Home Uncategorized ವಿಜಯಪುರ: ಬಟ್ಟೆ ತೊಳೆಯಲು ಹೋಗಿದ್ದಾಗ ಭೀಮಾ ನದಿಯಲ್ಲಿ ಮುಳುಗಿ ತಾಯಿ, ಮಕ್ಕಳಿಬ್ಬರ ದುರ್ಮರಣ

ವಿಜಯಪುರ: ಬಟ್ಟೆ ತೊಳೆಯಲು ಹೋಗಿದ್ದಾಗ ಭೀಮಾ ನದಿಯಲ್ಲಿ ಮುಳುಗಿ ತಾಯಿ, ಮಕ್ಕಳಿಬ್ಬರ ದುರ್ಮರಣ

10
0
Advertisement
bengaluru

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಬಳಿಯ ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ನದಿಯಲ್ಲಿ ಮುಳುಗಿ ತಾಯಿ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ. ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಬಳಿಯ ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ನದಿಯಲ್ಲಿ ಮುಳುಗಿ ತಾಯಿ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ. 

ಮೃತರನ್ನು 38 ವರ್ಷದ ಗೀತಾ ಹೊನ್ನೂರ, ಮಕ್ಕಳಾದ 12 ವರ್ಷದ ಶೋಭಿತಾ, 10 ವರ್ಷದ ವಾಸುದೇವ ಎಂದು ಗುರುತಿಸಲಾಗಿದೆ. ಬಟ್ಟೆ ತೊಳೆಯಲೆಂದು ಗೀತಾ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಭೀಮಾ ನದಿ ತೀರಕ್ಕೆ ಹೋಗಿದ್ದರು.

ಇದನ್ನೂ ಓದಿ: ಕಾರವಾರ: ನದಿಗೆ ಮಗ, ಪತ್ನಿಯನ್ನು ತಳ್ಳಿ ಬಳಿಕ ನೇಣು ಬಿಗಿದುಕೊಂಡು ಉದ್ಯಮಿ ಆತ್ಮಹತ್ಯೆ! 

ಬಟ್ಟೆ ತೊಳೆಯುವಾಗ ವಾಸುದೇವ ನೀರಿಗೆ ಇಳಿದಿದ್ದನು. ಆದರೆ ನೀರಿನ ಸೆಳೆತಕ್ಕೆ ಆತ ನೀರಿನಲ್ಲಿ ಮುಳುಗಿದ್ದಾನೆ. ಈ ವೇಳೆ ಅಲ್ಲೆ ಇದ್ದ ಶೋಭಿತಾ ತಮ್ಮನನ್ನು ರಕ್ಷಿಸಲು ಮುಂದಾಗಿದ್ದು ಆಕೆ ಸಹ ನೀರಿನಲ್ಲಿ ಮುಳುಗಿದ್ದಾಳೆ. 

bengaluru bengaluru

ಮಕ್ಕಳಿಬ್ಬರೂ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಗೀತಾ ಅವರನ್ನು ರಕ್ಷಿಸಲು ನೀರಿಗೆ ಇಳಿದಿದ್ದಾಳೆ. ಆದರೆ ಈಜು ಗೊತ್ತಿರದ ಕಾರಣ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಂಡಿ ಗ್ರಾಮೀಣ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


bengaluru

LEAVE A REPLY

Please enter your comment!
Please enter your name here