Home Uncategorized ಹಂಪಿಯಲ್ಲಿ ಅಕ್ರಮ ರೆಸಾರ್ಟ್‌ಗಳ ತಪಾಸಣೆಗೆ ಟಾಸ್ಕ್ ಪೋರ್ಸ್ ರಚನೆ!

ಹಂಪಿಯಲ್ಲಿ ಅಕ್ರಮ ರೆಸಾರ್ಟ್‌ಗಳ ತಪಾಸಣೆಗೆ ಟಾಸ್ಕ್ ಪೋರ್ಸ್ ರಚನೆ!

11
0
Advertisement
bengaluru

ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ರೆಸಾರ್ಟ್‌ಗಳು ಮತ್ತು ಹೊಟೇಲ್‌ಗಳು ಅತಿಯಾಗಿ ತಲೆ ಎತ್ತಿದ ಕಾರಣ, ಆತಿಥ್ಯ ಕ್ಷೇತ್ರದಲ್ಲಿನ ಅಕ್ರಮಗಳನ್ನು ಪರಿಶೀಲಿಸಲು ಅಧಿಕಾರಿಗಳು ಕಾರ್ಯಪಡೆಯನ್ನು ರಚಿಸಲು ಯೋಜಿಸುತ್ತಿದ್ದಾರೆ. ಹುಬ್ಬಳ್ಳಿ: ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ರೆಸಾರ್ಟ್‌ಗಳು ಮತ್ತು ಹೊಟೇಲ್‌ಗಳು ಅತಿಯಾಗಿ ತಲೆ ಎತ್ತಿದ ಕಾರಣ, ಆತಿಥ್ಯ ಕ್ಷೇತ್ರದಲ್ಲಿನ ಅಕ್ರಮಗಳನ್ನು ಪರಿಶೀಲಿಸಲು ಅಧಿಕಾರಿಗಳು ಕಾರ್ಯಪಡೆಯನ್ನು ರಚಿಸಲು ಯೋಜಿಸುತ್ತಿದ್ದಾರೆ.

ಯಾವುದೇ ಅಕ್ರಮ ನಿರ್ಮಾಣಗಳ ಬಗ್ಗೆ ಮಾಹಿತಿ ಪಡೆಯಲು ಕಾರ್ಯಪಡೆ ತನ್ನದೇ ಆದ ಮೀಸಲಾದ ಸಹಾಯವಾಣಿಯನ್ನು ಹೊಂದಿರುತ್ತದೆ.

ಅಧಿಕಾರಿಗಳು ಕಳೆದ ಎರಡು ವರ್ಷಗಳಿಂದ ವಿರುಪುರ ಗಡ್ಡಿ ದ್ವೀಪದಲ್ಲಿ 30 ಕಟ್ಟಡಗಳನ್ನು ಮತ್ತು ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸುಮಾರು 70 ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಕೆಡವಿದ್ದಾರೆ.

ಇದನ್ನೂ ಓದಿ: ಹಂಪಿಯ ಪಾರಂಪರಿಕ ಪ್ರದೇಶದಲ್ಲಿ ಒಂದೇ ವಾರದಲ್ಲಿ 17 ರೆಸಾರ್ಟ್‌, ರೆಸ್ಟೋರೆಂಟ್‌ಗಳು ನೆಲಸಮ

bengaluru bengaluru

ಡೆಮಾಲಿಷನ್ ಡ್ರೈವ್‌ಗಳ ಹೊರತಾಗಿಯೂ ಕೆಲವು ರೆಸಾರ್ಟ್ ಮಾಲೀಕರು ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಕೆಡವುವಿಕೆಯ ನಂತರ, ಮಾಲೀಕರು ಹೆಚ್ಚುವರಿ ಹಣವನ್ನು ನೀಡುವ  ವಿದೇಶಿ ಪ್ರಯಾಣಿಕರಿಗೆ ಬಾಡಿಗೆಗೆ ನೀಡಲು ತಮ್ಮ ಮನೆಗಳ ಸ್ವಲ್ಪ ಪ್ರದೇಶಗಳನ್ನು ಕೊಠಡಿಗಳಾಗಿ ಪರಿವರ್ತಿಸಿರುವುದು ಕಂಡುಬಂದಿದೆ.

ಕಾರ್ಯಪಡೆಯು ಅಂತಹ ಚಟುವಟಿಕೆಗಳನ್ನು ಪರಿಶೀಲಿಸುತ್ತದೆ ಮತ್ತು ಹಂಪಿ ಪಾರಂಪರಿಕ ಪ್ರದೇಶ ಮತ್ತು ಅದರ ಬಫರ್ ವಲಯದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸುವುದರಿಂದ ಜನರನ್ನು ನಿರುತ್ಸಾಹಗೊಳಿಸುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚೆಗೆ ನೆಲಸಮವಾದ ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳಿಗೆ ಪರ್ಯಾಯ ಸ್ಥಳವನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ  ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಇದನ್ನೂ ಓದಿ:  ಸ್ಥಳೀಯರ ವಿರೋಧ: ಹಂಪಿಯಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣ ಸ್ಥಗಿತಗೊಳಿಸಿದ ಎಎಸ್‌ಐ

ರೆಸಾರ್ಟ್ ಮಾಲೀಕರು ತಮ್ಮ ವ್ಯವಹಾರವನ್ನು ನಡೆಸಲು ಸಕಾರಾತ್ಮಕ ಪರಿಹಾರವನ್ನು ಕೋರುತ್ತಿದ್ದಾರೆ. ನಿರ್ದಿಷ್ಟ ಋತುವಿನಲ್ಲಿ ತಾತ್ಕಾಲಿಕ ಛತ್ರಗಳನ್ನು ನಿರ್ಮಿಸಲು ಮತ್ತು ಬಾಡಿಗೆಗೆ ನೀಡಲು ಅನುಮತಿಸುವ ಗೋವಾ ಮಾದರಿಯನ್ನು ಅಧಿಕಾರಿಗಳು ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹಲವು ವರ್ಷಗಳಿಂದ ಬಾಕಿ ಉಳಿದಿರುವ ಹಂಪಿ ಮಾಸ್ಟರ್ ಪ್ಲಾನ್ ಜಾರಿಗೆ ತರುವಂತೆ ಪಾರಂಪರಿಕ ತಜ್ಞರು ಹಾಗೂ ಸ್ಥಳೀಯ ಸಂಸ್ಥೆಗಳು ಆಗ್ರಹಿಸಿವೆ.  ಒಂದೆಡೆ, ನಮಗೆ ಪ್ರವಾಸಿಗರಿಂದ ಹೆಚ್ಚಿನ ಒತ್ತಡವಿದೆ, ಮತ್ತೊಂದೆಡೆ, ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿ  ಸರ್ಕಾರ ಡೆಮಾಲಿಷನ್ ಕೈಗೆತ್ತಿಕೊಳ್ಳುತ್ತಿರುವುದು ದುಃಖಕರವಾಗಿದೆ ಎಂದು ರೆಸಾರ್ಟ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ನಾವು ಅಪರಾಧಿಗಳಲ್ಲ. ಇಲ್ಲಿ ಜೀವನ ನಡೆಸಲು ಪ್ರಯತ್ನಿಸುತ್ತಿದ್ದೇವೆ. ನಾವು ಕಾನೂನುಬದ್ಧತೆಯನ್ನು ಅರ್ಥಮಾಡಿಕೊಂಡಿದ್ದೇವೆ . ಇದು  ಪರಿಹರಿಸಲಾಗದ ವಿಷಯವಲ್ಲ.

ಇದನ್ನೂ ಓದಿ: ಎಎಸ್ಐ ನಿಯಮ ಉಲ್ಲಂಘಿಸುತ್ತಿರುವ ಪ್ರವಾಸಿಗರು: ಹಂಪಿಯಲ್ಲಿ 50 ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಸಲು ಅಧಿಕಾರಿಗಳು ಮುಂದು!

ನಮ್ಮ ಮೇಲೆ ಸ್ವಲ್ಪ ಕರುಣೆ, ತಿಳುವಳಿಕೆ ಇರಬೇಕು. ದೊಡ್ಡ ದೊಡ್ಡ ರೆಸಾರ್ಟ್‌ಗಳು ಮತ್ತು ಕಟ್ಟಡಗಳು ಬರುತ್ತಿವೆ ಮತ್ತು ಸಣ್ಣ ಗುಡಿಸಲುಗಳು ನೆಲಸಮವಾಗುತ್ತಿವೆ ಎಂದು ನಾವು ಪರಂಪರೆಯ ಅರ್ಥವನ್ನು ವ್ಯಾಖ್ಯಾನಿಸಬೇಕಾಗಿದೆ. ನಾಳೆ ತಮ್ಮ ವ್ಯಾಪಾರ ಏನಾಗುತ್ತದೋ ಎಂಬ ಭಯದಲ್ಲಿ ಜನರು ಬದುಕಬಾರದು ಎಂದು ಕೊಪ್ಪಳದ ಸಣಾಪುರದ ಮತ್ತೊಬ್ಬ ರೆಸಾರ್ಟ್ ಮಾಲೀಕರು ಹೇಳಿದರು.


bengaluru

LEAVE A REPLY

Please enter your comment!
Please enter your name here