Home Uncategorized ಬೆಳಗಾವಿ: ಅನಧಿಕೃತ ಫಾತಿಮಾ ಮಸೀದಿಗೆ ಬೀಗ ಜಡಿದ ಮಹಾನಗರ ಪಾಲಿಕೆ

ಬೆಳಗಾವಿ: ಅನಧಿಕೃತ ಫಾತಿಮಾ ಮಸೀದಿಗೆ ಬೀಗ ಜಡಿದ ಮಹಾನಗರ ಪಾಲಿಕೆ

20
0

ಕರಾವಳಿ ಭಾಗದಲ್ಲಿದ್ದ ಧರ್ಮ ದಂಗಲ್ ಇದೀಗ ಗಡಿ ಜಿಲ್ಲೆ ಬೆಳಗಾವಿಗೆ ವ್ಯಾಪಿಸಿದೆ. ವಸತಿ ನಿವಾಸವನ್ನು ಅನಧಿಕೃತವಾಗಿ ಮಸೀದಿಯನ್ನಾಗಿ ಬದಲಾಯಿಸಲಾಗಿದೆ ಎಂಬುದು ವಿವಾದಕ್ಕೆ ಕಾರಣವಾಗಿದ್ದು ಈ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಈಗ ಮಸೀದಿಗೆ ಬೀಗ ಜಡಿದಿದ್ದಾರೆ. ಬೆಳಗಾವಿ: ಕರಾವಳಿ ಭಾಗದಲ್ಲಿದ್ದ ಧರ್ಮ ದಂಗಲ್ ಇದೀಗ ಗಡಿ ಜಿಲ್ಲೆ ಬೆಳಗಾವಿಗೆ ವ್ಯಾಪಿಸಿದೆ. ವಸತಿ ನಿವಾಸವನ್ನು ಅನಧಿಕೃತವಾಗಿ ಮಸೀದಿಯನ್ನಾಗಿ ಬದಲಾಯಿಸಲಾಗಿದೆ ಎಂಬುದು ವಿವಾದಕ್ಕೆ ಕಾರಣವಾಗಿದ್ದು ಈ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಈಗ ಮಸೀದಿಗೆ ಬೀಗ ಜಡಿದಿದ್ದಾರೆ.

ನಗರದ ಫಾತೀಮಾ ಮಸೀದಿಗೆ (Mosque) ಬೀಗ ಹಾಕಲಾಗಿದ್ದು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಮಹಾನಗರ ಪಾಲಿಕೆ ಹೇಳಿದೆ. ಬೆಳಗಾವಿಯ (Belagavi) ಸಾರಥಿ ನಗರದ ವಸತಿ ನಿವೇಶನದಲ್ಲಿ ಫಾತೀಮಾ ಮಸೀದಿಯನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಹಿಂದೂಪರ ಸಂಘಟನೆಗಳು, ಬಿಜೆಪಿ ನಾಯಕರು ಸೇರಿ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ಫಾತಿಮಾ ಮಸೀದಿಯಲ್ಲಿ ಧಾರ್ಮಿಕ ಚಟುವಟಿಕೆ ನಿಲ್ಲಿಸುವಂತೆ ನೋಟಿಸ್‌ ನೀಡಿತ್ತು.

ಆದರೂ ಈ ನೋಟಿಸ್‌ಗೆ ಕ್ಯಾರೆ ಎನ್ನದ ಹಿನ್ನೆಲೆಯಲ್ಲಿ ಇದೀಗ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ್‌ ಘಾಳಿ ಅವರು, ವಕ್ಫ್‌ ಬೋರ್ಡ್‌ಗೆ ಕೂಡಲೇ ಮಸೀದಿಗೆ ಬೀಗ ಹಾಕುವಂತೆ ನೋಟಿಸ್‌ ನೀಡಿದ್ದಾರೆ. ಪಾಲಿಕೆ ಆಯುಕ್ತರು ನೋಟಿಸ್ ನೀಡುತ್ತಿದ್ದಂತೆ ವಕ್ಫ್ ಕಮಿಟಿಯವರು ಮಸೀದಿಗೆ ಬೀಗ ಹಾಕಿದ್ದಾರೆ. ಮಸೀದಿ ಮುಂಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.@XpressBengaluru @sunilpatilbgv ಬೆಳಗಾವಿ ನಗರದ ಫಾತೀಮಾ ಮಸೀದಿಗೆ (Mosque) ಬೀಗ ಹಾಕಲಾಗಿದ್ದು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಮಹಾನಗರ ಪಾಲಿಕೆ ಹೇಳಿದೆ. ಬೆಳಗಾವಿಯ (Belagavi) ಸಾರಥಿ ನಗರದ ವಸತಿ ನಿವೇಶನದಲ್ಲಿ ಫಾತೀಮಾ ಮಸೀದಿಯನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. pic.twitter.com/Nr3guEb5ot— kannadaprabha (@KannadaPrabha) January 17, 2023

LEAVE A REPLY

Please enter your comment!
Please enter your name here