Home Uncategorized 'ಬಿಎಂಎಸ್ ವಿಶ್ವವಿದ್ಯಾಲಯ'ಕ್ಕೆ ಸಂಪುಟ ಸಮ್ಮತಿ

'ಬಿಎಂಎಸ್ ವಿಶ್ವವಿದ್ಯಾಲಯ'ಕ್ಕೆ ಸಂಪುಟ ಸಮ್ಮತಿ

24
0

ಬಿಎಂಎಸ್ ಶಿಕ್ಷಣ ಸಂಸ್ಥೆಯನ್ನು ವಿಶ್ವವಿದ್ಯಾಲಯ ಮಾಡುವ ಪ್ರಸ್ತಾವನೆಗೆ ಸೋಮವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು: ಬಿಎಂಎಸ್ ಶಿಕ್ಷಣ ಸಂಸ್ಥೆಯನ್ನು ವಿಶ್ವವಿದ್ಯಾಲಯ ಮಾಡುವ ಪ್ರಸ್ತಾವನೆಗೆ ಸೋಮವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸಿಎಂ ಬೊಮ್ಮಾಯಿ ಸಂಪುಟದ ಸಚಿವರೊಬ್ಬರು ಬಿಎಂಎಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಜೆಡಿಎಸ್ ಹಿರಿಯ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಸಭೆಯ ಫೋಟೋವನ್ನು ಬಿಡುಗಡೆ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿಕೆ, ದಯಾನಂದ ಪೈ ಅವರನ್ನು ಸಂಸ್ಥೆಯ ಟ್ರಸ್ಟ್‌ನ ಆಜೀವ ಸದಸ್ಯರನ್ನಾಗಿ ಮಾಡುವ ಬದಲು ಸಂಸ್ಥೆಗೆ ವಿಶ್ವವಿದ್ಯಾಲಯ ಎಂದು ಹೆಸರಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: #savesankey: ‘ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ಬೇಡ’: ಕಪ್ಪು ಬಟ್ಟೆ ಧರಿಸಿ ನಿವಾಸಿಗಳ ಪ್ರತಿಭಟನೆ

ಇನ್ನು ಸಾಫ್ಟ್‌ವೇರ್ ಮತ್ತು ಕೈಗಾರಿಕಾ ಎಸ್ಟೇಟ್‌ಗಳಲ್ಲಿ ಮಹಿಳೆಯರಿಗೆ ವಾರಕ್ಕೆ 48 ಗಂಟೆಗಳವರೆಗೆ ಕೆಲಸ ಮಾಡಲು ಅವಕಾಶ ನೀಡುವ ಮಸೂದೆಯನ್ನು ಸಂಪುಟ ಅಂಗೀಕರಿಸಿತು. ಇದು ದಿನಕ್ಕೆ 12 ಗಂಟೆಗಳ ಕಾಲ ಕಚೇರಿಯಿಂದ ನಾಲ್ಕು ದಿನಗಳು ಮತ್ತು ಉಳಿದ ದಿನಗಳಲ್ಲಿ ಮನೆಯಿಂದ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.

ಇದೇ ವೇಳೆ ಜಮೀನು ಮತ್ತು ಮನೆಯ ಅಭಿವೃದ್ಧಿಗೆ ಪಾವತಿಸಬೇಕಾದ ಮೊತ್ತವನ್ನು ಮನ್ನಾ ಮಾಡಲು ಕ್ಯಾಬಿನೆಟ್ ನಿರ್ಧರಿಸಿತು. ಈ ಅಧಿವೇಶನದಲ್ಲಿ ಎರಡು-ಮೂರು ವಿಧೇಯಕಗಳನ್ನು ಮಂಡಿಸಲು ಮತ್ತು ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಮಸೂದೆಯನ್ನು ಪರಿಚಯಿಸುವ ಪ್ರಸ್ತಾವನೆಗಳ ಬಗ್ಗೆ ಸಂಪುಟ ಚರ್ಚಿಸಿತು ಎನ್ನಲಾಗಿದೆ.
 

LEAVE A REPLY

Please enter your comment!
Please enter your name here