Home Uncategorized ದೊಡ್ಡಬಳ್ಳಾಪುರ: ಕ್ರಿಕೆಟ್ ಟೂರ್ನಿ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ, ಇಬ್ಬರಿಗೆ ಚೂರಿ ಇರಿದು ಬರ್ಬರ ಹತ್ಯೆ

ದೊಡ್ಡಬಳ್ಳಾಪುರ: ಕ್ರಿಕೆಟ್ ಟೂರ್ನಿ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ, ಇಬ್ಬರಿಗೆ ಚೂರಿ ಇರಿದು ಬರ್ಬರ ಹತ್ಯೆ

24
0
Advertisement
bengaluru

ಶಿವರಾತ್ರಿ ಹಬ್ಬದ ಪ್ರಯುಕ್ತ ಕ್ರಿಕೆಟ್ ಆಡುವಾಗ ನಡೆದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.  ದೊಡ್ಡಬಳ್ಳಾಪುರ: ಶಿವರಾತ್ರಿ ಹಬ್ಬದ ಪ್ರಯುಕ್ತ ಕ್ರಿಕೆಟ್ ಆಡುವಾಗ ನಡೆದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ಘಟನೆ ನಡೆದಿದ್ದು ಕೊಲೆಯಾದವರನ್ನು ಭರತ್, ಪ್ರತೀಕ್ ಎಂದು ಗುರುತಿಸಲಾಗಿದೆ.  

ಬಿಜೆಪಿ ಮುಖಂಡ ಧೀರಜ್​ ಅವರು ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಿದ್ದು, ಈ ವೇಳೆ ನಡೆದ ಜಗಳದಲ್ಲಿ ಭರತ್, ಪ್ರತೀಕ್​ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಕೊಲೆ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಯಾದಗಿರಿ: ಕಾರು – ಲಾರಿ ಮುಖಾಮುಖಿ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು

bengaluru bengaluru

ಟೂರ್ನಿ ವೇಳೆ ಮೈದಾನದಲ್ಲಿ ಕಾರು ನಿಲ್ಲಿಸಿದ್ದನ್ನು ಭರತ್ ಹಾಗೂ ಪ್ರತೀಕ್ ಪ್ರಶ್ನಿಸಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಈ ವೇಳೆ ಗ್ರಾಮಸ್ಥರು ಇತರೆ ಆಟಗಾರರು ಜಗಳ ಬಿಡಿಸಿದ್ದರು. 

ನಂತರ ಭರತ್, ಪ್ರತೀಕ್ ಬಸ್​ ಸ್ಟ್ಯಾಂಡ್​ಗೆ ಬಂದಾಗ ಅಲ್ಲಿಗೆ ಬಂದ ಗುಂಪೊಂದು ಇಬ್ಬರನ್ನು ಅಟ್ಟಾಡಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಘಟನೆ ನಂತರ ಸ್ಥಳ ಉದ್ವಿಗ್ನಗೊಂಡಿದ್ದು ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ, ಪರಿಶೀಲನೆ ನಡೆಸಿದರು. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


bengaluru

LEAVE A REPLY

Please enter your comment!
Please enter your name here