Home Uncategorized ಪತ್ರಿಕಾ ದಿನಾಚರಣೆ: ಗಣ್ಯರು, ರಾಜಕೀಯ ನಾಯಕರುಗಳಿಂದ ಪತ್ರಕರ್ತರಿಗೆ, ಪತ್ರಿಕಾ ರಂಗದಲ್ಲಿರುವವರಿಗೆ ಶುಭಾಶಯ

ಪತ್ರಿಕಾ ದಿನಾಚರಣೆ: ಗಣ್ಯರು, ರಾಜಕೀಯ ನಾಯಕರುಗಳಿಂದ ಪತ್ರಕರ್ತರಿಗೆ, ಪತ್ರಿಕಾ ರಂಗದಲ್ಲಿರುವವರಿಗೆ ಶುಭಾಶಯ

11
0
Advertisement
bengaluru

ಕನ್ನಡದ ಮೊಟ್ಟ ಮೊದಲ ಪತ್ರಿಕೆಯಾಗಿ ಹೊರಹೊಮ್ಮಿದ ಮಂಗಳೂರು ಸಮಾಚಾರದ ಮೊದಲ ಸಂಚಿಕೆ ಬಿಡುಗಡೆಗೊಂಡ ದಿನದ ಸ್ಮರಣಾರ್ಥ ಇಂದು ಜುಲೈ 1ರಂದು ಕರ್ನಾಟಕದಲ್ಲಿ ಪತ್ರಿಕಾ ದಿನ ಆಚರಿಸಲಾಗುತ್ತಿದೆ. ಕನ್ನಡದ ಮೊಟ್ಟ ಮೊದಲ ಪತ್ರಿಕೆಯಾಗಿ ಹೊರಹೊಮ್ಮಿದ ಮಂಗಳೂರು ಸಮಾಚಾರದ(Mangaluru Samachara) ಮೊದಲ ಸಂಚಿಕೆ ಬಿಡುಗಡೆಗೊಂಡ ದಿನದ ಸ್ಮರಣಾರ್ಥ ಇಂದು ಜುಲೈ 1ರಂದು ಕರ್ನಾಟಕದಲ್ಲಿ ಪತ್ರಿಕಾ ದಿನ(Press day) ಆಚರಿಸಲಾಗುತ್ತಿದೆ.

1843ರ ಜುಲೈ 1ರಂದು ಕನ್ನಡದ ಮೊಟ್ಟಮೊದಲ ಪತ್ರಿಕೆ ಮಂಗಳೂರು ಸಮಾಚಾರ ಆರಂಭವಾಯಿತು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಸಂವಿಧಾನದ ನಾಲ್ಕನೇ ಅಂಗವಾಗಿ ಮಾಧ್ಯಮಗಳು ಕೆಲಸ ಮಾಡುತ್ತವೆ. 

‘ಮಂಗಳೂರು ಸಮಾಚಾರ’ವೆಂಬ ಹೆಸರಿನಲ್ಲಿ ಪ್ರಾರಂಭಗೊಂಡ ಕನ್ನಡ ವಾರ ಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುತ್ತದೆ.ಇಂದು ಪತ್ರಿಕಾರಂಗ ಬೃಹದಾಕಾರವಾಗಿ ನಡೆದು ಬಂದಿದ್ದರೂ ಡಿಜಿಟಲ್ ಮಾಧ್ಯಮಗಳ ಪ್ರಭಾವದ ಮಧ್ಯೆ ಅನೇಕ ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದೆ. ಪತ್ರಿಕಾ ದಿನಾಚರಣೆಯ ದಿನದಲ್ಲಾದರೂ ಇವುಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗಬೇಕು. 

ಇದನ್ನೂ ಓದಿ: ಇಂದು ಪತ್ರಿಕಾ ದಿನಾಚರಣೆ; ರಾಜ್ಯದೆಲ್ಲೆಡೆ ಆಚರಣೆ

bengaluru bengaluru

ಸರ್ಕಾರದ, ರಾಜಕೀಯ ನಾಯಕರು, ಪ್ರಭಾವಿಗಳ ಹಸ್ತಕ್ಷೇಪವಿಲ್ಲದೆ ಸ್ವತಂತ್ರವಾಗಿ ಮಾಧ್ಯಮಗಳು, ಪತ್ರಿಕೆ ಕಾರ್ಯನಿರ್ವಹಿಸುವಂತಾಗಬೇಕು ಎಂಬುದು ಎಲ್ಲರ ಆಶಯವಾಗಿರುತ್ತದೆ. ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ, ಪತ್ರಿಕಾ ರಂಗದಲ್ಲಿ ಗುರುತಿಸಿಕೊಂಡವರಿಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಆಡಳಿತ, ವಿಪಕ್ಷ ನಾಯಕರು, ಗಣ್ಯರು ಶುಭಾಶಯ ತಿಳಿಸಿದ್ದಾರೆ. 

ಸಮಾಜದ ಕಾವಲು ನಾಯಿಗಳೆಂದು ಕರೆಯಲಾಗುವ ಮಾಧ್ಯಮಗಳಿಗೆ ಸಾಮಾಜಿಕ ಜವಾಬ್ದಾರಿ, ನ್ಯಾಯನಿಷ್ಠುರತೆ ಮತ್ತು ನಿಷ್ಪಕ್ಷಪಾತತನದಿಂದ ಕಾರ್ಯನಿರ್ವಹಿಸುವ ಶಕ್ತಿ ಮತ್ತು ಸ್ವಾತಂತ್ರ್ಯ ಒದಗಿ ಬರಲಿ ಎಂದು ಹಾರೈಸುವೆ.

ನನ್ನ ಎಲ್ಲ ಪತ್ರಕರ್ತ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು.
– ಮುಖ್ಯಮಂತ್ರಿ @siddaramaiah pic.twitter.com/k23YBWR2QP
— CM of Karnataka (@CMofKarnataka) July 1, 2023


bengaluru

LEAVE A REPLY

Please enter your comment!
Please enter your name here