Home Uncategorized ವಿಜಯಪುರ: ಕಾರು ಅಪಘಾತದಲ್ಲಿ ಕೇಂದ್ರ ಸಚಿವೆ ಸಾಧ್ವಿ ನಿರಂಜನಾ‌ ಜ್ಯೋತಿಗೆ ಗಾಯ

ವಿಜಯಪುರ: ಕಾರು ಅಪಘಾತದಲ್ಲಿ ಕೇಂದ್ರ ಸಚಿವೆ ಸಾಧ್ವಿ ನಿರಂಜನಾ‌ ಜ್ಯೋತಿಗೆ ಗಾಯ

15
0
bengaluru

ಕೇಂದ್ರ ಸಚಿವೆ ಸಾಧ್ವಿ ನಿರಂಜನಾ‌ ಜ್ಯೋತಿ ಅವರು ಪ್ರಯಾಣಿಸುತ್ತಿದ್ದ ಕಾರು ಗುರುವಾರ ವಿಜಯಪುರ ನಗರದ ಹೊರವಲಯದ ಜುಮನಾಳ ಗ್ರಾಮದ ಸಮೀಪ ಅಪಘಾತಕ್ಕಿಡಾಗಿದ್ದು,. ಸಚಿವೆ ಹಾಗೂ ಕಾರು ಚಾಲಕ ಗಾಯಗೊಂಡಿದ್ದಾರೆ… ವಿಜಯಪುರ: ಕೇಂದ್ರ ಸಚಿವೆ ಸಾಧ್ವಿ ನಿರಂಜನಾ‌ ಜ್ಯೋತಿ ಅವರು ಪ್ರಯಾಣಿಸುತ್ತಿದ್ದ ಕಾರು ಗುರುವಾರ ವಿಜಯಪುರ ನಗರದ ಹೊರವಲಯದ ಜುಮನಾಳ ಗ್ರಾಮದ ಸಮೀಪ ಅಪಘಾತಕ್ಕಿಡಾಗಿದ್ದು,. ಸಚಿವೆ ಹಾಗೂ ಕಾರು ಚಾಲಕ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಅಪಘಾತ ಸಂಭವಿಸಿದ್ದು, ಕೇಂದ್ರ ಸಚಿವರ ಇನ್ನೋವಾ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸಚಿವರು ಮತ್ತು ಅವರ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ.

ಇದನ್ನು ಓದಿ: ರಸ್ತೆ ಅಪಘಾತ: ಚಿಕ್ಕಪ್ಪನ ಅಂತ್ಯಸಂಸ್ಕಾರಕ್ಕೆ ಬಂದವರಿಗೆ ಊಟ ತರಲು ಹೋಗಿದ್ದ 9ನೇ ತರಗತಿ ಬಾಲಕ ಸಾವು

ಟ್ರಕ್ ಚಾಲಕ ಪಾನಮತ್ತನಾಗಿದ್ದ ಎನ್ನಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಭಾರತೀಯ ಜನತಾ ಪಕ್ಷ(ಬಿಜೆಪಿ) ಇಂದು ವಿಜಯಪುರದಲ್ಲಿ ಆಯೋಜಿಸಿದ್ದ ಮಹಿಳಾ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲು ಸಾಧ್ವಿ ನಿರಂಜನಾ‌ ಜ್ಯೋತಿ ಅವರು ಆಗಮಿಸಿದ್ದರು.

ಅಪಘಾತದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜ್ಯೋತಿ ಅವರು, “ದೇವರ ದಯೆಯಿಂದ ನಾನು ಸುರಕ್ಷಿತವಾಗಿದ್ದೇನೆ. ಕಾರು ಚಾಲಕನ ಎಚ್ಚರಿಕೆಯು ಟ್ರಕ್ ಅಡಿಯಲ್ಲಿ ಸಿಲುಕದಂತೆ ನಮ್ಮನ್ನು ರಕ್ಷಿಸಿದೆ. ನಮಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದಿದ್ದಾರೆ.

LEAVE A REPLY

Please enter your comment!
Please enter your name here