Home Uncategorized ಕೆಆರ್ ಮಾರ್ಕೆಟ್ ನಲ್ಲಿ ಹಣದ ಮಳೆ: ಫ್ಲೈ ಓವರ್ ನಿಂದ ಸುರಿಯಿತು ನೋಟಿನ ಸುರಿಮಳೆ, ಹಣ...

ಕೆಆರ್ ಮಾರ್ಕೆಟ್ ನಲ್ಲಿ ಹಣದ ಮಳೆ: ಫ್ಲೈ ಓವರ್ ನಿಂದ ಸುರಿಯಿತು ನೋಟಿನ ಸುರಿಮಳೆ, ಹಣ ಪಡೆಯಲು ಮುಗಿಬಿದ್ದ ಜನ, ವಿಡಿಯೋ ವೈರಲ್

18
0
Advertisement
bengaluru

ಆಕಾಶದಿಂದ ಹಣ ಸುರಿದರೆ ಹೇಗಿರತ್ತೆ.. ಹೀಗೆ ಎಷ್ಟೋ ಬಾರಿ ನಾವು ಅಂದುಕೊಂಡಿದ್ದೂ ಇದೆ.. ಆದರೆ ಇದು ನಿಜವಾದರೆ.. ಅಕ್ಷರಶಃ ನಿಜ.. ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಆಕಾಶದಿಂದ ಹಣದ ಸುರಿಮಳೆಯೇ ಸುರಿದಿದೆ… ಬೆಂಗಳೂರು: ಆಕಾಶದಿಂದ ಹಣ ಸುರಿದರೆ ಹೇಗಿರತ್ತೆ.. ಹೀಗೆ ಎಷ್ಟೋ ಬಾರಿ ನಾವು ಅಂದುಕೊಂಡಿದ್ದೂ ಇದೆ.. ಆದರೆ ಇದು ನಿಜವಾದರೆ.. ಅಕ್ಷರಶಃ ನಿಜ.. ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಆಕಾಶದಿಂದ ಹಣದ ಸುರಿಮಳೆಯೇ ಸುರಿದಿದೆ…

ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ಕೆಆರ್‌ ಮಾರುಕಟ್ಟೆ ಫ್ಲೈಒವರ್‌ನಿಂದ ಹಣದ ಮಳೆ ಸುರಿದಿದ್ದು, ಹತ್ತು ರೂಪಾಯಿ ನೋಟುಗಳ ಈ ಮಳೆಯಿಂದ ಜನರು ಆಶ್ಚರ್ಯಚಕಿತರಾದರೆ ಕೆಲವರು ಹಣವನ್ನು ಆಯ್ದುಕೊಳ್ಳಲು ಮುಂದಾಗಿದ್ದಾರೆ.

An unidentified man showers money from KR market flyover in Bengaluru, video goes viral.

People swarmed in large number to collect the notes.

bengaluru bengaluru

Well, those who collected the notes can only say if it is an original notes!#Bangalore #money #viralvideo pic.twitter.com/SQ2bPu7Hn5
— Reethu Rajpurohit (@reethu_journo) January 24, 2023

ಬೆಂಗಳೂರಿನ ಕೆಆರ್‌ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಸ್ಕೂಟಿಯಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಮಾರ್ಕೆಟ್ ಫ್ಲೈ ಓವರ್ ಮೇಲಿಂದ ಹಣವನ್ನು ತೂರಿ ಹಣದ ಮಳೆ ಸುರಿಸಿದ್ದಾನೆ. ಮಾರುಕಟ್ಟೆ ಸಿಗ್ನಲ್ ಮೇಲಿರುವ ಫ್ಲೈಓವರ್ ಮೇಲೆ ನಿಂತು ತಾನು ತಂದಿದ್ದ 10 ರೂ ನೋಟುಗಳ ರಾಶಿಯನ್ನು ಫ್ಲೈಓವರ್ ನ ಎರಡೂ ಬದಿಯಲ್ಲಿ ಎರೆಚಿದ್ದಾನೆ. ಆಗಸದಿಂದ ನೋಟಿನ ರಾಶಿ ಕೆಳಗೆ ಬೀಳುತ್ತಿರುವುದನ್ನು ನೋಡಿದ ಜನ ಹಿಂದೆ ಮುಂದೆ ನೋಡದೇ ಅದನ್ನು ಆಯ್ದು ಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಸುಮಾರು ಅರ್ಧಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.

ಇದನ್ನೂ ಓದಿ: ಬೆಂಗಳೂರು: ಖಾಸಗಿ ಬಸ್​ ಡಿಕ್ಕಿ, ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು

ವ್ಯಕ್ತಿಯ ವರ್ತನೆಯಿಂದ ಕೆಳಗೆ ಮಾತ್ರವಲ್ಲದೇ ಫ್ಲೈ ಓವರ್ ಮೇಲೂ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಣವನ್ನು ಎರಚಿದ ಬಳಿಕ ವ್ಯಕ್ತಿ ತನ್ನ ಹೋಂಡಾ ಆಕ್ಟೀವಾ ಗಾಡಿ ಹತ್ತಿ ಅಲ್ಲಿಂದ ಹೋಗಿದ್ದಾನೆ. ಇನ್ನು ಈ ವ್ಯಕ್ತಿ ಹಣ ಎರಚುತ್ತಿರುವ ವಿಡಿಯೋಗಳು ವ್ಯಾಪಕ ವೈರಲ್ ಆಗಿದ್ದು, ಮಾರ್ಕೆಟ್ ಸಿಗ್ನಲ್ ಬಳಿ ಜನನಿಬಿಡ ಪ್ರದೇಶದಲ್ಲಿ ಈ ವ್ಯಕ್ತಿ ಫ್ಲೈ ಓವರ್ ಮೇಲಿಂದ 10 ರೂ. ನೋಟುಗಳಿರುವ ಸುಮಾರು 3 ಕಂತೆ ಹಣವನ್ನು ಎಸೆದು ಹೋಗಿದ್ದಾನೆ. ಸುಮಾರು ಮೂರು ನಾಲ್ಕು ಸಾವಿರದಷ್ಟು ಹಣ ಎಸೆದಿದ್ದಾನೆ. ವಿಡಿಯೋದಲ್ಲಿ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಈ ರೀತಿ ಮಾಡುತ್ತಿರುವುದಾಗಿ ಹೇಳಿದ್ದಾನೆ.


bengaluru

LEAVE A REPLY

Please enter your comment!
Please enter your name here