Home Uncategorized ಗೇಟ್ ಮ್ಯಾನ್ ನಿರ್ಲಕ್ಷ್ಯ: ರೈಲ್ವೇ ಲೆವೆಲ್ ಕ್ರಾಸಿಂಗ್ ಗೇಟ್ ನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್...

ಗೇಟ್ ಮ್ಯಾನ್ ನಿರ್ಲಕ್ಷ್ಯ: ರೈಲ್ವೇ ಲೆವೆಲ್ ಕ್ರಾಸಿಂಗ್ ಗೇಟ್ ನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ!

22
0

ನಾಗವಾರ ಮುಖ್ಯರಸ್ತೆಯ ರೈಲ್ವೇ ಲೆವೆಲ್ ಕ್ರಾಸಿಂಗ್ (ಎಲ್‌ಸಿ) ಗೇಟ್ ಅನ್ನು ನಿರ್ವಹಿಸುತ್ತಿದ್ದ ಗೇಟ್‌ಮ್ಯಾನ್‌ನ ನಿರ್ಲಕ್ಷ್ಯದಿಂದ ಬೈರ್ ಸವಾರನೋರ್ವ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ. ಬೆಂಗಳೂರು: ನಾಗವಾರ ಮುಖ್ಯರಸ್ತೆಯ ರೈಲ್ವೇ ಲೆವೆಲ್ ಕ್ರಾಸಿಂಗ್ (ಎಲ್‌ಸಿ) ಗೇಟ್ ಅನ್ನು ನಿರ್ವಹಿಸುತ್ತಿದ್ದ ಗೇಟ್‌ಮ್ಯಾನ್‌ನ ನಿರ್ಲಕ್ಷ್ಯದಿಂದ ಬೈರ್ ಸವಾರನೋರ್ವ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ.

ರೈಲು ಹಾದುಹೋದ ನಂತರ ವಾಹನ ಸವಾರರು ಗೇಟ್ ತೆರೆದಿದೆ ಎಂದು ವಾಹನ ಚಲಿಸಿಕೊಂಡು ಬಂದಿದ್ದಾರೆ. ಈ ವೇಳೆ ದಿಢೀರನೇ ಎರಡೂ ಬದಿಯ ಗೇಟ್‌ಗಳು ಏಕಾಏಕಿ ಕೆಳಗೆ ಬಿದ್ದವು. ಈ ವೇಳೆ ಕ್ರಾಸಿಂಗ್ ಬಳಿ ಹತ್ತಾರು ವಾಹನಗಳು ಚಲಿಸುತ್ತಿದ್ದರು. ಅದೃಷ್ಟವಶಾತ್ ಯಾವುದೇ ವಾಹನ ಅಥವಾ ಸವಾರರ ಮೇಲೂ ಗೇಟ್ ಬೀಳಲಿಲ್ಲ. ಆದರೆ ಓರ್ವ ಬೈಕ್ ಸವಾರ ಮಾತ್ರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಬೆಳವಣಿಗೆಯ ಪಥಕ್ಕೆ ಕೊಡುಗೆ ನೀಡುತ್ತದೆ: ಪ್ರಧಾನಿ ಮೋದಿ

ಕೊಚುವೇಲಿ ಎಕ್ಸ್‌ಪ್ರೆಸ್‌ ರೈಲು ಹೊರಡುವಾಗ ನಿನ್ನೆ ಮಧ್ಯಾಹ್ನ 3.58ಕ್ಕೆ ಈ ಘಟನೆ ನಡೆದಿದ್ದು, ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೇಟ್ ಮ್ಯಾನ್ ಚಂದ್ರು ನಿರ್ವಹಿಸುವ ಎಲ್ ಸಿ ಗೇಟ್ ನಂ. 142, ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯಿಂದ ಸುಮಾರು 300 ಮೀ. ರಸ್ತೆಯು ಒಂದು ಕಡೆ ನಾಗವಾರ ಮತ್ತು ಇನ್ನೊಂದು ಬದಿಯಲ್ಲಿ ದೊಡ್ಡಿ, ಫ್ರೇಜರ್ ಟೌನ್ ಮತ್ತು ಶಿವಾಜಿನಗರವನ್ನು ಸಂಪರ್ಕಿಸುತ್ತದೆ. ಇದೇ ಗೇಟ್ ನಲ್ಲಿ ಘಟನೆದಿದ್ದು, ಬೈಕ್ ಸವಾರ ಹಾಗೂ ಪ್ರತ್ಯಕ್ಷದರ್ಶಿ ಎಸ್ ಸಿದ್ದರಾಜು ಎಂಬ ಸಾಮಾಜಿಕ ಕಾರ್ಯಕರ್ತ ಕಾಡುಗೊಂಡನಹಳ್ಳಿಯಿಂದ ನಾಗವಾರಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. 

“ರೈಲ್ವೆ ಸಿಬ್ಬಂದಿ ಗೇಟ್ ತೆರೆದು ಹತ್ತಿರದ ತನ್ನ ಕ್ಯಾಬಿನ್‌ಗೆ ಧಾವಿಸಿದರು. ನನ್ನ ಮುಂದಿದ್ದ ವಾಹನಗಳು ಮುಂದೆ ಸಾಗಿದವು, ನಾನು ಕೂಡ ಹೋಗೋಣವೆಂದು ಬೈಕ್ ಚಲಿಸಲು ಮುಂದಾದಾಗ ಇದ್ದಕ್ಕಿದ್ದಂತೆಯೇ ಗೇಟ್ ಕೆಳಗೆ ಬಂದಿತು. ಹಿಂದೆ ಇದ್ದವರು ಜೋರಾಗಿ ಕಿರುಚಿದರು. ಒಬ್ಬ ಪೋಲೀಸ್ ಧಾವಿಸಿ ಗೇಟ್ ಮ್ಯಾನ್‌ಗೆ ಹೊರಗೆ ಬರುವಂತೆ ಕೂಗಿದರು. ಗೇಟ್ ಕೆಳಗೆ ಬಂದ ಕಾರಣ ಎರಡು ಗೇಟ್‌ಗಳ ನಡುವಿನ ಹಳಿಗಳ ಮೇಲೆ ಕೆಲವು ವಾಹನಗಳು ಸಿಲುಕಿಕೊಂಡವು. ಜನರ ಕೂಗಿನಿಂದ ಹೊರಗ ಬಂದ ಗೇಟ್ ಮ್ಯಾನ್ ಕೂಡಲೇ  ಗೇಟ್ ಏರಿಸಿ, ವಾಹನ ಚಲಿಸಲು ಅನುವುಮಾಡಿಕೊಟ್ಟ. ಬಳಿಕ ಸುತ್ತಮುತ್ತಲಿನವರಲ್ಲಿ ಕ್ಷಮೆ ಕೇಳಿದ ಎಂದು ಸಿದ್ದರಾಜು ಹೇಳಿದರು. 

ಇದನ್ನೂ ಓದಿ: ಬೇಗೂರಿನಲ್ಲಿ 25 ಎಕರೆ ಬಿಡಿಎ ಜಾಗ ಕಬಳಿಕೆ, ಮಾರಾಟ: ಚಿತ್ರ ನಿರ್ಮಾಪಕ ಉಪಮಾಪತಿ ಶ್ರೀನಿವಾಸ ಗೌಡ ಆರೋಪ

“ಎರಡು ಕಬ್ಬಿಣದ ಗೇಟ್‌ಗಳು ಹಠಾತ್ತನೆ ಕೆಳಗಿಳಿಯಿತಾದರೂ ಕೂದಲೆಳೆ ಅಂತರದಲ್ಲಿ ಅನೇಕರು ಅದೃಷ್ಟವಶಾತ್ ಪಾರಾದರು. ಘಟನೆಯಲ್ಲಿ ಕೆಲ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಗಾಯಗೊಂಡಿದ್ದಾರೆ. ನಾನು ಇದನ್ನು ರೈಲ್ವೆ ಸಿಬ್ಬಂದಿಯ ಸಂಪೂರ್ಣ ನಿರ್ಲಕ್ಷ್ಯ ಎಂದು ಕರೆಯುತ್ತೇನೆ ಎಂದು ಅವರು ಹೇಳಿದರು.

ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ ಎಂದು ಕೆ.ಜಿ.ಹಳ್ಳಿ ಸಂಚಾರ ಪೊಲೀಸರು ತಿಳಿಸಿದ್ದಾರೆ. ಈ ಗೇಟ್ ಮತ್ತು ಹತ್ತಿರದ ಇತರ ನಾಲ್ಕು ಗೇಟ್‌ಗಳನ್ನು ತೆಗೆದುಹಾಕಲಾಗುವುದು ಮತ್ತು ಅಂಡರ್‌ಪಾಸ್‌ ನಿರ್ಮಿಸಲಾಗುವುದು ರೈಲ್ವೆಯು ಕೆಲವು ಸಮಯದ ಹಿಂದೆ ನಮಗೆ ತಿಳಿಸಿತ್ತು, ”ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. 

ತಾಂತ್ರಿಕ ದೋಷ, ನಿರ್ಲಕ್ಷ್ಯವಲ್ಲ: ಗೇಟ್ ಮ್ಯಾನ್ ಸ್ಪಷ್ಟನೆ
ಇನ್ನು ಗೇಟ್ ಕಾರ್ಯಾಚರಣೆಗಳನ್ನು ನಿಯಂತ್ರಿಸುವ ವೃತ್ತಾಕಾರದ ತಿರುಳಿನಂತಹ ರಚನೆಯನ್ನು ನಿಯಂತ್ರಿಸುವ ಹ್ಯಾಂಡಲ್ನೊಂದಿಗೆ ಹಸ್ತಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ. ಅದನ್ನು ಸುರಕ್ಷಿತವಾಗಿಸಲು, ಉಕ್ಕಿನ ತಂತಿಯನ್ನು ಹ್ಯಾಂಡಲ್ ಸುತ್ತಲೂ ಕಟ್ಟಲಾಗಿರುತ್ತದೆ ಮತ್ತು ಈ ರಚನೆಯ ಕೆಳಭಾಗಕ್ಕೆ ಜೋಡಿಸಲಾಗುತ್ತದೆ. ಗೇಟ್ ಬಗ್ಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಇದಾಗಿದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. ಅಂತೆಯೇ ಘಟನೆ ಸಂಬಂಧ ಸ್ಪಷ್ಟನೆ ನೀಡಿರುವ ಮಾಜಿ ಸೈನಿಕ, ಗೇಟ್‌ಕೀಪರ್, ಇದು ತನ್ನ ತಪ್ಪಲ್ಲ. ಗಾಳಿಯು ದೊಡ್ಡ ಬಲದಿಂದ ಬೀಸಿತು ಮತ್ತು ಗೇಟ್‌ಗಳನ್ನು ಅಲುಗಾಡಿಸಿತು. ಉಕ್ಕಿನ ತಂತಿಯು ತನ್ನ ಸ್ಥಾನದಿಂದ ಸ್ವಯಂಚಾಲಿತವಾಗಿ ಚಲಿಸಿರಬೇಕು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ:  ಮೋದಿ ಭೇಟಿ ಹಿನ್ನೆಲೆ; ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಯ ಮನವಿ ತಿರಸ್ಕಾರ

ಅಂತೆಯೇ ಈ ಸಂಬಂಧ ಬಾಣಸವಾಡಿ ರೈಲ್ವೇ ನಿಲ್ದಾಣದಲ್ಲಿ ತಮ್ಮ ಮೇಲಧಿಕಾರಿಗಳಿಗೆ ಎಚ್ಚರಿಕೆ ನೀಡುವುದು ಯೋಗ್ಯವಲ್ಲ. ಮೂರು ವರ್ಷಗಳಲ್ಲಿ ನಾನು ಇಲ್ಲಿ ಕೆಲಸ ಮಾಡಿದ್ದೇನೆ, ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here