Home Uncategorized ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಗುತ್ತಿಗೆದಾರ ಸಂಘ ಲಂಚ ಬೇಡಿಕೆಯ ಗಂಭೀರ ಆರೋಪ: ಜ.18ಕ್ಕೆ ರಾಜ್ಯ...

ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಗುತ್ತಿಗೆದಾರ ಸಂಘ ಲಂಚ ಬೇಡಿಕೆಯ ಗಂಭೀರ ಆರೋಪ: ಜ.18ಕ್ಕೆ ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆಗೆ ನಿರ್ಧಾರ

20
0

ರಾಜ್ಯ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇಂದು ಸುದ್ದಿಗೋಷ್ಠಿ ನಡೆಸಿ ಮತ್ತೊಂದು ಸಂಚಲನಕಾರಿ, ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.  ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇಂದು ಸುದ್ದಿಗೋಷ್ಠಿ ನಡೆಸಿ ಮತ್ತೊಂದು ಸಂಚಲನಕಾರಿ, ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. 

ಬಿಜೆಪಿ ಶಾಸಕ ಜಿ ಎಚ್ ತಿಪ್ಪಾರೆಡ್ಡಿಯವರು ಗುತ್ತಿಗೆದಾರ ಮಂಜುನಾಥ್ ಎಂಬುವವರಿಂದ ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆ ಎಂದು ಆರೋಪಿಸುವ ಆಡಿಯೊವನ್ನು ಇಂದು ಕೆಂಪಣ್ಣ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ.ರಾಜ್ಯ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇಂದು ಸುದ್ದಿಗೋಷ್ಠಿ ನಡೆಸಿ ಮತ್ತೊಂದು ಸಂಚಲನಕಾರಿ, ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. @XpressBengaluru pic.twitter.com/DUE5m4r0UI— kannadaprabha (@KannadaPrabha) January 16, 2023
ಈ ಸಂಬಂಧ ರಾಜ್ಯ ಸರ್ಕಾರ ವಿರುದ್ಧ ನಾಡಿದ್ದು ಜನವರಿ 18ರಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪಕ್ಷಬೇಧವಿಲ್ಲದೆ ಹಲವು ಶಾಸಕರು ಮತ್ತು ಸರ್ಕಾರದ ಸಚಿವರುಗಳು ಕಾಮಗಾರಿ ಗುತ್ತಿಗೆಯಲ್ಲಿ ಲಂಚಕ್ಕೆ ಬೇಡಿಕೆಯೊಡ್ಡುತ್ತಿದ್ದು ಹಣ ಪಾವತಿ ಬಾಕಿ ಇದೆ ಎಂದಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಕೆಂಪಣ್ಣ ಹೇಳಿದ್ದೇನು?: ಗುತ್ತಿಗೆದಾರರಿಗೆ ಸರ್ಕಾರ 25 ಸಾವಿರ ಕೋಟಿ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು. ಲೋಕೋಪಯೋಗಿ ಇಲಾಖೆಯಿಂದ 4 ಸಾವಿರ ಕೋಟಿ ಬಿಲ್ ಬಾಕಿ ಇದೆ. ನಮ್ಮ ಹಣ ಬಾರದಿರುವ ಹಿನ್ನೆಲೆಯಲ್ಲಿ ಬೇಸತ್ತು ಜ.18ರ ನಂತರ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತಗೊಳಿಸಲು ತೀರ್ಮಾನ ಮಾಡಿದ್ದೇವೆ ಎಂದರು. 

ನಾವು ಮಾಡಿರುವ ಆರೋಪಗಳು ಸತ್ಯ ಎಂದು ಸಾಬೀತು ಮಾಡುತ್ತೇವೆ. 25 ಸಾವಿರ ಕೋಟಿ ಬಾಕಿ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕು. KIRDL ನಲ್ಲಿ ಕೆಲ್ಸ ಕೊಡಬೇಡಿ ಅಂದ್ರು ಕೂಡಾ ಕೊಡ್ತಿದ್ದಾರೆ. ಜನವರಿ 18 ರ ನಂತರ ಕಾಮಗಾರಿ ಸ್ಥಗಿತಗೊಳಿಸಲು ತೀರ್ಮಾನ ಮಾಡಿದ್ದೇವೆ. ಲಂಚ ಕೊಟ್ಟಿರೋದಕ್ಕೆ ದಾಖಲೆಗಳು ಇರಲ್ಲ, ಆದರೂ ಕೆಲ ದಾಖಲೆ ಇದೆ. 30 ದಿನ ಆದಮೇಲೆ ಮಾತಾಡ್ತೇವೆ. 19 ರಂದು ಕೋರ್ಟ್ ನಲ್ಲಿ ದಾಖಲೆಗಳನ್ನ ಸಲ್ಲಿಕೆ ಮಾಡ್ತಾಯಿದ್ದೇವೆ. ಇವತ್ತಿನಿಂದ 30 ದಿನಕ್ಕೆ ದಾಖಲೆಗಳನ್ನ ಬಿಡುಗಡೆ ಮಾಡ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ.

ತಿಪ್ಪಾರೆಡ್ಡಿಯಿಂದ ಲಂಚ ಆರಂಭ: ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಲಂಚ ಪಡೆದ ಆರೋಪ ಸಂಬಂಧ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಮಂಜುನಾಥ್ ಮಾತನಾಡಿದ್ದು, ಸೂರ್ಯ ಚಂದ್ರ ಇರೋದು ಎಷ್ಟು ಸತ್ಯನೋ ಭ್ರಷ್ಟಾಚಾರ ಇರೋದು ಸತ್ಯ. 14 ಜನ ಶಾಸಕರ ಲಂಚ ದಾಖಲೆಗಳು ಇದೆ. ಸಂತೋಷ್ ಕೇಸ್ ನಲ್ಲಿ ಬಿ ರಿಪೋರ್ಟ್ ಹಾಕಿದ್ದಾರೆ. ನಮ್ಮ ಅಧ್ಯಕ್ಷರನ್ನ ಅರೆಸ್ಟ್ ಮಾಡಿದ್ದಾರೆ. ಸಂತೋಷ ಪಾಟೀಲ್‌ದು ಏನ್ ಆಗಿತ್ತು? ನಾವು ಒಂದು ದಾಖಲೆ ಬಿಡುಗಡೆ ಮಾಡ್ತೇನೆ. ನಮ್ಮ ಜಿಲ್ಲೆಯಲ್ಲಿ ಭ್ರಷ್ಟಾಚಾರ ಇರಲಿಲ್ಲ. ಚಿತ್ರದುರ್ಗ ಜಿಲ್ಲೆಯ ಶಾಸಕರು ತಿಪ್ಪಾರೆಡ್ಡಿ ಅವರು ಶುರುಮಾಡಿದ್ದಾರೆ. ಲಂಚ ಶುರುಮಾಡಿದ್ದೇ ಶಾಸಕ ತಿಪ್ಪಾರೆಡ್ಡಿ. ಲೋಕಾಯುಕ್ತಕ್ಕೆ ಅಫಿಡೇವಿಟ್ ಮಾಡಿದ್ದೇವೆ. ಒಟ್ಟು 13 ಜನ ಶಾಸಕರು 4-5 ಜನ ಸಚಿವರ ದಾಖಲೆಗಳು ಇದೆ. ತಿಪ್ಪಾರೆಡ್ಡಿ ಅವರು ಲಂಚ ಪಡೆದಿರುವ ಬಗ್ಗೆ ಆಡಿಯೋ ಇದೆ, ವಾಟ್ಸ್ ಆ್ಯಪ್ ರೆಕಾರ್ಡ್ ಕೂಡಾ ಇದೆ. ಶೇ. 25% ಕಮಿಷನ್ ಪಡೆಯುತ್ತಿದ್ದಾರೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here