Home Uncategorized ಪ್ರತೀಕ್ ಗೌಡ ಹಿಂದೂ ಯುವತಿಯರ ಅಶ್ಲೀಲ ವೀಡಿಯೊ ಬಿಟ್ಟಾಗ ಬಿಜೆಪಿಯವರು ಎಲ್ಲಿದ್ದರು- ದಿನೇಶ್ ಗುಂಡೂರಾವ್

ಪ್ರತೀಕ್ ಗೌಡ ಹಿಂದೂ ಯುವತಿಯರ ಅಶ್ಲೀಲ ವೀಡಿಯೊ ಬಿಟ್ಟಾಗ ಬಿಜೆಪಿಯವರು ಎಲ್ಲಿದ್ದರು- ದಿನೇಶ್ ಗುಂಡೂರಾವ್

4
0
Advertisement
bengaluru

ಉಡುಪಿಯ ಕಾಲೇಜೊಂದರ ವೀಡಿಯೊ ಚಿತ್ರೀಕರಣ ಪ್ರಕರಣವನ್ನು ಬಿಜೆಪಿ ಉದ್ದೇಶ ಪೂರಕವಾಗಿ ರಾಜಕೀಯಗೊಳಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಆರೋಪಿಸಿದ್ದಾರೆ. ಬೆಂಗಳೂರು: ಉಡುಪಿಯ ಕಾಲೇಜೊಂದರ ವೀಡಿಯೊ ಚಿತ್ರೀಕರಣ ಪ್ರಕರಣವನ್ನು ಬಿಜೆಪಿ ಉದ್ದೇಶ ಪೂರಕವಾಗಿ ರಾಜಕೀಯಗೊಳಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಆರೋಪಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಚಿವ ದಿನೇಶ್‌ಗುಂಡೂರಾವ್, ಈ ಪ್ರಕರಣದಲ್ಲಿ ಹರಿದಾಡುತ್ತಿರುವ ವೀಡಿಯೊ ಕೂಡ ನಕಲಿ,ಪೊಲೀಸರು ವಿದ್ಯಾರ್ಥಿನಿಯರ ಮೊಬೈಲ್, ರಿಟ್ರೀವ್ ಮಾಡಿದ್ದಾರೆ. ಅಲ್ಲಿ ಯಾವುದೇ ವೀಡಿಯೋಗಳಿಲ್ಲ ಮತ್ಯಾಕೆ ಈ ರಾದ್ಧಾಂತ ಎಂದವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಣಿಪುರಕ್ಕೆ ಹೋಗದ ಮಹಿಳಾ ಆಯೋಗ ಇಲ್ಲಿಗೆ ಬರುವಷ್ಟು ಘಟನೆ ಮುಖ್ಯವಾಗಿದೆಯೇ?: ಖುಷ್ಬೂ ಭೇಟಿಗೆ ಗೃಹ ಸಚಿವ ಪರಮೇಶ್ವರ್ ಆಕ್ಷೇಪ

ಬೊಮ್ಮಾಯಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಇಲಿ ಹೋಗಿದ್ದನ್ನೇ ಹುಲಿ ಹೋದಂತೆ ಎಂದು ಬಿಂಬಿಸುತ್ತಿದ್ದಾರೆ. ಉಡುಪಿ ಪ್ರಕರಣದಲ್ಲಿ ಇಷ್ಟು ಬಟ್ಟೆ ಹರಿದುಕೊಳ್ಳುತ್ತಿರುವ ಬಿಜೆಪಿ ನಾಯಕರು ಪ್ರತೀಕ್ ಗೌಡ ಎಂಬ ತೀರ್ಥಹಳ್ಳಿಯ ಎಬಿವಿಪಿ ಘಟಕದ ಅಧ್ಯಕ್ಷ ಹಿಂದೂ ಯುವತಿಯರ ಅಶ್ಲೀಲ ವೀಡಿಯೊ ಬಿಟ್ಟಾಗ ಎಲ್ಲಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

bengaluru bengaluru

3
ಪ್ರತೀಕ್ ಗೌಡ ಎಂಬ ABVPಯವನೊಬ್ಬ ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಹರಿಬಿಟ್ಟಾಗ ಬೊಮ್ಮಾಯಿ ಸೇರಿದಂತೆ BJPಯ ಎಲ್ಲಾ ನಾಯಕರ ನವರಂದ್ರಗಳೂ ಬಂದ್ ಆಗಿತ್ತು.

ಈಗ ಧರ್ಮರಕ್ಷಕರ ಮುಖವಾಡ ತೊಟ್ಟು ಅಖಾಡಕ್ಕಿಳಿದಿದ್ದಾರೆ‌.

ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಹರಿಬಿಟ್ಟ ‘ಪ್ರತೀಕ್’ ನ ಸ್ಥಾನದಲ್ಲಿ ‘ಅತೀಕ್’ ಇದ್ದರೆ ಮಾತ್ರ ಇವರ ಹೋರಾಟವೇ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 26, 2023

ಪ್ರಾಜ್ಞ್ಯರಾದ ಬೊಮ್ಮಾಯಿರವರು ಬಿಜೆಪಿಯ ಟೂಲ್‌ಕಿಟ್‌ನ ಭಾಗವಾಗಬಾರದು. ಉಡುಪಿ ಪ್ರಕರಣ ವಯೋಸಹಜ ಚೇಸ್ಟೆ ಮತ್ತು ಹುಡುಗಾಟ ಎಂಬುದು ಬೊಮ್ಮಾಯಿರವರಿಗೂ ತಿಳಿದಿದೆ. ಆದರೂ ಪಾಪ ಬಿಜೆಪಿಯಲ್ಲಿನ ಅಸ್ಥಿತ್ವಕ್ಕಾಗಿ ಬೊಮ್ಮಾಯಿರವರು ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಕುತೂಹವೆಂದರೆ ಮುಖ್ಯಮಂತ್ರಿಯಾದವರು ವಿಪಕ್ಷ ಸ್ಥಾನ ಪಡೆಯಲು ಇಷ್ಟೆಲ್ಲ ಮಾಡಬೇಕೇ ಎಂದು ದಿನೇಶ್‌ಗುಂಡೂರಾವ್ ಗೇಲಿ ಮಾಡಿದ್ದಾರೆ.

ಈ ಪ್ರಕರಣದಲ್ಲಿ ನಾವು ಪೊಲೀಸರಿಗೆ ಮುಕ್ತ ಹಸ್ತ ಕೊಟ್ಟಿದ್ದೇವೆ. ಹಿಂದೂ ಯುವತಿಕರ ಅಶ್ಲೀಲ ವಿಡಿಯೋ ಹರಿಬಿಟ್ಟ ಪ್ರತೀಕ್‌ಗೌಡ ಎಂಬಾತನನ್ನು ಪೊಲೀಸರು ಒದ್ದು ಹೊರಹಾಕಿದ್ದಾರೆ. ಬಹುಶಃ ಧರ್ಮ ರಕ್ಷಣೆಯ ಗ್ರಾಫ್ ನಿಮಗಿಂತ ನಮ್ಮದೇ ಜಾಸ್ತಿ ಇದೆ ಬೊಮ್ಮಾಯಿರವರೇ ಎಂದು ದಿನೇಶ್‌ಗುಂಡೂರಾವ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.
 


bengaluru

LEAVE A REPLY

Please enter your comment!
Please enter your name here