Home Uncategorized 'ಬೆಂಗಳೂರು ಹೊರವಲಯದ ಅಂತರ್ಜಲದಲ್ಲಿ ಹೆಚ್ಚಿನ ಮಟ್ಟದ ವಿಕಿರಣಶೀಲ ರೇಡಾನ್ ಪತ್ತೆ': ಐಐಎಸ್ಸಿ

'ಬೆಂಗಳೂರು ಹೊರವಲಯದ ಅಂತರ್ಜಲದಲ್ಲಿ ಹೆಚ್ಚಿನ ಮಟ್ಟದ ವಿಕಿರಣಶೀಲ ರೇಡಾನ್ ಪತ್ತೆ': ಐಐಎಸ್ಸಿ

24
0

ಐಟಿ ರಾಜಧಾನಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ(IISc) ಒಂದು ತರಬೇತಿ ಕಾರ್ಯಕ್ರಮ ಏರ್ಪಾಡಾಗಿತ್ತು. ಅದು “ಬದಲಾಗುತ್ತಿರುವ ವಾತಾವರಣದಲ್ಲಿ ಆರೋಗ್ಯ: ಆರೋಗ್ಯ ವೃತ್ತಿಪರರನ್ನು ಸಬಲೀಕರಣಗೊಳಿಸುವುದು” ಎಂಬ ತರಬೇತಿ ಕಾರ್ಯಕ್ರಮ. ಬೆಂಗಳೂರು: ಐಟಿ ರಾಜಧಾನಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ(IISc) ಒಂದು ತರಬೇತಿ ಕಾರ್ಯಕ್ರಮ ಏರ್ಪಾಡಾಗಿತ್ತು. ಅದು “ಬದಲಾಗುತ್ತಿರುವ ವಾತಾವರಣದಲ್ಲಿ ಆರೋಗ್ಯ: ಆರೋಗ್ಯ ವೃತ್ತಿಪರರನ್ನು ಸಬಲೀಕರಣಗೊಳಿಸುವುದು” ಎಂಬ ತರಬೇತಿ ಕಾರ್ಯಕ್ರಮ.

ಇದರಲ್ಲಿ ಪಾಲ್ಗೊಂಡ ಸಂಶೋಧಕರು ಬೆಂಗಳೂರಿನ ಹೊರವಲಯದ ಕೆಲವು ಪ್ರದೇಶಗಳಲ್ಲಿ ಕುಡಿಯಲು ಬಳಸುವ ಅಂತರ್ಜಲದಲ್ಲಿ ಹೆಚ್ಚಿನ ರೇಡಾನ್ ಅಂಶವಿದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ರೇಡಾನ್ ವಿಕಿರಣಶೀಲ ಹೆಚ್ಚುತ್ತಿರುವ ಗಣಿಗಾರಿಕೆಯಿಂದ ಹೊರಹೊಮ್ಮುತ್ತದೆ. ರೇಡಾನ್ ನ್ನು ಮನುಷ್ಯರು ದೀರ್ಘಕಾಲದವರೆಗೆ ಸೇವಿಸಿದಾಗ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ ಎನ್ನುತ್ತಾರೆ ಸಂಶೋಧಕರು.

ತಜ್ಞರ ಪ್ರಕಾರ, ರೇಡಾನ್ ನೈಸರ್ಗಿಕವಾಗಿ ಯುರೇನಿಯಂನಿಂದ ವಿಕಿರಣಶೀಲ ಕೊಳೆಯುವಿಕೆಯ ಮೂಲಕ ರೇಡಿಯಂ ಮತ್ತು ರೇಡಾನ್‌ಗೆ ಬರುತ್ತದೆ. ರೇಡಾನ್ ಪ್ರತಿ ಲೀಟರ್‌ಗೆ 11.1 ಬಿಕ್ಯುವನ್ನು ಹೊಂದಬಹುದೆಂದು ಹೇಳುತ್ತದೆ, ಆದರೆ ಬೆಂಗಳೂರು ಸುತ್ತಮುತ್ತ ಮಿತಿಗಿಂತ 50 ರಿಂದ 100 ಪಟ್ಟು ಹೆಚ್ಚು ಎಂದು ಕಂಡುಬಂದಿದೆ. ಈ ಸಂಶೋಧನೆಯು ಬೆಂಗಳೂರು ಮತ್ತು ಸುತ್ತಮುತ್ತ ಜಿಲ್ಲೆಗಳ ಜನರು ಕುಡಿಯುವ ನೀರಿನಲ್ಲಿ ರೇಡಾನ್ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡುತ್ತದೆ. 

ಗಾಳಿ ಮತ್ತು ನೀರಿನಲ್ಲಿ ರೇಡಾನ್ ಅತಿಯಾಗಿ ಇದ್ದರೆ ಶ್ವಾಸಕೋಶದ ಅಂಗಾಂಶಗಳ ಹಾನಿಗೆ ಕಾರಣವಾಗುತ್ತದೆ, ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ.  ಮೂತ್ರನಾಳದ ಹಾನಿಗೆ, ಮೂತ್ರಕೋಶ ಕ್ಯಾನ್ಸರ್ ಗೆ ಸಹ ಕಾರಣವಾಗುತ್ತದೆ. ಯುರೇನಿಯಂನಿಂದ ರೇಡಾನ್ ಸ್ವಾಭಾವಿಕವಾಗಿ ಬರುವುದರಿಂದ, ಯುರೇನಿಯಂ ಅಂಶವು ತುಂಬಾ ಹೆಚ್ಚಿರಬಹುದು ಎಂದು ಸಂಶೋಧಕರು ಹೇಳುತ್ತಾರೆ. ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಪಾವಗಡ ಸೇರಿದಂತೆ ಬೆಂಗಳೂರಿನ ಹೊರವಲಯದಲ್ಲಿ ಅಂತರ್ಜಲದಲ್ಲಿ ಯುರೇನಿಯಂ ಅಂಶ ಹೆಚ್ಚಿರುವುದನ್ನು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ: ಕರ್ನಾಟಕದ 17 ಕಲುಷಿತ ನದಿಗಳ ಗುಣಮಟ್ಟ ಪರಿಶೀಲನೆ ಆರಂಭ: KSPCB

ನಗರದ ಹೊರವಲಯದ ಕೆಲವು ಭಾಗಗಳಲ್ಲಿ ಯುರೇನಿಯಂ ಮಟ್ಟವು ಪ್ರತಿ ಲೀಟರ್‌ಗೆ 60 ಮೈಕ್ರೋಗ್ರಾಂಗಳ ಅನುಮತಿ ಮಿತಿಗಿಂತ ಪ್ರತಿ ಲೀಟರ್ ನೀರಿನಲ್ಲಿ 8,000 ಮೈಕ್ರೊಗ್ರಾಂಗಳಷ್ಟು ಇರುವುದು ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿಂತಾಮಣಿಯಲ್ಲಿ ಪ್ರತಿ ಲೀಟರ್‌ಗೆ 5000-6000 ಮೈಕ್ರೋಗ್ರಾಂಗಳವರೆಗೆ ಇರುತ್ತದೆ. “ರೇಡಾನ್ ಇರುವಿಕೆಯನ್ನು ಅಧ್ಯಯನ ಮಾಡಲಾಗುತ್ತಿದೆ, ಇದು ಮನುಷ್ಯ ಆರೋಗ್ಯದ ಅತ್ಯಂತ ಕಾಳಜಿಯ ವಿಷಯವಾಗಿದೆ ಎನ್ನುತ್ತಾರೆ ಐಐಎಸ್ಸಿನ ದಿವೇಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ (DCCC)ನ ಪ್ರೊ. ಆರ್ ಶ್ರೀನಿವಾಸನ್. 

ರೇಡಾನ್ ಕುರಿತು ಹೆಚ್ಚಿನ ಅಧ್ಯಯನವಿಲ್ಲ: ಅಧಿಕಾರಿಗಳು
ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಮತ್ತು DCCC ಯ ಪ್ರಾಧ್ಯಾಪಕರಾಗಿರುವ ಡಾ ಹೆಚ್ ಪರಮೇಶ್,  ಕೂಡ ಆರಂಭಿಕ ಅಧ್ಯಯನಗಳು ಚಿಕ್ಕಬಳ್ಳಾಪುರದ ಕೆಲವು ಸ್ಥಳಗಳಲ್ಲಿ ಯುರೇನಿಯಂ ಪ್ರತಿ ಲೀಟರ್ ಗೆ 30ರಿಂದ 60 ಮೈಕ್ರೊಗ್ರಾಂನ ಅನುಮತಿ ಮಿತಿಗಿಂತ ಸಾವಿರದಷ್ಟಿದೆ ಎನ್ನುತ್ತಾರೆ. 

ಕುತೂಹಲಕಾರಿಯಾಗಿ, ಅಂತರ್ಜಲ ಮಂಡಳಿಯ ಕೆಲವು ಅಧಿಕಾರಿಗಳು, ಈಗ ನಿವೃತ್ತರಾಗಿರುವವರು, ನೀರಿನಲ್ಲಿ ರೇಡಾನ್ ಇರುವಿಕೆಯನ್ನು ಅಧ್ಯಯನ ಮಾಡಿದ್ದರೆ, ಪ್ರಸ್ತುತ ಕೆಲಸ ಮಾಡುವ ಅಧಿಕಾರಿಗಳು ತಾವು ಅದರ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಕೈಗೊಂಡಿಲ್ಲ ಎಂಬ ವಾಸ್ತವ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ. 

ಯುರೇನಿಯಂ ಅಂಶವೂ ಹೆಚ್ಚಿರುವುದರಿಂದ ಸಂಸ್ಕರಣೆಯ ನಂತರ ತ್ಯಾಜ್ಯ ನೀರನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬುದರ ಬಗ್ಗೆಯೂ ಗಮನ ಹರಿಸಲಾಗಿದೆ ಎಂದು ಶ್ರೀನಿವಾಸನ್ ತಿಳಿಸಿದರು. ರಿವರ್ಸ್ ಆಸ್ಮೋಸಿಸ್ (ಆರ್‌ಒ) ಘಟಕಗಳ ತ್ಯಾಜ್ಯನೀರಿನ ಅಧ್ಯಯನಗಳು ಯುರೇನಿಯಂನ ಹೆಚ್ಚಿನ ಅಂಶವನ್ನು ಕಂಡುಹಿಡಿದಿದ್ದು, ಕಳವಳಕಾರಿ ವಿಷಯವಾಗಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here