Home Uncategorized ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹೃದಯಾಘಾತ, ಕುಳಿತಲ್ಲೇ ಸಾವು

ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹೃದಯಾಘಾತ, ಕುಳಿತಲ್ಲೇ ಸಾವು

27
0

ಇತ್ತೀಚಿಗೆ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಬುಧವಾರ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಾವು ಕುಳಿತ ಸೀಟ್ ನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ… ಬೆಂಗಳೂರು: ಇತ್ತೀಚಿಗೆ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಬುಧವಾರ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಾವು ಕುಳಿತ ಸೀಟ್ ನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೇರಳದಿಂದ ಬೆಂಗಳೂರಿಗೆ ಬಂದಿದ್ದ 61 ವರ್ಷದ ಅಬ್ದುಲ್ ಖಾದಿರ್ ಅವರಿಗೆ ಬಸ್ ನಲ್ಲಿಯೇ ಹಾರ್ಟ್‌ ಅಟ್ಯಾಕ್ ಆಗಿದೆ.

ಇದನ್ನು ಓದಿ: ಮಹಿಳಾ ದಿನಾಚರಣೆ: ನಾಳೆ ಬಿಎಂಟಿಸಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

ಅಬ್ದುಲ್ ಖಾದಿರ್ ಅವರು ಯಶವಂತಪುರ ರೈಲ್ವೇ ನಿಲ್ದಾಣದಿಂದ ಮೆಜೆಸ್ಟಿಕ್‌ಗೆ ತೆರಳಲು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಮಂತ್ರಿ ಮಾಲ್ ಬಳಿ ತೆರಳುತ್ತಿದ್ದ ವೇಳೆ ಅಬ್ದುಲ್ ಖಾದಿರ್ ಅವರು ಇದ್ದಕ್ಕಿದ್ದಂತೆ ತಾವು ಕುಳಿತಿದ್ದ ಸೀಟ್ ಮೇಲೆಯೇ ಕುಸಿದು ಬಿದ್ದಿದ್ದಾರೆ. ಅವರಿಗೆ ತೀವ್ರ  ಹೃದಯಾಘಾತವಾಗಿದ್ದು, ಬಸ್ ನಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಆಂಬುಲೆನ್ಸ್‌ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ. 

LEAVE A REPLY

Please enter your comment!
Please enter your name here