Home Uncategorized ಮಹದಾಯಿ ವಿವಾದ: ಗೋವಾ ತಕರಾರು ಅರ್ಜಿ, 'ಅಗತ್ಯ ಅನುಮೋದನೆ ಪಡೆಯುವವರೆಗೆ ಕಳಸಾ-ಬಂಡೂರಿ ಯೋಜನೆ ಮುಂದುವರಿಕೆ ಬೇಡ';...

ಮಹದಾಯಿ ವಿವಾದ: ಗೋವಾ ತಕರಾರು ಅರ್ಜಿ, 'ಅಗತ್ಯ ಅನುಮೋದನೆ ಪಡೆಯುವವರೆಗೆ ಕಳಸಾ-ಬಂಡೂರಿ ಯೋಜನೆ ಮುಂದುವರಿಕೆ ಬೇಡ'; ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್

24
0

ಕರ್ನಾಟಕದ ಕಳಸಾ-ಬಂಡೂರಿ ಯೋಜನೆಗೆ ‘ಸುಪ್ರೀಂ ಕೋರ್ಟ್’ ಸೋಮವಾರ ತಡೆ ನೀಡಿದೆ. ಬೆಳಗಾವಿ: ‘ಅಗತ್ಯ ಅನುಮೋದನೆ ಪಡೆಯುವವರೆಗೆ ಕಳಸಾ-ಬಂಡೂರಿ ಯೋಜನೆ ಮುಂದುವರಿಕೆ ಬೇಡ ಎಂದು ‘ಸುಪ್ರೀಂ ಕೋರ್ಟ್’ ಸೋಮವಾರ ಕರ್ನಾಟಕದ ಮಹದಾಯಿ ಯೋಜನೆಗೆ ತಡೆ ನೀಡಿದೆ.

ಗೋವಾದ ವನ್ಯಜೀವಿ ವಾರ್ಡನ್ ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಂದ ಅಗತ್ಯ ಅನುಮೋದನೆ ಪಡೆಯುವವರೆಗೆ ಕಳಸಾ-ಬಂಡೂರಿ ಯೋಜನೆಗೆ ಕರ್ನಾಟಕ ಸರ್ಕಾರವು ಮುಂದುವರಿಯದಂತೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಕರ್ನಾಟಕಕ್ಕೆ ಮಹದಾಯಿ ನೀರು ಹರಿಸುವ ಯೋಜನೆಗೆ ತಡೆ ನೀಡುವಂತೆ ಕೋರಿ ಗೋವಾ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ಇದನ್ನೂ ಓದಿ: ಮಹದಾಯಿ ಯೋಜನೆಗೆ ನೀಡಿರುವ ಒಪ್ಪಿಗೆ ಹಿಂಪಡೆಯಿರಿ: ಕೇಂದ್ರದ ಮೇಲೆ ಹಲವು ಸಂಘಟನೆಗಳಿಂದ ಒತ್ತಡ

ಮೂಲಗಳ ಪ್ರಕಾರ, ಪ್ರಕರಣದ ಅಂತಿಮ ವಿಚಾರಣೆ ಜುಲೈನಲ್ಲಿ ಬರಲಿದೆ. ಈ ಬಗ್ಗೆ ಮಾತನಾಡಿದ ಗೋವಾದ ಅಡ್ವೊಕೇಟ್ ಜನರಲ್ ದೇವಿದಾಸ್ ಪಂಗಮ್ ಅವರು, ‘ಸುಪ್ರೀಂ ಕೋರ್ಟ್ ಸೋಮವಾರ ತನ್ನ ಹಿಂದಿನ ಆದೇಶವನ್ನು ದಾಖಲಿಸಿದ್ದು, ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆಯದೆ ಕರ್ನಾಟಕವು ಯಾವುದೇ ನಿರ್ಮಾಣ ಚಟುವಟಿಕೆಗಳನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 29 ರ ಅಡಿಯಲ್ಲಿ ಕರ್ನಾಟಕವು ಮಹದಾಯಿ ನೀರನ್ನು ಅಭಯಾರಣ್ಯದಿಂದ ತಿರುಗಿಸಬಹುದೇ ಎಂದು ನಿರ್ಧರಿಸುವ ವಿಷಯವು ಗೋವಾದ ಮುಖ್ಯ ವನ್ಯಜೀವಿ ವಾರ್ಡನ್ ಮುಂದೆ ಬಾಕಿ ಉಳಿದಿದೆ ಎಂದು ನ್ಯಾಯಾಲಯ ಹೇಳಿದೆ ಎಂದು ಪಂಗಮ್ ಹೇಳಿದರು.

ಇದನ್ನೂ ಓದಿ: ‘ಮಹದಾಯಿ ತಿರುವು ಯೋಜನೆ ದುಷ್ಪರಿಣಾಮಗಳ ಅಧ್ಯಯನ’ಕ್ಕೆ ಗೋವಾ ಸರ್ಕಾರ ಮುಂದು

ಈ ಮಧ್ಯೆ, ಗೋವಾ ಗಡಿಯಲ್ಲಿರುವ ಕಣಕುಂಬಿಯಲ್ಲಿ ಕರ್ನಾಟಕ ಸರ್ಕಾರವು ಕಳಸಾ-ಬಂಡೂರಿ ಯೋಜನೆ ಕಾಮಗಾರಿಯನ್ನು ಕಾರ್ಯಗತಗೊಳಿಸಲು ಸಜ್ಜಾಗಿದ್ದು, ಅರಣ್ಯ ಸಚಿವಾಲಯದ ಅನುಮೋದನೆಗಾಗಿ ಕಾಯುತ್ತಿದೆ. ಅರಣ್ಯ ಮತ್ತು ವನ್ಯಜೀವಿ ಅನುಮತಿ ದೊರೆತ ನಂತರವೇ ಯೋಜನೆ ಕಾಮಗಾರಿ ಆರಂಭಿಸಲಿದೆ ಎಂದು ರಾಜ್ಯ ಸರ್ಕಾರ ತನ್ನ ವಾದದಲ್ಲಿ ತಿಳಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಕಳೆದ ತಿಂಗಳು, ಗೋವಾ ಸರ್ಕಾರವು ಮಹದಾಯಿ ನದಿ ನೀರನ್ನು ತಿರುಗಿಸಲು ಕರ್ನಾಟಕ ಸರ್ಕಾರ ಸಲ್ಲಿಸಿದ ವಿವರವಾದ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ನೀಡಿದ ಅನುಮೋದನೆಗೆ ತಡೆ ಕೋರಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿತ್ತು. ಕಳಸ-ಬಂಡೂರ ನದಿಗಳು. ಕಾಯ್ದೆಯಡಿ ವನ್ಯಜೀವಿ ಅಭಯಾರಣ್ಯಗಳ ಮೂಲಕ ನೀರನ್ನು ತಿರುಗಿಸುವುದು ಕಾನೂನುಬಾಹಿರ ಎಂದು ವಾದಿಸಿ ಕರ್ನಾಟಕದ ಡಿಪಿಆರ್‌ಗೆ ಅನುಮೋದನೆ ನೀಡಿರುವುದನ್ನು ಗೋವಾ ಸರ್ಕಾರ ತೀವ್ರವಾಗಿ ವಿರೋಧಿಸಿತ್ತು.

ಇದನ್ನೂ ಓದಿ: ಕಳಸಾ-ಬಂಡೂರಿ ಯೋಜನೆಗೆ ಕಾನೂನಿನ ಪ್ರಕಾರವೇ ಅನುಮೋದನೆ ಸಿಕ್ಕಿದೆ- ಗೋವಾಗೆ ಸಿಎಂ ಬೊಮ್ಮಾಯಿ ತಿರುಗೇಟು

‘ಎಲ್ಲ ಶಾಸನಬದ್ಧ ಅನುಮತಿಗಳನ್ನು ಪಡೆದೇ ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಕೋರ್ಟ್‌ ಪುನರುಚ್ಚರಿಸಿದೆ’ ಎಂದು ಗೋವಾ ಸಿ.ಎಂ ಪ್ರಮೋದ್‌ ಸಾವಂತ್‌ ತಿಳಿಸಿದರು. 
 

LEAVE A REPLY

Please enter your comment!
Please enter your name here