Home Uncategorized ಮತ್ತೆ ಕೋವಿಡ್ ಉಲ್ಬಣ; ಪರಿಸ್ಥಿತಿ ನಿಭಾಯಿಸಲು ಬೆಂಗಳೂರಿನ ಆಸ್ಪತ್ರೆಗಳು ಸಜ್ಜು

ಮತ್ತೆ ಕೋವಿಡ್ ಉಲ್ಬಣ; ಪರಿಸ್ಥಿತಿ ನಿಭಾಯಿಸಲು ಬೆಂಗಳೂರಿನ ಆಸ್ಪತ್ರೆಗಳು ಸಜ್ಜು

11
0

ಹಿಂದಿನ ಕೋವಿಡ್ ಅಲೆಗಳ ವಿರುದ್ಧ ಹೋರಾಡಿದಂತೆ ಮುಂಬರುವ ಕೋವಿಡ್ -19 ಪ್ರಕರಣಗಳ ಉಲ್ಬಣವನ್ನು ನಿಭಾಯಿಸಲು ಸಂಪೂರ್ಣ ಸಿದ್ಧರಾಗಿದ್ದೇವೆ ಎಂದು ಬೆಂಗಳೂರು ಆಸ್ಪತ್ರೆಗಳ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು: ಹಿಂದಿನ ಕೋವಿಡ್ ಅಲೆಗಳ ವಿರುದ್ಧ ಹೋರಾಡಿದಂತೆ ಮುಂಬರುವ ಕೋವಿಡ್ -19 ಪ್ರಕರಣಗಳ ಉಲ್ಬಣವನ್ನು ನಿಭಾಯಿಸಲು ಸಂಪೂರ್ಣ ಸಿದ್ಧರಾಗಿದ್ದೇವೆ ಎಂದು ಬೆಂಗಳೂರು ಆಸ್ಪತ್ರೆಗಳ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ ಪ್ರಕರಣಗಳ ಹೊರೆ ಕಡಿಮೆ ಇರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಆದಾಗ್ಯೂ, ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಬಳಸುವಂತಹ ಕೋವಿಡ್ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. 

ಇದನ್ನೂ ಓದಿ: ಕೋವಿಡ್-19: BF.7 ರೂಪಾಂತರಿ ಭಾರತಕ್ಕೆ ಆತಂಕಕಾರಿಯಲ್ಲ: ತಜ್ಞ ವಿಜ್ಞಾನಿ ರಾಕೇಶ್ ಮಿಶ್ರಾ

ವಿಕ್ಟೋರಿಯಾ ಆಸ್ಪತ್ರೆಯ ನಿವಾಸಿ ವೈದ್ಯಕೀಯ ಅಧಿಕಾರಿ (ಆರ್‌ಎಂಒ) ಡಾ.ಆರ್.  ಶ್ರೀನಿವಾಸ್ ಮಾತನಾಡಿ, ಪ್ರಸ್ತುತ, ಆಸ್ಪತ್ರೆಯಲ್ಲಿ ಕೋವಿಡ್ -19 ರೋಗಿಗಳಿಗೆ ನಾಲ್ಕು ವೆಂಟಿಲೇಟರ್ ಹಾಸಿಗೆಗಳಿವೆ. ಅಗತ್ಯಬಿದ್ದರೆ ಸಂಖ್ಯೆಯನ್ನು ಹೆಚ್ಚಿಸುತ್ತೇವೆ  ಸದ್ಯ ಅಗತ್ಯ ಮೂಲಸೌಕರ್ಯ ಹೊಂದಿರುವುದಾಗಿ ತಿಳಿಸಿದರು. 

ಕೆಸಿ ಜನರಲ್ ಆಸ್ಪತ್ರೆಯ ವೈದ್ಯರು ಮಾತನಾಡಿ, ಪ್ರಸ್ತುತ ಯಾವುದೇ ಕೋವಿಡ್ -19 ಮೀಸಲಾದ ವಾರ್ಡ್‌ಗಳನ್ನು ಹೊಂದಿಲ್ಲ.ಆರೋಗ್ಯ ಇಲಾಖೆಯ ಮಾರ್ಗಸೂಚಿಗಳಿಗಾಗಿ ಕಾಯುತ್ತಿರುವುದಾಗಿ ಹೇಳಿದರು. ಕೋವಿಡ್ ಯೇತರ ರೋಗಿಗಳಿಗೂ ಅದೇ ರೀತಿಯಲ್ಲಿ ಚಿಕಿತ್ಸೆ ನೀಡಬೇಕಾಗಿರುವುದರಿಂದ ಇದಕ್ಕಿದ್ದಂತೆ ಹಾಸಿಗೆಗಳನ್ನು ಕೋವಿಡ್ -19 ವಾರ್ಡ್ ಗೆ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದರು. 

ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿದ ನಂತರ ಆಸ್ಪತ್ರೆ ಸಮಿತಿಗಳು ಸಭೆಗಳನ್ನು ಕರೆಯುವ ನಿರೀಕ್ಷೆಯಿದೆ. ವೈದ್ಯರು ಮತ್ತು ಅಧಿಕಾರಿಗಳು ಜಾಗರೂಕರಾಗಿದ್ದರೆ ಮತ್ತು ಕೋವಿಡ್ ಶಿಷ್ಟಾಚಾರ ಅನುಸರಿಸಿದರೆ ಭಯಪಡುವ ಅಗತ್ಯವಿಲ್ಲ ಎಂದು ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಶನ್ (ಎಫ್‌ಎಐಎಂಎ) ಅಧ್ಯಕ್ಷ ಡಾ. ರೋಹನ್ ಕೃಷ್ಣನ್ ಹೇಳಿದ್ದಾರೆ.

ಹಿಂದಿನ ಅಲೆಗಳ ವಿರುದ್ಧ ಹೋರಾಡಿದ ನಂತರ ಭಾರತದಲ್ಲಿ ಜನರು ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here