Home Uncategorized ನರ್ಸ್‌ಗಳ ಮೇಲೆ ಅವಹೇಳನಕಾರಿ ರೀಲ್ಸ್: 11 ವೈದ್ಯಕೀಯ ವಿದ್ಯಾರ್ಥಿಗಳ ಅಮಾನತು!

ನರ್ಸ್‌ಗಳ ಮೇಲೆ ಅವಹೇಳನಕಾರಿ ರೀಲ್ಸ್: 11 ವೈದ್ಯಕೀಯ ವಿದ್ಯಾರ್ಥಿಗಳ ಅಮಾನತು!

6
0
Advertisement
bengaluru

ನರ್ಸ್‌ಗಳ ಮೇಲೆ ಅವಹೇಳನಕಾರಿಯಾಗಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಕ್ಕಾಗಿ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯೊಂದರ 11 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಹುಬ್ಬಳ್ಳಿ: ನರ್ಸ್‌ಗಳ ಮೇಲೆ ಅವಹೇಳನಕಾರಿಯಾಗಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಕ್ಕಾಗಿ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯೊಂದರ 11 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ.

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್) ಆವರಣದಲ್ಲಿ ಈ ಘಟನೆ ನಡೆದಿದೆ. ಈ ಹಿನ್ನಲೆಯಲ್ಲಿ ಆರೋಪಿ ವಿದ್ಯಾರ್ಥಿಗಳನ್ನು ಒಂದು ವಾರ ಅಮಾನತುಗೊಳಿಸಿ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ಆದೇಶ ಹೊರಡಿಸಿದ್ದಾರೆ.

ನರ್ಸ್‌ಗಳನ್ನು ಕೆಟ್ಟದಾಗಿ ಮತ್ತು ಅವಮಾನಕರ ರೀತಿಯಲ್ಲಿ ಚಿತ್ರಿಸುವ ರೀಲ್‌ಗಳನ್ನು ಅವರ ಅನುಮತಿಯಿಲ್ಲದೆ ಮಾಡಲಾಗಿದೆ. ಜನಪ್ರಿಯ ಕನ್ನಡ ಚಲನಚಿತ್ರ ಹಾಡಿನ ಸಂಗೀತವನ್ನು ಸೇರಿಸಿ ಈ ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಹುಡುಗಿಯರನ್ನು ನಂಬಬಾರದು, ನರ್ಸ್‌ಗಳನ್ನು ನಂಬಬಾರದು ಎಂಬ ಸಾಲುಗಳಿದ್ದು ಈ ಹಾಡಿಗೆ ಹುಡುಗರೂ ನೃತ್ಯ ಸಹ ಮಾಡಿದರು.

#Karnataka Students from various nursing colleges have complained to director of #KIMS hospital in #Hubballi to take action against the reel makers for showing nurses in bad light. The hospital orders inquiry @NewIndianXpress @XpressBengaluru @KannadaPrabha pic.twitter.com/NZVkW41yGo
— Amit Upadhye (@AmitSUpadhye) August 7, 2023

bengaluru bengaluru

ವಿಡಿಯೋ ವೈರಲ್ ಆಗುತ್ತಿದ್ದಂತೆ ಕಿಮ್ಸ್ ನ ನರ್ಸ್ ಗಳು ಆರೋಪಿ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ತೀವ್ರ ಟೀಕೆಗೆ ಗುರಿಯಾದ ನಂತರ, ಅಮಾನತುಗೊಂಡ ವಿದ್ಯಾರ್ಥಿಗಳು ಮತ್ತೊಂದು ವೀಡಿಯೊ ಮಾಡಿ ನರ್ಸ್‌ಗಳನ್ನು ಕ್ಷಮೆಯಾಚಿಸಿದರು. ಅಲ್ಲದೆ ಇದನ್ನು ತಮಾಷೆಗಾಗಿ ಮಾಡಿದ್ದಾಗಿ ಸ್ಪಷ್ಟಪಡಿಸಿದರು.

ಈ ರೀಲ್ಸ್ ರಾಜ್ಯಾದ್ಯಂತ ನರ್ಸ್ ಬಂಧುಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ ಶುಶ್ರೂಷಕರು ವಿಡಿಯೋ ಖಂಡಿಸಿ ಪ್ರತಿಭಟನೆ ನಡೆಸಿದ್ದರು.

ವಿಡಿಯೋವನ್ನು ಖಂಡಿಸಿ ರಾಜ್ಯ ದಾದಿಯರ ಸಂಘವು ಈ ಸಂಬಂಧ ಕಿಮ್ಸ್ ನಿರ್ದೇಶಕರಿಗೆ ಪತ್ರ ಬರೆದು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು.


bengaluru

LEAVE A REPLY

Please enter your comment!
Please enter your name here