Home Uncategorized ಮಂಗಳೂರು ಕುಕ್ಕರ್ ಬಾಂಬ್, ಕೊಯಮತ್ತೂರು ಸ್ಫೋಟದ ಹೊಣೆ ಹೊತ್ತ ISIS ಸಂಘಟನೆ!

ಮಂಗಳೂರು ಕುಕ್ಕರ್ ಬಾಂಬ್, ಕೊಯಮತ್ತೂರು ಸ್ಫೋಟದ ಹೊಣೆ ಹೊತ್ತ ISIS ಸಂಘಟನೆ!

16
0
bengaluru

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಹಾಗೂ ತಮಿಳುನಾಡಿನ ಕೊಯಮತ್ತೂರು ಸ್ಫೋಟದ ಹೊಣೆಯನ್ನು ಕೊನೆಗೂ ಐಎಸ್ಐಎಸ್ ಉಗ್ರ ಸಂಘಟನೆ ಹೊತ್ತಿದೆ.  ಮಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಹಾಗೂ ತಮಿಳುನಾಡಿನ ಕೊಯಮತ್ತೂರು ಸ್ಫೋಟದ ಹೊಣೆಯನ್ನು ಕೊನೆಗೂ ಐಎಸ್ಐಎಸ್ ಉಗ್ರ ಸಂಘಟನೆ ಹೊತ್ತಿದೆ. 

ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿ ಮಾಡುವ ಉದ್ದೇಶದಿಂದ ಶಂಕಿತ ಉಗ್ರ ಶಾರೀಕ್ ಕುಕ್ಕರ್ ನಲ್ಲಿ ಬಾಂಬ್ ಇಟ್ಟುಕೊಂಡು ಹೋಗುತ್ತಿದ್ದಾಗ ಕಂಕನಾಡಿ ಬಳಿ ಅಚಾನಕ್ ಆಗಿ ಸ್ಫೋಟವಾಗಿ ದೊಡ್ಡ ಅನಾಹುತ ತಪ್ಪಿತ್ತು. ಇನ್ನು ತಮಿಳುನಾಡಿನ ಕೊಯಮತ್ತೂರು ಬಳಿ ಸಹ ಸ್ಫೋಟ ನಡೆಸಿತ್ತು. ಇಸ್ಲಾಮಿಕ್​ ಸ್ಟೇಟ್​​​​ ಸಂಘಟನೆಯ ಸಹ ಸಂಘಟನೆಯಾದ ಖೊರಾಸನ್​ ಪ್ರಾಂತ್ಯದ ಇಸ್ಲಾಮಿಕ್​ ಸ್ಟೇಟ್​ ಉಗ್ರ ಸಂಘಟನೆ (ಐಎಸ್​ಕೆಪಿ) ಈ ದಾಳಿಗಳ ಹೊಣೆ ಹೊತ್ತಿದೆ.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಎನ್ಐಎಯಿಂದ ಮೊತ್ತೋರ್ವ ಆರೋಪಿ ಬಂಧನ

ಮಂಗಳೂರಿನ ಕದ್ರಿಯಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಲು ನಮ್ಮ ಸಹೋದರ ಪ್ರಯತ್ನಿಸಿದ್ದನು. ಆದರೆ ಅದು ವಿಫಲವಾಗಿದೆ. ಆದರೆ ನಮ್ಮ ಕಾರ್ಯಾಚರಣೆಗಳನ್ನು ನಿಲ್ಲಿಸುವುದಿಲ್ಲ. ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ಣು ತಪ್ಪಿಸಿ ದಾಳಿ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ. 

2022ರ ನವೆಂಬರ್ 9ರಂದು ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿದ್ದು ಇದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. 

LEAVE A REPLY

Please enter your comment!
Please enter your name here