Home Uncategorized ಮಂಗಳೂರು: ಲಾಡ್ಜ್‌ನಲ್ಲಿ ಕೇರಳದ ಮೂಲದ ದಂಪತಿಯ ಮೃತದೇಹ ಪತ್ತೆ

ಮಂಗಳೂರು: ಲಾಡ್ಜ್‌ನಲ್ಲಿ ಕೇರಳದ ಮೂಲದ ದಂಪತಿಯ ಮೃತದೇಹ ಪತ್ತೆ

26
0

ಖಾಸಗಿ ಲಾಡ್ಜ್ ವೊಂದರಲ್ಲಿ ಕೇರಳ ಮೂಲದ ದಂಪತಿ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರು: ಖಾಸಗಿ ಲಾಡ್ಜ್ ವೊಂದರಲ್ಲಿ ಕೇರಳ ಮೂಲದ ದಂಪತಿ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 

ಫೆಬ್ರವರಿ 6ರಂದು ಫಳ್ನೀರ್ ನ ಲಾಡ್ಜ್ ನಲ್ಲಿ ರೂಂ ಪಡೆದಿದ್ದ ಕೇರಳ ಮೂಲದ 55 ವರ್ಷದ ರವೀಂದ್ರ ಹಾಗೂ ಅವರ ಪತ್ನಿ 50 ವರ್ಷದ ಸುಧಾ ಮೃತಪಟ್ಟಿದ್ದಾರೆ. 

ಇದನ್ನೂ ಓದಿ: ಉಡುಪಿ: ಅಪ್ರಾಪ್ತ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ 49 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು ಮೃತರು ಕೇರಳ ಮೂಲದವರಾಗಿದ್ದು ಬಟ್ಟೆ ವ್ಯಾಪಾರಿ ಎಂಬ ಮಾಹಿತಿ ಇದೆ. ಆತ್ಮಹತ್ಯೆಗೆ ಕಾರಣ ಏನೆಂದು ಗೊತ್ತಾಗಿಲ್ಲ. ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

LEAVE A REPLY

Please enter your comment!
Please enter your name here