Home Uncategorized ಸ್ಯಾಂಟ್ರೋ ರವಿ ಮನೆ ಮೇಲೆ ಪೊಲೀಸ್ ದಾಳಿ; ಡೈರಿ, ಗ್ಯಾಸ್‌ ಬಿಲ್‌ ವಶಕ್ಕೆ!

ಸ್ಯಾಂಟ್ರೋ ರವಿ ಮನೆ ಮೇಲೆ ಪೊಲೀಸ್ ದಾಳಿ; ಡೈರಿ, ಗ್ಯಾಸ್‌ ಬಿಲ್‌ ವಶಕ್ಕೆ!

30
0
bengaluru

ರಾಜ್ಯದಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿರುವ ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸ್ ವಿಶೇಷ ತಂಡ ಇಂದು ರವಿಯ ಪತ್ನಿಯ ಮನೆ ಮೇಲೆ ದಾಳಿ ಮಾಡಿದ್ದು, ಡೈರಿ, ಗ್ಯಾಸ್‌ ಬಿಲ್‌ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರು: ರಾಜ್ಯದಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿರುವ ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸ್ ವಿಶೇಷ ತಂಡ ಇಂದು ರವಿಯ ಪತ್ನಿಯ ಮನೆ ಮೇಲೆ ದಾಳಿ ಮಾಡಿದ್ದು, ಡೈರಿ, ಗ್ಯಾಸ್‌ ಬಿಲ್‌ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಕ್ರಿಮಿನಲ್‌ ಚಟುವಟಿಕೆಗಳನ್ನು ನಡೆಸುತ್ತಿರುವ, ವೇಶ್ಯಾವಾಟಿಕೆ, ವರ್ಗಾವಣೆ ದಂಧೆಗಳಲ್ಲಿ ಭಾಗಿ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ವಿರುದ್ಧದ ತನಿಖೆಯನ್ನು ಅಧಿಕಾರಿಗಳು ತೀವ್ರಗೊಳಿಸಿದ್ದು, ಇಂದು ಆತನ ಮೊದಲ ಪತ್ನಿಯ ಮನೆ ಮೇಲೆ ಪೊಲೀಸರು ದಾಳಿ ಮಾಡಿ ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ‘ಸ್ಯಾಂಟ್ರೋ ರವಿ’ ಬಂಧನಕ್ಕೆ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ: ಎಡಿಜಿಪಿ

ರವಿಯ ಮೊದಲ ಪತ್ನಿಯ ರಾಜರಾಜೇಶ್ವರಿ ನಗರದ ನಿವಾಸಕ್ಕೆ ಇಂದು ವಿಶೇಷ ಪೊಲೀಸ್ ಪಡೆಯ 30 ಸಿಬ್ಬಂದಿ ಏಕಾಏಕಿ ದಾಳಿ ಮಾಡಿದ್ದು, ಶೋಧ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಡೈರಿ ಮತ್ತು ಗ್ಯಾಸ್ ಬಿಲ್ ಗಳು ಸೇರಿದಂತೆ ಕೆಲ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. 

ಮೂಲಗಳ ಪ್ರಕಾರ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವಿಶಂಕರ್ ಮತ್ತು ಟೀಂ ಮಂಗಳವಾರ ಆರ್ ಆರ್ ನಗರದ ಸ್ಯಾಂಟ್ರೋ ರವಿ ಮನೆ ಮೇಲೆ ದಾಳಿ ಮಾಡಿ ಶೋಧ ನಡೆಸಿದ್ದಾರೆ. ಇದು ಸ್ಯಾಂಟ್ರೋ ರವಿ ತನ್ನ ಮೊದಲನೆಯ ಪತ್ನಿ ವನಜಾಕ್ಷಿ ಅವರ ಜತೆ ವಾಸವಾಗಿದ್ದ ಮನೆ. ಈಗಲೂ ಇಲ್ಲಿ ವನಜಾಕ್ಷಿ ಅವರು ವಾಸವಾಗಿದ್ದಾರೆ. ಸರ್ಚ್ ವಾರೆಂಟ್ ಹಿಡಿದು ಬಂದ ಪೊಲೀಸರು ಇಡೀ ಮನೆಯನ್ನು ಜಾಲಾಡಿದ್ದಾರೆ. ಪರಿಶೀಲನೆಯ ಬಳಿಕ ಮನೆಯಲ್ಲಿ ಸಿಕ್ಕ ಸಿಪಿಯು, ಆಕ್ಸಿಸ್ ಬ್ಯಾಂಕ್‌ನ ಮೂರು ಚೆಕ್‌ಗಳು, ಡೈರಿ ಹಾಗೂ ಗ್ಯಾಸ್ ಬಿಲ್ಲನ್ನು ವಶಕ್ಕೆ ಪಡೆದು ತೆರಳಿದೆ ಎನ್ನಲಾಗಿದೆ.

ಇದನ್ನೂ ಓದಿ: ಹೈ -ಟೆಕ್ ಪಿಂಪ್ ‘ಸ್ಯಾಂಟ್ರೋ ರವಿ’ ಪರವಾಗಿ ಮಹಿಳೆಯ ವಿರುದ್ಧ ಸುಳ್ಳು ಕೇಸ್ : ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಅಮಾನತು

ಇನ್ನು ಸ್ಯಾಂಟ್ರೋ ರವಿ ಮೇಲೆ ದಲಿತ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ವಂಚನೆಯ ಪ್ರಕರಣ ದಾಖಲಿಸಿ ಒಂಬತ್ತು ದಿನಗಳು ಕಳೆದಿವೆ. ಆದರೆ, ಇನ್ನೂ ಆತನ ಬಂಧನವಾಗಿಲ್ಲ. ಆತನಿಗೆ ಲುಕ್‌ ಔಟ್‌ ನೋಟಿಸ್‌ ನೀಡಲಾಗಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದಾರೆ. ಆರು ಪೊಲೀಸ್‌ ತಂಡಗಳನ್ನು ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎನ್ನಲಾಗಿದೆ.
 

LEAVE A REPLY

Please enter your comment!
Please enter your name here