Home Uncategorized ಬೆಂಗಳೂರು: 10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ರೇಪ್ ಮಾಡಿ ಕೇಕ್ ತಿನ್ನಿಸಿ ಕಳುಹಿಸಿದ ಪ್ರಿನ್ಸಿಪಾಲ್...

ಬೆಂಗಳೂರು: 10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ರೇಪ್ ಮಾಡಿ ಕೇಕ್ ತಿನ್ನಿಸಿ ಕಳುಹಿಸಿದ ಪ್ರಿನ್ಸಿಪಾಲ್ ಬಂಧನ

7
0
Advertisement
bengaluru

ಶಾಲೆಯಲ್ಲಿಯೇ 10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ವರ್ತೂರು ಸಮೀಪದ ಖಾಸಗಿ ಶಾಲೆಯೊಂದರಲ್ಲಿ ಘಟನೆ ನಡೆದಿದೆ. ಬೆಂಗಳೂರು: ಶಾಲೆಯಲ್ಲಿಯೇ 10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ವರ್ತೂರು ಸಮೀಪದ ಖಾಸಗಿ ಶಾಲೆಯೊಂದರಲ್ಲಿ ಘಟನೆ ನಡೆದಿದೆ.

ಆಗಸ್ಟ್ 3 ರಂದು ಎಂದಿನಂತೆ ವಿದ್ಯಾರ್ಥಿನಿ ಶಾಲೆಗೆ ತೆರಳಿದ್ದಳು. ಶಾಲೆಗೆ ಬಂದ ವಿದ್ಯಾರ್ಥಿನಿಯನ್ನು ಕಂಡ ಕಾಮುಕ ಪ್ರಾಂಶುಪಾಲ ಖಾಲಿ ರೂಮಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮನೆಗೆ ಬಂದ ಮಗಳು ನೋವು ತಾಳದೆ ಒದ್ದಾಡಿದನ್ನು ಕಂಡ ಪೋಷಕರು ಮಗಳ ಬಳಿ ವಿಚಾರಿಸಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ಕೃತ್ಯ ಬಯಲಾಗಿದೆ. ವರ್ತೂರು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಶಾಲೆಯಲ್ಲೇ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಾಂಶುಪಾಲ, ಇಬ್ಬರು ಶಿಕ್ಷಕರು ಸೇರಿ ನಾಲ್ವರ ಬಂಧನ

ಅತ್ಯಾಚಾರಕ್ಕೊಳಗಾದ 10 ವರ್ಷದ ಬಾಲಕಿ ನರದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿದ್ದಳು. ಗುಂಜೂರು ಸಮೀಪದ ಖಾಸಗಿ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ನಿನ್ನೆ ಬೆಳಗ್ಗೆ 8.30 ಕ್ಕೆ ಶಾಲೆಗೆ ತೆರಳಿದ್ದು ಮಧ್ಯಾಹ್ನ 3.30 ಕ್ಕೆ ಶಾಲೆಯಿಂದ ಮನೆಗೆ ವಾಪಸ್ಸಾಗಿದ್ದಾಳೆ. ಮನೆಗೆ ಬಂದ ಮೇಲೆ ತನ್ನ ತಾಯಿಗೆ ಹೊಟ್ಟೆ ನೋವು ಎಂದು ಹೇಳಿಕೊಂಡಿದ್ದಾಳೆ.

bengaluru bengaluru

ಇದನ್ನೂ ಓದಿ: ದಕ್ಷಿಣ ಕನ್ನಡ: 16 ವರ್ಷದ ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ; ಐವರ ಪೈಕಿ ನಾಲ್ವರ ಬಂಧನ

ಸ್ನಾನ ಮಾಡಿಸಿ ಕರೆತರುವಾಗ ರಕ್ತದ ಕಲೆಗಳು ಕಂಡುಬಂದಿದೆ. ಈ ವಿಚಾರವಾಗಿ ಕೇಳಿದಾಗ ಬಾಲಕಿ ಘಟನೆ ವಿವರಿಸಿದ್ದಾಳೆ. ಮೊದಲು ಪ್ರಾಂಶುಪಾಲರ ಕೊಠಡಿಗೆ ಕರೆದುಕೊಂಡು ಹೋದರು. ವಿಶ್ರಾಂತಿ ಪಡೆಯುವಂತೆ ಹೇಳಿ ಅತ್ಯಾಚಾರ ಎಸಗಿದರು. ನಂತರ ಕೇಕ್ ತಿನ್ನಿಸಿ ಕಳುಹಿಸಿದರು ಎಂದು ವಿವರಿಸಿದ್ದಾಳೆ. ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ವರ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


bengaluru

LEAVE A REPLY

Please enter your comment!
Please enter your name here