Home Uncategorized ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಬರಹಗಾರರ ನಿರ್ಲಕ್ಷ್ಯ, ಪರ್ಯಾಯ ಸಮಾವೇಶ ಆಯೋಜಿಸಲು ಯೋಜನೆ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಬರಹಗಾರರ ನಿರ್ಲಕ್ಷ್ಯ, ಪರ್ಯಾಯ ಸಮಾವೇಶ ಆಯೋಜಿಸಲು ಯೋಜನೆ

8
0

ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರು ಮುಸ್ಲಿಂ ಸಾಹಿತಿಗಳು ಹಾಗೂ ಕವಿಗಳನ್ನು ಕಡೆಗಶಿಸುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ, ಬಂಡಾಯವೆದ್ದಿರುವ ಕನ್ನಡದ ಕೆಲವು ಹಿರಿಯ ಸಾಹಿತಿಗಳು ಜನವರಿ 8ರಂದು ಬೆಂಗಳೂರಿನಲ್ಲಿ ಜನ ಸಾಹಿತ್ಯ ಸಮ್ಮೇಳನ ಎಂಬ ಪರ್ಯಾಯ ಸಮಾವೇಶವನ್ನು ಆಯೋಜಿಸಲು ಮುಂದಾಗಿದ್ದಾರೆ. ಹುಬ್ಬಳ್ಳಿ: ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರು ಮುಸ್ಲಿಂ ಸಾಹಿತಿಗಳು ಹಾಗೂ ಕವಿಗಳನ್ನು ಕಡೆಗಶಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಭಿನ್ನಾಭಿಪ್ರಾಯದ ಧ್ವನಿಗಳು ಗಟ್ಟಿಯಾಗುತ್ತಿವೆ. ಇದರಿಂದಾಗಿ ಬಂಡಾಯವೆದ್ದಿರುವ ಕನ್ನಡದ ಕೆಲವು ಹಿರಿಯ ಸಾಹಿತಿಗಳು ಜನವರಿ 8ರಂದು ಬೆಂಗಳೂರಿನಲ್ಲಿ ಜನ ಸಾಹಿತ್ಯ ಸಮ್ಮೇಳನ ಎಂಬ ಪರ್ಯಾಯ ಸಮಾವೇಶವನ್ನು ಆಯೋಜಿಸಲು ಮುಂದಾಗಿದ್ದಾರೆ.

ಕಳೆದ ವಾರ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನದಲ್ಲಿ ಭಾಗವಹಿಸುವ ಸಾಹಿತಿಗಳು ಮತ್ತು ಕವಿಗಳ ಹೆಸರನ್ನು ಪ್ರಕಟಿಸಿದ್ದು, ಕನ್ನಡ ಬರಹಗಾರರ ಒಂದು ವಿಭಾಗವು ಮುಸ್ಲಿಂ ಲೇಖಕರನ್ನು ಕಣೆಗಣಿಸಲಾಗಿದೆ ಎಂದು ಆಕ್ಷೇಪಿಸಿದ್ದರು. ರಾಜ್ಯದಲ್ಲಿ ನೂರಾರು ಮುಸ್ಲಿಂ ಕನ್ನಡ ಲೇಖಕರಿದ್ದು, ಸಮ್ಮೇಳನಕ್ಕೆ ಕೆಲವರನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.

ಅಂದಿನಿಂದ ಹಾವೇರಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಸಮಾನಾಂತರವಾಗಿ ಪರ್ಯಾಯ ಕಾರ್ಯಕ್ರಮ ಅಥವಾ ಪರ್ಯಾಯ ಸಮ್ಮೇಳನ ಆಯೋಜಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಯುತ್ತಿದೆ. ಅನೇಕ ಬರಹಗಾರರು ಈ ಬಂಡಾಯ ಕಾರ್ಯಕ್ರಮದ ಭಾಗವಾಗಲು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಕೋವಿಡ್‌ ಮುಂಜಾಗ್ರತಾ ಕ್ರಮಗಳೊಂದಿಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ: ಸಿಎಂ ಬೊಮ್ಮಾಯಿ

ಆದರೆ, ಸಮ್ಮೇಳನದ ಹೆಸರಿನಲ್ಲಿ ಕ್ಷುಲ್ಲಕ ರಾಜಕಾರಣ ಮಾಡಲಾಗುತ್ತಿದೆ. ಧರ್ಮದ ಆಧಾರದ ಮೇಲೆ ಬರಹಗಾರರನ್ನು ತಪ್ಪಿಸುವ ಉದ್ದೇಶ ಕನ್ನಡ ಸಾಹಿತ್ಯ ಪರಿಷತ್ತಿಗಿಲ್ಲ  ಎಂದು ಸಂಘಟಕರು ದೂರಿದ್ದಾರೆ. ‘ಹಾವೇರಿ ಸಮ್ಮೇಳನದಲ್ಲಿ ಆರು ಮುಸ್ಲಿಂ ಲೇಖಕರು ಮತ್ತು ಕವಿಗಳು ಭಾಗವಹಿಸಿದ್ದಾರೆ. ಆದರೆ, ದೊಡ್ಡ ಕನ್ನಡದ ಕಾರ್ಯಕ್ರಮದ ವೇಳೆ ಕೆಲವರು ವಿವಾದ ಸೃಷ್ಟಿಸುವುದು ವಾಡಿಕೆಯಾಗಿದೆ’ ಎಂದು ಸಂಘಟನಾ ಸಮಿತಿ ಸದಸ್ಯರೊಬ್ಬರು ತಿಳಿಸಿದರು.

1979ರಲ್ಲಿ ಧರ್ಮಸ್ಥಳದಲ್ಲಿ ಸಮ್ಮೇಳನ ನಡೆದಾಗ ದಲಿತ ಸಾಹಿತಿಗಳ ಹಿತಾಸಕ್ತಿಗೆ ಧಕ್ಕೆಯಾದ ಕಾರಣ ಸಮಾನಾಂತರ ಬಂಡಾಯ ದಲಿತ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಅಂದಿನ ಸಮ್ಮೇಳನಾಧ್ಯಕ್ಷರಾಗಿದ್ದ ಹಂಪ ನಾಗರಾಜಯ್ಯ ಅವರು ದಲಿತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಿದ್ದರಿಂದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸರು ಮಧ್ಯಪ್ರವೇಶಿಸಿ ಸಮ್ಮೇಳನ ಸುಗಮವಾಗಿ ನಡೆಯುವಂತೆ ಮಾಡಬೇಕಾಯಿತು.

ಇದನ್ನೂ ಓದಿ: ಹಾವೇರಿ: ಮುಂಬರುವ ಕನ್ನಡ ಸಾಹಿತ್ಯ ಸಮ್ಮೇಳನ ಪ್ಲಾಸ್ಟಿಕ್ ಮುಕ್ತ, ಮರುಬಳಕೆಯ ವಸ್ತುಗಳನ್ನು ಬಳಸಲು ನಿರ್ಧಾರ

ಅದು ಪ್ರಚೋದಕವಾಗಿತ್ತು ಮತ್ತು ಶೀಘ್ರದಲ್ಲೇ ಬಂಡಾಯ ದಲಿತ ಸಾಹಿತ್ಯವು ರಾಜ್ಯದಾದ್ಯಂತ ಬಹಳ ಜನಪ್ರಿಯವಾಯಿತು. ನಂತರ, ಪತ್ರಕರ್ತ ಮತ್ತು ಬರಹಗಾರ ಪಿ ಲಂಕೇಶ್ ಅವರು ಹುಬ್ಬಳ್ಳಿಯ ಸಮಾವೇಶಕ್ಕೆ ಪರ್ಯಾಯ ಸಮ್ಮೇಳನಕ್ಕೆ ಕರೆ ನೀಡಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ.

ಮುಂಬರುವ 86ನೇ ಸಾಹಿತ್ಯ ಸಮ್ಮೇಳನ ಜನವರಿ 6ರಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ನಡೆಯಲಿದ್ದು, ಅದ್ಧೂರಿಯಾಗಿ ನಡೆಸಲು ಅಂತಿಮ ಸಿದ್ಧತೆ ನಡೆದಿದೆ. ತಮ್ಮ ತವರು ಕ್ಷೇತ್ರ ಶಿಗ್ಗಾಂವಿ ಹಾವೇರಿ ಜಿಲ್ಲೆಯಲ್ಲಿರುವುದರಿಂದ ವಿಶೇಷ ಆಸಕ್ತಿ ವಹಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

LEAVE A REPLY

Please enter your comment!
Please enter your name here