Home Uncategorized ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ: ಬಿಬಿಎಂಪಿಯಿಂದ ಪುನರ್ ಆರಂಭ

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ: ಬಿಬಿಎಂಪಿಯಿಂದ ಪುನರ್ ಆರಂಭ

35
0

ಭಾನುವಾರ ಮತ್ತು ಸೋಮವಾರ ನಗರದಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ವಿಧಾನಸಭೆ ಚುನಾವಣೆಯಿಂದಾಗಿ ಸ್ಥಗಿತಗೊಂಡಿದ್ದ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಪುನರಾರಂಭಿಸಿದೆ. ಬೆಂಗಳೂರು: ಭಾನುವಾರ ಮತ್ತು ಸೋಮವಾರ ನಗರದಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ವಿಧಾನಸಭೆ ಚುನಾವಣೆಯಿಂದಾಗಿ ಸ್ಥಗಿತಗೊಂಡಿದ್ದ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಪುನರಾರಂಭಿಸಿದೆ. ಒತ್ತುವರಿ ತೆರವಿಗೆ ಕಂದಾಯ ಇಲಾಖೆ ಈಗಾಗಲೇ 68 ಆದೇಶಗಳನ್ನು ಹೊರಡಿಸಿದೆ.

ಕೆಆರ್ ಪುರಂ ಮತ್ತು ಮಹದೇವಪುರ ಕ್ಷೇತ್ರಗಳಿಗೆ ಹೆಚ್ಚಿನ ಆದೇಶ ನೀಡಲಾಗಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ”ನ್ಯಾಯಾಲಯದ ಪ್ರಕರಣಗಳಿಂದಾಗಿ ಅತಿಕ್ರಮಣ ತೆರವು ಕಾಯಾರ್ಚರಣೆಯಲ್ಲಿ ಏರುಪೇರು ಆಗುತ್ತಿದೆ. ಮತದಾರರು ವಿಳಾಸದಿಂದ ಸ್ಥಳಾಂತರಗೊಂಡು ಮತದಾನ ಗೊಂದಲಕ್ಕೆ ಕಾರಣವಾಗಬಹುದೆಂಬ ಕಾರಣಕ್ಕೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಏಪ್ರಿಲ್‌ನಲ್ಲಿ ಕಾರ್ಯಾಚರಣೆ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಈಗ ಚುನಾವಣೆ ಮುಗಿದಿದ್ದು, ಕಾರ್ಯಾಚರಣೆ ಆರಂಭಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಇದನ್ನೂ ಓದಿ: ಮಳೆ ಅವಾಂತರಕ್ಕೆ ನಗರದಲ್ಲಿ ಇಬ್ಬರು ಬಲಿ: ಎಚ್ಚೆತ್ತ ಬಿಬಿಎಂಪಿ, ಹೊಸ ಯೋಜನೆಗಳ ಕೈಗೆತ್ತಿಕೊಳ್ಳಲು ಮುಂದು!

 ಯಂತ್ರೋಪಕರಣಗಳು ಮತ್ತು ಕೆಲಸಗಾರರೊಂದಿಗೆ ಸಿದ್ಧರಾಗಿರಲು ನಮಗೆ ಸೂಚನೆ ನೀಡಲಾಗಿದೆ. ಇಂದು ಬೆಳಗ್ಗೆ ಪಟ್ಟಿ ಹಾಗೂ ನಿವೇಶನ ನೀಡಲಾಗಿದೆ ಎಂದು ಮಹದೇವಪುರ ವಲಯ ಮುಖ್ಯ ಎಂಜಿನಿಯರ್ ಎಂ.ಲೋಕೇಶ್  ತಿಳಿಸಿದ್ದಾರೆ.

ಆದಾಗ್ಯೂ, ಪ್ರವಾಹದಿಂದ ಸಂಕಷ್ಟಕ್ಕೀಡಾದ ನಿವಾಸಿಗಳು ಬಿಬಿಎಂಪಿಯ ಬದ್ಧತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. “ಕಳೆದ ಬಾರಿ, ಮಳೆಯ ಸಮಯದಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಹೋಗಿದ್ದರು ಮತ್ತು ನೂರಾರು ಮನೆಗಳು ಜಲಾವೃತವಾಗಿದ್ದವು. ಭಾನುವಾರ, ಮಳೆ ಸಂಬಂಧಿತ ಎರಡು ಸಾವುಗಳು ವರದಿಯಾಗಿವೆ. ಪಾಲಿಕೆಯವರು ಶ್ರೀಮಂತರು ಮತ್ತು ಪ್ರಭಾವಶಾಲಿಗಳನ್ನು ಉಳಿಸುತ್ತಾರೆ. ಬಿಬಿಎಂಪಿ ಹಾಗೂ ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ಮೂಲಸೌಕರ್ಯ ಹಾಳಾಗಿದೆ ಎಂದು ಎಎಪಿ ಮಹದೇವಪುರ ಅಧ್ಯಕ್ಷ ಅಶೋಕ್ ಮೃತ್ಯುಂಜಯ ಹೇಳಿದರು.

LEAVE A REPLY

Please enter your comment!
Please enter your name here