Home Uncategorized ಮಹಾಲಕ್ಷ್ಮಿಲೇಔಟ್ ವೃದ್ದೆ ಹತ್ಯೆ ಪ್ರಕರಣ: ಮೂವರ ಬಂಧನ

ಮಹಾಲಕ್ಷ್ಮಿಲೇಔಟ್ ವೃದ್ದೆ ಹತ್ಯೆ ಪ್ರಕರಣ: ಮೂವರ ಬಂಧನ

10
0
Advertisement
bengaluru

ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದ ವೃದ್ಧೆಯ ಕೈ-ಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿ ಕತ್ತಿನಲ್ಲಿದ್ದ ಚಿನ್ನದ ಸರ, ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸುವಲ್ಲಿ ಶುಕ್ರವಾರ ಯಶಸ್ವಿಯಾಗಿದ್ದಾರೆ. ಬೆಂಗಳೂರು: ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದ ವೃದ್ಧೆಯ ಕೈ-ಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿ ಕತ್ತಿನಲ್ಲಿದ್ದ ಚಿನ್ನದ ಸರ, ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸುವಲ್ಲಿ ಶುಕ್ರವಾರ ಯಶಸ್ವಿಯಾಗಿದ್ದಾರೆ.

ಕಳೆದ ಮೇ.೨೮ರಂದು ಸಂಜೆ ಮಹಾಲಕ್ಷ್ಮಿ ಲೇಔಟ್ ನ ಫೋಸ್ಟ್ ಆಫೀಸ್ ಬಳಿಯ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಕಮಲಮ್ಮ(೮೨) ಅವರ ಕೈ ಕಾಲು ಕಟ್ಟಿ ಕೊಲೆ ಮಾಡಿ, ಚಿನ್ನಾಭರಣಗಳನ್ನು ದೋಚಿದ್ದ ಆರೋಪಿಗಳನ್ನು ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ. ಸಿದ್ದರಾಜು, ಆಶೋಕ್ ಸೇರಿ ಮೂವರು ಬಂಧಿತ ಆರೋಪಿಗಳಾಗಿದ್ದಾರೆ. 

ಇದನ್ನೂ ಓದಿ: ‘ಗುಂಡು ಪಾರ್ಟಿ’ ವೇಳೆ ಕಾಂಗ್ರೆಸ್ ಪಕ್ಷವನ್ನು ಶ್ಲಾಘಿಸಿದ ವ್ಯಕ್ತಿಗೆ ಸ್ವೇಹಿತರಿಂದಲೇ ಥಳಿತ

ಬಂಧಿತ ಸಿದ್ದರಾಜು ಮೂರು ತಿಂಗಳ ಹಿಂದೆ ಪ್ಲಂಬರ್ ಕೆಲಸ ಮಾಡಿದ್ದು, ಮನೆಯಲ್ಲಿ ವೃದ್ದೆ ಒಬ್ಬರೆ ಇದ್ದು, ಅವರ ಬಳಿ ಚಿನ್ನಾಭರಣಗಳಿವೆ ಅದನ್ನ ದೋಚಿದರೇ ಉತ್ತಮ ಜೀವನ ನಡೆಸಬಹುದು ಎಂದು ಯೋಚಿಸಿ ವಿಷಯವನ್ನು ಗೆಳೆಯ ಆಶೋಕ್ ಬಳಿ ಪ್ರಸ್ತಾಪ ಮಾಡಿ ಸಂಚು ಮಾಡಿದ್ದರು. ಕೊಲೆ ನಡೆದ ದಿನ ಎರಡು ಬಾರಿ ಮನೆ ಹತ್ತಿರ ಹೋಗಿದ್ದಾರೆ. ಮೊದಲು ಸಂಜೆ ನಾಲ್ಕು ಘಂಟೆಗೆ ಹೋಗಿ, ಖಾಲಿ ಇದ್ದ ಒಂದು ಮನೆ ಬಾಡಿಗೆ ಕೊಡ್ತಿರಾ ಬಿಸ್ಕಟ್ ಗೋಡನ್ ಮಾಡಲಿದ್ದೇವೆ ಎಂದು ಕೇಳಿದ್ದಾರೆ.

bengaluru bengaluru

ಅಜ್ಜಿ ಇಲ್ಲವೆಂದು ಬಾಗಿಲು ತೆಗೆದಿಲ್ಲ. ಮತ್ತೆ ಸಂಜೆ ಆರು ಗಂಟೆಗೆ ವಾಪಸ್ಸು ಹೋಗಿದ್ದಾರೆ. ಈ ವೇಳೆ ಈ ಹಿಂದೆ ಬಂದಿದ್ದವರೆ ಅಲ್ಲವಾ ಎಂದು ಅಜ್ಜಿ ಬಾಗಿಲು ತೆಗೆದಿದ್ದಾರೆ. ಬಾಗಿಲು ತೆಗೆಯುತಿದ್ದಂತೆ ಅಜ್ಜಿಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ನಂತರ ಅಜ್ಜಿ ಬಳಿಯಿದ್ದ ಎರಡು ಚಿನ್ನದ ಸರ ಮತ್ತು ಎರಡು ಬಂಗಾರದ ಬಳೆ ದೋಚಿ ಪರಾರಿಯಾಗಿದ್ದರು.

ಇದನ್ನೂ ಓದಿ: ಮಂಗಳೂರು: ಸೋಮೇಶ್ವರ ಬೀಚ್ ನಲ್ಲಿ ನೈತಿಕ ಪೊಲೀಸ್ ಗಿರಿ; ಅಪ್ರಾಪ್ತ ಸೇರಿದಂತೆ ಐದು ಮಂದಿ ಬಂಧನ

ಸುದ್ದಿ ತಿಳಿಯುತ್ತಿದ್ದಂತೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಸೆರೆಗೆ ಬಲೆ ಬಿಸಿದ್ದರು. ಈ ಕೊಲೆ ಪಾತಕಿಗಳ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿಗಳು ಮೈಸೂರಿನಲ್ಲಿರುವ ಮಾಹಿತಿ ಆಧಾರದ ಮೇಲೆ ಮೈಸೂರಿಗೆ ಹೋಗಿ ಅಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಅರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ.ಕೊಲೆಯಾದ ಕಮಲ ಅವರ ಪತಿ ಆರು ತಿಂಗಳ ಹಿಂದೆ ಮೃತಪಟ್ಟಿದ್ದು. ಇವರ ಮೂವರು ಮಕ್ಕಳು ನಗರದ ಬೇರೆಡೆ ಪ್ರತ್ಯೇಕವಾಗಿ ನೆಲೆಸಿದ್ದಾರೆ. ಹೀಗಾಗಿ ಮನೆಯಲ್ಲಿ ಕಮಲಾ ಒಂಟಿಯಾಗಿದ್ದರು.
 


bengaluru

LEAVE A REPLY

Please enter your comment!
Please enter your name here