Home Uncategorized ಶಕ್ತಿ ಯೋಜನೆಯಿಂದ ನಷ್ಟ: ಖಾಸಗಿ ಸಾರಿಗೆ ಒಕ್ಕೂಟದೊಂದಿಗೆ ರಾಮಲಿಂಗಾರೆಡ್ಡಿ ಇಂದು 2ನೇ ಸಭೆ!

ಶಕ್ತಿ ಯೋಜನೆಯಿಂದ ನಷ್ಟ: ಖಾಸಗಿ ಸಾರಿಗೆ ಒಕ್ಕೂಟದೊಂದಿಗೆ ರಾಮಲಿಂಗಾರೆಡ್ಡಿ ಇಂದು 2ನೇ ಸಭೆ!

8
0
Advertisement
bengaluru

ಖಾಸಗಿ ಬಸ್, ಆಟೋ, ಕ್ಯಾಬ್ ನಿರ್ವಾಹಕರ ಪ್ರತಿನಿಧಿಗಳೊಂದಿಗೆ ನಡೆಸಿದ ಮೊದಲ ಸಭೆ ಒಮ್ಮತಕ್ಕೆ ಬರದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದು ಎರಡನೇ ಸಭೆ ಕರೆದಿದ್ದಾರೆ. ಬೆಂಗಳೂರು: ಖಾಸಗಿ ಬಸ್, ಆಟೋ, ಕ್ಯಾಬ್ ನಿರ್ವಾಹಕರ ಪ್ರತಿನಿಧಿಗಳೊಂದಿಗೆ ನಡೆಸಿದ ಮೊದಲ ಸಭೆ ಒಮ್ಮತಕ್ಕೆ ಬರದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದು ಎರಡನೇ ಸಭೆ ಕರೆದಿದ್ದಾರೆ.

ಶಕ್ತಿ ಯೋಜನೆ ಜಾರಿಯಾದ ನಂತರ ತಮಗಾಗುತ್ತಿರುವ ಆದಾಯ ನಷ್ಟವನ್ನು ಉಲ್ಲೇಖಿಸಿ ಖಾಸಗಿ ಸಾರಿಗೆ ಸಂಸ್ಥೆಗಳು ಜುಲೈ 27 ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದವು. ಆದರೆ ಜುಲೈ 24 ರಂದು ನಡೆದ ಮೊದಲ ಸಭೆಯ ನಂತರ ರೆಡ್ಡಿ ಅವರು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದರಿಂದ ಮುಷ್ಕರವನ್ನು ತಡೆಹಿಡಿಯಲಾಗಿತ್ತು. 

ಆಟೋ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳು ಕ್ಯಾಬ್ ಮತ್ತು ಬಸ್ ನಿರ್ವಾಹಕರು ಎದುರಿಸುತ್ತಿರುವ ಸಮಸ್ಯೆಗಳಿಗಿಂತ ಭಿನ್ನವಾಗಿರುವುದರಿಂದ ಎಲ್ಲಾ ಯೂನಿಯನ್‌ಗಳು ಒಟ್ಟಾಗಿ ಭೇಟಿಯಾದ ಮೊದಲ ಸಭೆಯು ಖಾಸಗಿ ಸಾರಿಗೆ ಒಕ್ಕೂಟಗಳ ನಡುವಿನ ಜಗಳದಿಂದ ಕೊನೆಗೊಂಡಿತ್ತು.

ಇದನ್ನು ಗಮನದಲ್ಲಿಟ್ಟುಕೊಂಡಿರುವ ರೆಡ್ಡಿ ಈ ಬಾರಿ ಎರಡನೇ ಸಭೆಯನ್ನು ಪ್ರತಿಯೊಬ್ಬರ ಜೊತೆ ಪ್ರತ್ಯೇಕವಾಗಿ ಕರೆದಿದ್ದಾರೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ಆಟೋ ಚಾಲಕರು ಮತ್ತು ಮಾಲೀಕರನ್ನು ಭೇಟಿ ಮಾಡಲಿದ್ದಾರೆ, ನಂತರ ಕ್ಯಾಬ್ ನಿರ್ವಾಹಕರು (ಮಧ್ಯಾಹ್ನ 12 ರಿಂದ ಮಧ್ಯಾಹ್ನ 1 ರವರೆಗೆ), ಮತ್ತು ಮಧ್ಯಾಹ್ನ 1 ರಿಂದ 2 ರವರೆಗೆ ಅವರು ಖಾಸಗಿ ಬಸ್ ನಿರ್ವಾಹಕರೊಂದಿಗೆ ಸಭೆ ನಡೆಸಲಿದ್ದಾರೆ. 

bengaluru bengaluru

ಇದನ್ನೂ ಓದಿ: ರಾಮಲಿಂಗಾ ರೆಡ್ಡಿ ಸಭೆ ಸಕ್ಸಸ್: ಖಾಸಗಿ ಸಾರಿಗೆ ಒಕ್ಕೂಟ ನೀಡಿದ್ದ ಜುಲೈ 27ರ ಬಂದ್ ಕರೆ ವಾಪಸ್; ಬೇಡಿಕೆ ಈಡೇರಿಕೆಗೆ ಆ.10ರ ಗಡುವು!

ಖಾಸಗಿ ಬಸ್ ನಿರ್ವಾಹಕರ ಪ್ರಮುಖ ಬೇಡಿಕೆಯೆಂದರೆ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೆ ವಿಸ್ತರಿಸುವುದು ಮತ್ತು ಮಹಿಳಾ ಪ್ರಯಾಣಿಕರ ಟಿಕೆಟ್ ದರವನ್ನು ಆಧರಿಸಿ ಬಸ್ ನಿಗಮಗಳು ಹೇಗೆ ಪಾವತಿಸುತ್ತಿವೆಯೋ ಹಾಗೆಯೇ ಸರ್ಕಾರದಿಂದ ಪಾವತಿಸಬೇಕು ಎಂಬುದಾಗಿದೆ. ಶಕ್ತಿ ಯೋಜನೆಯಿಂದ ಆದಾಯದಲ್ಲಿ ನಷ್ಟವಾಗಿದ್ದು, ಆಟೋಗಳಿಗೆ ಮಾಸಿಕ 10,000 ರೂ.ಗಳನ್ನು ಪಾವತಿಸಬೇಕೆಂದು ಆಟೋ ಒಕ್ಕೂಟಗಳು ಸರ್ಕಾರವನ್ನು ಒತ್ತಾಯಿಸಿವೆ.

ಫೆಡರೇಶನ್ ಆಫ್ ಕರ್ನಾಟಕ ಪ್ರೈವೇಟ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ಸ್ ಎಂಬ ಬ್ಯಾನರ್ ಅಡಿಯಲ್ಲಿ ಖಾಸಗಿ ಸಾರಿಗೆ ಒಕ್ಕೂಟಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಆಗಸ್ಟ್ 10 ರವರೆಗೆ ಸರ್ಕಾರಕ್ಕೆ ಅಂತಿಮ ಸೂಚನೆ ನೀಡಿರುವುದರಿಂದ ಇಂದಿನ ಸಭೆ ನಿರ್ಣಾಯಕವಾಗಿದೆ, ವಿಫಲವಾದರೆ ಅವರು ಪ್ರತಿಭಟನೆಗೆ ಮುಂದಾಗುವ ಸಾಧ್ಯತೆಯಿದೆ. ಇದರಿಂದ ಪ್ರಯಾಣಕ್ಕಾಗಿ ಖಾಸಗಿ ಸಾರಿಗೆಯನ್ನು ಅವಲಂಬಿಸಿರುವ ಲಕ್ಷಾಂತರ ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ.


bengaluru

LEAVE A REPLY

Please enter your comment!
Please enter your name here