ಭಾರತೀಯ ಪುರಾತತ್ವ ಸಮೀಕ್ಷೆ (ASI) ಮತ್ತು ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರ (HWHAMA) ಜಂಟಿಯಾಗಿ ಹಂಪಿಯಲ್ಲಿರುವ ಪ್ರಮುಖ ಸ್ಮಾರಕಗಳಿಗೆ ಮರದ ಬ್ಯಾರಿಕೇಡ್ ಅಳವಡಿಸಲು ಚಿಂತನೆ ನಡೆಸುತ್ತಿದೆ ಹೊಸಪೇಟೆ: ಭಾರತೀಯ ಪುರಾತತ್ವ ಸಮೀಕ್ಷೆ (ASI) ಮತ್ತು ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರ (HWHAMA) ಜಂಟಿಯಾಗಿ ಹಂಪಿಯಲ್ಲಿರುವ ಪ್ರಮುಖ ಸ್ಮಾರಕಗಳಿಗೆ ಮರದ ಬ್ಯಾರಿಕೇಡ್ ಅಳವಡಿಸಲು ಚಿಂತನೆ ನಡೆಸುತ್ತಿದೆ.
ಹಂಪಿಯ ವಿಜಯ ವಿಠ್ಠಲ ದೇವಾಲಯದ ಸಂಕೀರ್ಣದಲ್ಲಿರುವ ಸ್ಮಾರಕದ ಕಲ್ಲಿನ ರಥದ ರಕ್ಷಣೆಗಾಗಿ ಆಡಳಿತವು ಮರದ ಬ್ಯಾರಿಕೇಡ್‌ಗಳನ್ನು ಅಳವಡಿಸಿತ್ತು.
ಇತ್ತೀಚೆಗೆ ಹಂಪಿಯಲ್ಲಿ ನಡೆದ G20 ಶೃಂಗಸಭೆಯ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭದಲ್ಲಿ ಬ್ಯಾರಿಕೇಡ್‌ಗಳನ್ನು ನವೀಕರಿಸಲಾಗಿದೆ.
ಎಡರು ಬಸವಣ್ಣ, ಉಗ್ರನರಸಿಂಹ ಮತ್ತು ಇತರ ಕೆಲವು ಸ್ಮಾರಕಗಳಿಗೆ ಮರದ ಬ್ಯಾರಿಕೇಡ್ ನಿಂದ ರಕ್ಷಣೆ ಸಿಗುವ ಸಾಧ್ಯತೆಯಿದೆ. ಜಿ20 ಶೃಂಗಸಭೆ ಬಳಿಕ ಹಂಪಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಧಿಕೃತ ದಾಖಲೆಗಳ ಪ್ರಕಾರ ಹಂಪಿಯಲ್ಲಿ ಪ್ರತಿದಿನ ಸುಮಾರು 3,000 ಪ್ರವಾಸಿಗರು ಭೇಟಿ ನೀಡುತ್ತಾರೆ.
ಇದನ್ನೂ ಓದಿ: ಹಂಪಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರಕ್ಕೆ ಮನಸೋತ ಪ್ರವಾಸಿಗರು
ಹಂಪಿಯ ಇತರ ಸ್ಮಾರಕಗಳಿಗೂ ಬ್ಯಾರಿಕೇಡ್ ರಕ್ಷಣೆಯನ್ನು ವಿಸ್ತರಿಸುವ ಯೋಜನೆ ಇದೆ ಎಂದು HWHAMA ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ನಾವು ಕಲ್ಲಿನ ರಥಕ್ಕೆ ಮರದ ಬ್ಯಾರಿಕೇಡ್ ಅನ್ನು ಸ್ಥಾಪಿಸಿದ್ದೇವೆ, ಏಕೆಂದರೆ ಅನೇಕರು ರಥದ ಮೇಲೆ ಕುಳಿತುಕೊಳ್ಳುತ್ತಿದ್ದರು. ಕೆಲವು ಅಶಿಸ್ತಿನ ಪ್ರವಾಸಿಗರಿಂದಾಗಿ ಹಾನಿಗೊಳಗಾಗಬಹುದಾದ ಇತರ ಸ್ಮಾರಕಗಳಿಗೂ ಇದೇ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಂಪಿಯ ಅತಿದೊಡ್ಡ ಪ್ರತಿಮೆ ಹೊಂದಿರುವ ಉಗ್ರನರಸಿಂಹ ದೇವಸ್ಥಾನಕ್ಕೆ ಮರದ ಬದಲು ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಸಲಹೆಗಳು ಕೇಳಿ ಬರುತ್ತಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಹಂಪಿಯಲ್ಲಿ ಜಿ20 ಶೃಂಗಸಭೆ: ಭದ್ರತೆಗೆ 100 ಸಿಸಿಟಿವಿ ಕ್ಯಾಮೆರಾ, 300 ಮಂದಿ ಪೊಲೀಸರ ನಿಯೋಜನೆ
ಜನರು ಪ್ರತಿಮೆಯ ಮುಂದೆ ಬ್ಯಾರಿಕೇಡ್ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತಾರೆ. ಪ್ರತಿ ಬಾರಿಯೂ ಪ್ರವಾಸಿಗರು ಲೈನ್ ದಾಟಲು ಬಂದರೆ ಕಾವಲುಗಾರರು ಅವರನ್ನು ತಡೆಯಬೇಕಾಗಿದೆ. ಹಂಪಿಯ ಹೆಚ್ಚಿನ ಪ್ರಮುಖ ಸ್ಮಾರಕಗಳು ಸಿಸಿಟಿವಿ ಕವರೇಜ್‌ನಲ್ಲಿವೆ ಮತ್ತು ಲೈವ್ ಫೀಡ್ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.