Home Uncategorized ಕಲಿಯುಗದ ಸಂಜೀವಿನಿ ಕಪ್ಪತ್ತಗುಡ್ಡಕ್ಕೆ ಮೂಡನಂಬಿಕೆಯಿಂದ ಎದುರಾಗುತ್ತಿದೆ ಆಪತ್ತು!

ಕಲಿಯುಗದ ಸಂಜೀವಿನಿ ಕಪ್ಪತ್ತಗುಡ್ಡಕ್ಕೆ ಮೂಡನಂಬಿಕೆಯಿಂದ ಎದುರಾಗುತ್ತಿದೆ ಆಪತ್ತು!

22
0

ಉತ್ತರ ಕರ್ನಾಟಕದ ಸಹ್ಯಾದ್ರಿ. ಕಲಿಯುಗದ ಸಂಜೀವಿನಿ ಎಂದೇ ಖ್ಯಾತಿಗಳಿಸಿರುವ ಕಪ್ಪತ್ತಗುಡ್ಡಕ್ಕೆ ಜನರ ಮೂಢನಂಬಿಕೆಯಿಂದ ಆಪತ್ತು ಎದುರಾಗಿದೆ. ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ. ಕಲಿಯುಗದ ಸಂಜೀವಿನಿ ಎಂದೇ ಖ್ಯಾತಿಗಳಿಸಿರುವ ಕಪ್ಪತ್ತಗುಡ್ಡಕ್ಕೆ ಜನರ ಮೂಢನಂಬಿಕೆಯಿಂದ ಆಪತ್ತು ಎದುರಾಗಿದೆ.

ಗುಡ್ಡದಲ್ಲಿನ ಕಪ್ಪತ್ತಮಲ್ಲಯ್ಯ ದೇವಸ್ಥಾನ ಬಹಳ ಪ್ರಸಿದ್ಧವಾಗಿದ್ದು, ಕಪ್ಪತ್ತಗುಡ್ಡದ ತುದಿಗೆ ಬೆಂಕಿ ಹಚ್ಚಿದರೆ ಕಪ್ಪತ್ತ ಮಲ್ಲಯ್ಯನ ನೆತ್ತಿಗೆ ಸುಟ್ಟಂತೆ, ಕಪ್ಪತ್ತಗುಡ್ಡದ ತುದಿಗೆ ಬೆಂಕಿ ಹಚ್ಚಿದರೆ ತಮಗೆ ಬರಗಾಲ ಬರುವುದಿಲ್ಲ, ಮಳೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಹೀಗಾಗಿಯೇ ಪ್ರತೀ ವರ್ಷ ಫೆಬ್ರವರಿ ತಿಂಗಳಿನಲ್ಲಿ ಗುಡ್ಡದ ತುದಿಗೆ ಬೆಂಕಿ ಹಚ್ಚುವುದನ್ನು ಸಾಂಪ್ರದಾಯಿಕವಾಗಿ ಬೆಳೆಸಿಕೊಂಡು ಬರುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಇಲ್ಲಿನ ಗ್ರಾಮಸ್ಥರು ಕಪ್ಪತಗುಡ್ಡದ ತುದಿಗೆ ಬೆಂಕಿ ಹಚ್ಚಿದ್ದು, ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಪ್ರದೇಶದಲ್ಲಿ ಗಣಿ ಕಳ್ಳರು ಕನ್ನ ಹಾಕಲು ಹೊಂಚು ಹಾಕುತ್ತಿದ್ದು, ಭೂಮಿ ವಶಕ್ಕೆ ಪಡೆದುಕೊಳ್ಳಲು ಈ ತಂತ್ರವನ್ನು ಬಳಕೆ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ.

ಈ ಕುತಂತ್ರ ಹಾಗೂ ಗ್ರಾಮಸ್ಥರ ಮೂಢನಂಬಿಕೆಯಿಂದಾಗಿ ಗುಡ್ಡದಲ್ಲಿರುವ ಔಷಧೀಯ ಸಸ್ಯಗಳು ನಾಶವಾಗುತ್ತಿದೆ ಎಂದು ಹಲವು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಅರಣ್ಯಾಧಿಕಾರಿಗಳು ಮಾತನಾಡಿ, ಗುಡ್ಡದಲ್ಲಿ ಬೆಂಕಿ ನಂದಿಸಲು ತಂಡವೊಂದನ್ನು ನಿಯೋಜಿಸಲಾಗಿದ್ದು, ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಆ ತಂಡ ಕಾರ್ಯಾಚರಣೆ ನಡೆಸಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಿಕಿತ್ಸೆಗಾಗಿ ಆಯುರ್ವೇದ ಮಾರ್ಗ; ‘ಪರ್ಣಕುಟಿ’ ನಿರ್ಮಾಣ; KSRDPR ವಿನೂತನ ಹೆಜ್ಜೆ

ಗುಡ್ಡದಲ್ಲಿ ಒಣಗಿದ ಹುಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ನಂತರ ಎತ್ತರವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ತಿಂಗಳೊಳಗೆ ಎಚೇತ್ತವಾಗಿ ಹುಲ್ಲುಗಳು ಬೆಳೆದಿರುತ್ತದೆ. ಈ ಹುಲ್ಲಿಗೆ ಬೆಂಕಿ ಹಚ್ಚಿದರೆ ದೇವರು ನಮ್ಮನ್ನು ಆಶೀರ್ವದಿಸುತ್ತಾನೆಂಬ ನಂಬಿಕೆಯಿದೆ. ವಾಸ್ತವಿಕವಾಗಿ ಹೇಳುವುದಾದರೆ, ಒಣಗಿದ ಹುಲ್ಲುಗಳನ್ನು ತೆಗೆದುಹಾಕಲು ಬೆಂಕಿಯನ್ನು ಬಳಕೆ ಮಾಡಲಾಗುತ್ತದೆ. ಬೆಂಕಿ ಹಚ್ಚಿ ಪ್ರದೇಶವನ್ನು ಸ್ವಚ್ಛಗೊಳಿಸಲಾಗುತ್ತದೆ. ನಂತರ ಈ ಪ್ರದೇಶ ಹೊಸದಾಗಿ ಕೃಷಿ ಮಾಡಲು ನಮಗೆ ಸಹಾಯ ಮಾಡುತ್ತದೆ ಎಂಬುದು ಅರ್ಥವಾಗಿದೆ. ಬೆಂಕಿ ಹಚ್ಚಿದ ಕೂಡಲೇ ಇತರೆಡೆ ಹರಡದಂತೆ ನೋಡಿಕೊಳ್ಳುತ್ತೇವೆ. ಆದರೆ, ಈ ಪ್ರದೇಶಕ್ಕೆ ಹೊಸದಾಗಿ ಬರುವ ಜನರಿಗೆ ಹೊಗೆ ಕಾಣಿಸುತ್ತಿದ್ದಂತೆಯೇ ದೊಡ್ಡ ಕಾಡ್ಗಿಚ್ಚು ಎಂದು ಭಾವಿಸುತ್ತಾರೆ. ಆದರೆ, ಅದು ನಿಜವಲ್ಲ. ಇದನ್ನು ನಂಬಿಕೆ ಅಥವಾ ಸ್ವಚ್ಛತಾ ಮಿಷನ್ ಎಂದು ಕರೆಯಬಹುದು. ಈ ಬೆಂಕಿ ನಮಗೆ ಪ್ರತೀವರ್ಷ ಸಹಾಯ ಮಾಡುತ್ತದೆ ಎಂದು ಕಪ್ಪತಗುಡ್ಡ ಸಮೀಪದ ಇರುವ ಗ್ರಾಮವೊಂದರ ನಿವಾಸಿ ದೇವೇಂದ್ರಪ್ಪ ರಾಠೋಡ್ ಎಂಬುವವರು ಹೇಳಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಅದನ್ನು ನಂದಿಸಲು ನಮ್ಮ ತಂಡವು ಸದಾ ಸಿದ್ಧವಾಗಿರುತ್ತದೆ. ಬೆಂಕಿಯನ್ನು ತಕ್ಷಣವೇ ನಂದಿಸುವ ಕೆಲಸ ಮಾಡುತ್ತೇವೆಂದು ಹೇಳಿದ್ದಾರೆ.

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕೆಲವು ಫೋಟೋಗಳಲ್ಲಿ ಇಂತಹ ಬೆಂಕಿಯಿಂದ ಸಸ್ಯ ಮತ್ತು ಪ್ರಾಣಿಗಳಿಗೆ ಹಾನಿಯಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಕಾಡು ಪ್ರಾಣಿಗಳಿಗಾಗಲೀ, ಸಸ್ಯಗಳಿಗಾಗಲಿ ಹಾನಿಯಾಗಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ನಾವು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿರುತ್ತೇವೆಂದು ತಿಳಿಸಿದ್ದಾರೆ.

ಗದಗ ಡಿಸಿಎಫ್ ದೀಪಿಕಾ ಬಾಜಪೈ ಮಾತನಾಡಿ, ಈ ಬೆಂಕಿ ಸಾಮಾನ್ಯವಾಗಿರುತ್ತದೆ. ಕೆಲವೊಮ್ಮೆ ಕುರುಬರು. ಅತಿಕ್ರಮಣಕಾರರು ಒಣ ಹುಲ್ಲುಗಳಿಗೆ ಬೆಂಕಿ ಹಚ್ಚುತ್ತಾರೆ, ಇದರಿಂದಾಗಿ ಹೊಸ ಬೆಳೆ ಬೆಳೆಯಲು ಸಹಾಯಕವಾಗುತ್ತದೆ. ಯಾವುದೇ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೂ ಅದನ್ನು ನಂದಿಸಲು ನಮ್ಮ ತಂಡ 24×7 ಸಿದ್ಧವಾಗಿರುತ್ತದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here