ಹ್ಯಾಂಗ್ಯೋ ಐಸ್‌ಕ್ರೀಂ ಸಂಸ್ಥೆಯ 20ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಬಿಡದಿಯ ವಂಡರ್‌ಲಾ ಅಮ್ಯೂಸ್‌ಮೆಂಟ್ ಪಾರ್ಕ್ ರೆಸಾರ್ಟ್ ಸಭಾಂಗಣದಲ್ಲಿ ಹ್ಯಾಂಗ್ಯೋತ್ಸವ ಹಾಗೂ ಹೊಸ ಲಾಂಛನ ಬಿಡುಗಡೆ ಸಮಾರಂಭ ಗುರುವಾರ ನಡೆಯಿತು. ಹುಬ್ಬಳ್ಳಿ/ಬೆಂಗಳೂರು: ಹ್ಯಾಂಗ್ಯೋ ಐಸ್‌ಕ್ರೀಂ ಸಂಸ್ಥೆಯ 20ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಬಿಡದಿಯ ವಂಡರ್‌ಲಾ ಅಮ್ಯೂಸ್‌ಮೆಂಟ್ ಪಾರ್ಕ್ ರೆಸಾರ್ಟ್ ಸಭಾಂಗಣದಲ್ಲಿ ಹ್ಯಾಂಗ್ಯೋತ್ಸವ ಹಾಗೂ ಹೊಸ ಲಾಂಛನ ಬಿಡುಗಡೆ ಸಮಾರಂಭ ಗುರುವಾರ ನಡೆಯಿತು.
ಹ್ಯಾಂಗ್ಯೋ ಐಸ್ ಕ್ರೀಮ್ ಕಂಪನಿ ಕಾರ್ಯಕಾರಿ ಅಧ್ಯಕ್ಷ ದಿನೇಶ್ ಆರ್ ಪೈ ಅವರು, ಹೊಸ ಲಾಂಛನವನ್ನು ಬಿಡುಗಡೆ ಮಾಡಿದರು.
ಹ್ಯಾಂಗ್ಯೊ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಜಿ ಪೈ ಮಾತನಾಡಿ, “ಕಂಪನಿಯ ಕಳೆದ 20 ವರ್ಷಗಳ ಪ್ರಯಾಣದಲ್ಲಿ ಎಂಟು ರಾಜ್ಯಗಳಲ್ಲಿ 25,000ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದಿದ್ದು, ಈ ಮೂಲಕ 90 ಲಕ್ಷ ಲೀಟರ್ ಐಸ್ ಕ್ರೀಮ್ ಅನ್ನು ಪೂರೈಕೆ ಮಾಡಿದ್ದೇವೆ. ಫೆಬ್ರವರಿ 14, 2003 ರಂದು ಮಂಗಳೂರಿನಲ್ಲಿ ಪ್ರಾರಂಭವಾದ ಇದು ಇಂದು ದಕ್ಷಿಣ ಭಾರತದ ಪ್ರಮುಖ ಬ್ರಾಂಡ್‌ಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಸಂಸ್ಥೆಯ 400ಕ್ಕೂ ಹೆಚ್ಚು ನೌಕರರು ಮತ್ತು ವಿತರಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.