Home Uncategorized ಹೊಸ ವರ್ಷಾಚರಣೆ: ನಾಳೆ ತಡರಾತ್ರಿವರೆಗೂ ಸಂಚಾರ ವಿಸ್ತರಿಸಿದ ನಮ್ಮ ಮೆಟ್ರೋ

ಹೊಸ ವರ್ಷಾಚರಣೆ: ನಾಳೆ ತಡರಾತ್ರಿವರೆಗೂ ಸಂಚಾರ ವಿಸ್ತರಿಸಿದ ನಮ್ಮ ಮೆಟ್ರೋ

6
0
bengaluru

ಹೊಸ ವರ್ಷಾಚರಣೆ ಪ್ರಯುಕ್ತ ಬೆಂಗಳೂರು ನಮ್ಮ ಮೆಟ್ರೋ ತನ್ನ ಸಂಚಾರದ ಅವಧಿಯನ್ನು ಶನಿವಾರ ತಡರಾತ್ರಿ 2 ಗಂಟೆಯವರೆಗೂ ವಿಸ್ತರಣೆ ಮಾಡಿದೆ. ಬೆಂಗಳೂರು: ಹೊಸ ವರ್ಷಾಚರಣೆ ಪ್ರಯುಕ್ತ ಬೆಂಗಳೂರು ನಮ್ಮ ಮೆಟ್ರೋ ತನ್ನ ಸಂಚಾರದ ಅವಧಿಯನ್ನು ಶನಿವಾರ ತಡರಾತ್ರಿ 2 ಗಂಟೆಯವರೆಗೂ ವಿಸ್ತರಣೆ ಮಾಡಿದೆ.

ಪ್ರತಿನಿತ್ಯ ದಿನದ ಕೊನೆಯ ಮೆಟ್ರೋ ತನ್ನ ಆರಂಭದ ನಿಲ್ದಾಣದಿಂದ ರಾತ್ರಿ 11ಕ್ಕೆ ಹೊರಟರೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಕಿ ಡಿ.31ರ ತಡರಾತ್ರಿ ಅಥವಾ ಜನವರಿ 1ರಂದು ನಸುಕಿನ ಜಾವದವರೆಗೂ ಮೆಟ್ರೋ ಸಂಚರಿಸಲಿದೆ.

ರಾತ್ರಿ 11ರ ಬಳಿಕ ಪ್ರತಿ ಹದಿನೈದು ನಿಮಿಷಕ್ಕೆ ಒಂದರಂತೆ ಕೆಂಗೇರಿ-ಬೈಯಪ್ಪನಹಳ್ಳಿ (ನೇರಳ ಮಾರ್ಗ) ಮತ್ತು ಸಿಲ್ಕ್ ಸಂಸ್ಥೆ-ನಾಗಸಂದ್ರ (ಹಸಿರು ಮಾರ್ಗ)ದಲ್ಲಿ ಮೆಟ್ರೋ ಸಂಚರಿಸಲಿದೆ.

ಬೈಯಪ್ಪನಹಳ್ಳಿಯಿಂದ ತಡರಾತ್ರಿ 1.35ಕ್ಕೆ, ಕೆಂಗೇರಿಯಿಂದ ತಡರಾತ್ರಿ 1.25ಕ್ಕೆ, ನಾಗಸಂದ್ರದಿಂದ ತಡರಾತ್ರಿ 1.30ಕ್ಕೆ ಮತ್ತು ರೇಷ್ಮೆ ಸಂಸ್ಥೆಯಿಂದ ತಡರಾತ್ರಿ 1.25ಕ್ಕೆ ಅಂದಿನ ಕೊನೆಯ ಮೆಟ್ರೋ ಹೊರಡಲಿದೆ. ತಡರಾತ್ರಿ 2ಕ್ಕೆ ಮೆಜೆಸ್ಟಿಕ್ ನಿಂದ ದಿನದ ಕೊನೆಯ ರೈಲುಗಳು ನಾಲ್ಕೂ ದಿಕ್ಕಿಗೂ ಹೊರಡಲಿದೆ.

bengaluru

ಕಾಗದದ ಟಿಕೆಟ್
ರಾತ್ರಿ 11.30ರ ನಂತರ ಮಹಾತ್ಮ ಗಾಂಧಿ ರಸ್ತೆ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಇತರ ಯಾವುದೇ ನಿಲ್ದಾಣಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ ರೂ.50 ಟಿಕೆಟ್ಗಳನ್ನು ವಿತರಿಸಲಾಗುತ್ತದೆ.

ಕಾದ ಟಿಕೆಟ್ ಗಳನ್ನು ಡಿ.31ರ ರಾತ್ರಿ 8 ರಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮುಂಚಿತವಾಗಿ ಖರೀದಿಗೆ ಲಭ್ಯ ಇರುತ್ತದೆ. ಸ್ಮಾರ್ಟ್ ಕಾರ್ಡ್ ಮತ್ತು ಕ್ಯೂಆರ್ ಕೋಡ್ ಟಿಕೆಟ್ ಹೊಂದಿರುವವರು ವಿಸ್ತರಿಸಿದ ಅವಧಿಯಲ್ಲಿಯೂ ಎಂದಿನ ರಿಯಾಯಿತಿ ದರದಲ್ಲಿಯೇ ಪ್ರಯಾಣಿಸಬಹುದು.

bengaluru

LEAVE A REPLY

Please enter your comment!
Please enter your name here