Home Uncategorized ‘ರಾ ರಾ ರೆಡ್ಡಿ ಐ ಆ್ಯಮ್ ರೆಡಿ’ ಕೋರಿಯನ್​ ಅತ್ತೆಯೊಂದಿಗೆ ಭಾರತೀಯ​ ಸೊಸೆಯ ನೃತ್ಯದ ವಿಡಿಯೋ...

‘ರಾ ರಾ ರೆಡ್ಡಿ ಐ ಆ್ಯಮ್ ರೆಡಿ’ ಕೋರಿಯನ್​ ಅತ್ತೆಯೊಂದಿಗೆ ಭಾರತೀಯ​ ಸೊಸೆಯ ನೃತ್ಯದ ವಿಡಿಯೋ ವೈರಲ್

3
0
bengaluru

Viral Video : ಕಲೆಗೆ ಗಡಿ, ಭಾಷೆ, ಸಂಸ್ಕೃತಿಯ ಹಂಗಿಲ್ಲ. ಎಲ್ಲವನ್ನೂ ಮೀರಿ ಇದು ಸೆಳೆಯುತ್ತದೆ. ಹಾಗೆಯೇ ಸಂಬಂಧಗಳೂ ಕೂಡ. ಇದೀಗ ತನ್ನ ಕೋರಿಯನ್ ಅತ್ತೆಯೊಂದಿಗೆ ಭಾರತೀಯ ಸೊಸೆ ತೆಲುಗು ಸಿನೆಮಾದ ಈ ಜನಪ್ರಿಯ ಹಾಡಿಗೆ ನೃತ್ಯ ಮಾಡಿದ್ದಾಳೆ. ಕೋರಿಯಾದ ಸಾಂಪ್ರದಾಯಿಕ ಉಡುಗೆಯಲ್ಲಿ ಇವರಿಬ್ಬರೂ ಅತ್ಯಾಕರ್ಷಕವಾಗಿ ಕಾಣುತ್ತಿದ್ಧಾರೆ. ಇವರಿಬ್ಬರ ಉತ್ಸಾಹ ಕಂಡು ನೆಟ್ಟಿಗರು ಭಲೇ ಎನ್ನುತ್ತಿದ್ದಾರೆ.  ​

 

View this post on Instagram

 

A post shared by Dasom Her (@luna_yogini_official)

bengaluru

ಹ್ಯಾನ್​ಬ್ಯಾಕ್​ ಇದು ಕೋರಿಯನ್ ಮಹಿಳೆಯರ ಸಾಂಪ್ರದಾಯಿಕ ಉಡುಗೆ. ಕೋರಿಯನ್ ಅರಮನೆಯ ಹೊರಗೆ ಇವರಿಬ್ಬರೂ ನರ್ತಿಸಿದ್ದಾರೆ. ಸೊಸೆ ಗುಲಾಬಿ ಬಣ್ಣದ ಹ್ಯಾನ್​ಬ್ಯಾಕ್​ ಧರಿಸಿದ್ದರೆ, ಅತ್ತೆ ನೀಲಿ ಬಣ್ಣದ ಹ್ಯಾನ್​ಬ್ಯಾಕ್​ ಧರಿಸಿದ್ದಾಳೆ. ರಾ ರಾ ರೆಡ್ಡಿ, ಐ ಆ್ಯಮ್​ ರೆಡಿ ಹಾಡಿಗೆ ಇವರಿಬ್ಬರೂ ಉತ್ಸಾಹದಿಂದ ಕುಣಿದ ರೀತಿ ನೆಟ್ಟಿಗರನ್ನು ಬೆರಗಾಗಿಸಿದೆ.

ಈ ಜಗತ್ತಿನಲ್ಲಿ ಎಷ್ಟೇ ಕತ್ತಲು ತುಂಬಿದ್ದರೂ ಪ್ರೀತಿ ಅದನ್ನು ಗೆಲ್ಲುತ್ತದೆ, ಸದಾ ಪ್ರೀತಿಸಿ! ಎಂಬ ಒಕ್ಕಣೆಯೊಂದಿಗೆ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 72,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಈ ಪ್ರೀತಿಗೆ ಧನ್ಯವಾದ ಎಂದಿದ್ದಾರೆ ಒಬ್ಬರು. ಈ ವಿಡಿಯೋ ನನ್ನಲ್ಲಿ ಸಾಕಷ್ಟು ಸಕಾರಾತ್ಮಕ ಶಕ್ತಿಯನ್ನು ಹುಟ್ಟುಹಾಕುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ಓಹ್​ ನೀವು ನನ್ನ ಮಾತೃಭಾಷೆಯ ಹಾಡಿಗೆ ನರ್ತಿಸಿದ್ದೀರಿ, ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ ಮಗದೊಬ್ಬರು.

ಹೌದು, ನೃತ್ಯ ಮೈಮನಸ್ಸನ್ನು ಅರಳಿಸುತ್ತದೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here