿದೆ. ನೂತನ ಐಟಿಟಿ ಕ್ಯಾಂಪಸ್ ನಲ್ಲಿ ಉತ್ತಮ ಶಿಕ್ಷಣದ ಸೌಲಭ್ಯ ಇರಲಿದೆ. ಇದು ಉತ್ತಮ ಭವಿಷ್ಯಕ್ಕಾಗಿ ಯುವ ಮನಸ್ಸುಗಳನ್ನು ಪೋಷಿಸುತ್ತದೆ. ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯೂ ಗುಣಮಟ್ಟದ ಶಿಕ್ಷಣ  ಪಡೆಯಲು ಅವಕಾಶವನ್ನು ಪಡೆಯಬೇಕು ಎಂದ ಅವರು, ವಿಶ್ವಕ್ಕೆ ಭಾರತದ ಡಿಜಿಟಲ್ ತಾಕತ್ತು ಪ್ರದರ್ಶನವಾಗಿದೆ ಎಂದರು.

ಇದನ್ನೂ ನೋಡಿ: ರಾಷ್ಟ್ರದ ಬೆಳವಣಿಗೆ ನೋಡುವುದರಲ್ಲಿ ಯುವಕರು ಅಪಾರ ಹೆಮ್ಮೆ ಪಡುತ್ತಿದ್ದಾರೆ: ಮಂಡ್ಯದಲ್ಲಿ ಪ್ರಧಾನಿ ಮೋದಿ ಭಾಷಣ

Karnataka | PM Narendra Modi dedicated several development projects and the longest railway platform in the world in Hubballi-Dharwad. pic.twitter.com/kcw08B6UIR
— ANI (@ANI) March 12, 2023

ಉತ್ತಮ, ಆಧುನಿಕ ಮೂಲಸೌಕರ್ಯ ಮತ್ತು ಆಧುನಿಕ ಮೂಲಸೌಕರ್ಯಗಳು ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ನಮ್ಮ ಸಮಾಜದ ಪ್ರತಿಯೊಂದು ವರ್ಗಕ್ಕೂ ಅನುಕೂಲ ಮಾಡಿಕೊಡುತ್ತದೆ. ಜನರಿಗೆ ಉತ್ತಮ ರಸ್ತೆ, ಆರೋಗ್ಯ ನೀಡಲು ಆದ್ಯತೆ ನೀಡಲಾಗಿದೆ. ಹಳ್ಳಿಗಳಲ್ಲಿ ಪಿಎಂ ಸಡಕ್ ಯೋಜನೆ ಮೂಲಕ ರಸ್ತೆಗಳ ಅಭಿವೃದ್ಧಿಯಾಗಿದೆ. ಮೂಲ ಸೌಕರ್ಯ ಕ್ಷೇತ್ರಕ್ಕೆ ಆಧುನಿಕತೆಯ ಸ್ಪರ್ಶ ನೀಡಲಾಗಿದೆ. ಕನೆಕ್ಟಿವಿಟಿ  ವಿಚಾರದಲ್ಲಿ ಕರ್ನಾಟಕ ಮೈಲಿಗಲ್ಲು ಸ್ಥಾಪಿಸಿದೆ. ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣ ಪ್ರಪಂಚದ ಅತಿ ದೊಡ್ಡ ನಿಲ್ದಾಣವಾಗಿದೆ. ಇವೆಲ್ಲವೂ ಅಭಿವೃದ್ಧಿ ವಿಚಾರದಲ್ಲಿ ಹೊಸ ದಾಖಲೆಗಳಾಗಿವೆ. ಕರ್ನಾಟಕ ಹೈಟೆಕ್ ಇಂಡಿಯಾದ ಎಂಜಿನ್ ಎಂದು ಕೊಂಡಾಡಿದರು. 

The new campus of IIT in Dharwad will facilitate quality education. It will nurture young minds for a better tomorrow. Every citizen of our country should get an opportunity to access quality education: PM Modi in Hubballi-Dharwad#KarnatakaElections2023 pic.twitter.com/95eDXsQxwo
— ANI (@ANI) March 12, 2023

ಇಡೀ ಕರ್ನಾಟಕದಲ್ಲಿ ಜಯದೇವ ಆಸ್ಪತ್ರೆ ಬಗ್ಗೆ ಭರವಸೆಯಿದೆ.  ಬೆಂಗಳೂರು, ಮೈಸೂರು, ಕಲಬುರಗಿಯಲ್ಲಿದ್ದ ಆಸ್ಪತ್ರೆಯನ್ನು ಈಗ ಹುಬ್ಬಳ್ಳಿಯಲ್ಲಿಯೂ ಸ್ಥಾಪಿಸಲಾಗಿದೆ. ಕರ್ನಾಟಕದಲ್ಲಿ ಮೊದಲಿನಿಂದಲೂ ಆರೋಗ್ಯ ಕ್ಷೇತ್ರಕ್ಕೆ ಮಹತ್ವವಿದೆ. ಧಾರವಾಡ ಜಿಲ್ಲೆ ಕರ್ನಾಟಕ ಮತ್ತು ಭಾರತದ ಪ್ರತಿಬಿಂಬವಾಗಿದ್ದು,  ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಅವಳಿ ನಗರದಲ್ಲಿ ಅಭಿವೃದ್ಧಿ ಪರ್ವ ನಡೆಯಲಿದೆ. ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ ಕೇಂದ್ರ ಸ್ಥಾಪಿಸಿದ್ದೇವೆ.ಧಾರವಾಡದಲ್ಲಿ ಏಳು ಲಕ್ಷ ಕುಟುಂಬಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ರೇಣುಕಾಸಾಗರಿಂದ ನೀರು ತಂದು ಕೊಡುತ್ತಿದ್ದೇವೆ ಎಂದು ತಿಳಿಸಿದರು. 

LEAVE A REPLY

Please enter your comment!
Please enter your name here