Home Uncategorized ರಾಯಚೂರು ಜಿಲ್ಲೆಯ ಚುನಾವಣಾ ಐಕಾನ್ ಆಗಿ ನಿರ್ದೇಶಕ ಎಸ್ಎಸ್ ರಾಜಮೌಳಿ ಆಯ್ಕೆ

ರಾಯಚೂರು ಜಿಲ್ಲೆಯ ಚುನಾವಣಾ ಐಕಾನ್ ಆಗಿ ನಿರ್ದೇಶಕ ಎಸ್ಎಸ್ ರಾಜಮೌಳಿ ಆಯ್ಕೆ

13
0
bengaluru

ರಾಯಚೂರು ಜಿಲ್ಲೆಗೆ ಚುನಾವಣಾ ರಾಯಭಾರಿಯಾಗಿ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ. ರಾಯಚೂರು: ರಾಯಚೂರು ಜಿಲ್ಲೆಗೆ ಚುನಾವಣಾ ರಾಯಭಾರಿಯಾಗಿ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.

ಮೂಲತಃ ರಾಯಚೂರಿನ ಮಾನ್ವಿ ತಾಲೂಕಿನವರಾದ ರಾಜಮೌಳಿ ಅವರು ಮತದಾನ ಜಾಗೃತಿ ಕುರಿತು ಚುನಾವಣಾ ಸ್ವೀಪ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ವೀಡಿಯೋ ಕ್ಲಿಪ್‍ಗಳ ಮೂಲಕ ಜಾಗೃತಿ ಮೂಡಿಸುತ್ತಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಮತದಾರರನ್ನು ಸೆಳೆಯಲು ಚಿತ್ರದುರ್ಗದ ಮತಗಟ್ಟೆಗಳಲ್ಲಿ ಅಳವಡಿಸಿರುವ ವಿನೂತನ ವಿಧಾನ ‘ವಾರ್ಲಿ ಕಲೆ’

ಚುನಾವಣಾ ಆಯೋಗ ಸೂಚಿಸಿದಂತೆ ರಾಜಮೌಳಿ ಅವರು ವಿಡಿಯೋ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಇದರಲ್ಲಿ ಯಾವುದೇ ಪಕ್ಷಗಳಿಗೆ ಬೆಂಬಲಿಸುವಂತಹ ಸಂದೇಶ ಇರುವುದಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ಕ್ರೀನ್ ರೈಟರ್ ಹಾಗೂ ಚಿತ್ರಸಂಭಾಷಣೆಗಾರರನ್ನು ಆಯ್ಕೆ ಮಾಡಲಾಗಿದೆ. 

LEAVE A REPLY

Please enter your comment!
Please enter your name here