Home Uncategorized ಯಲಹಂಕ ಟೋಲ್ ಬಳಿ ನಿವಾಸಿಗಳಿಗೆ ಉಚಿತ ರಸ್ತೆ ಮಾರ್ಗ: ಶಾಸಕ ಎಸ್‌ಆರ್‌ ವಿಶ್ವನಾಥ್‌

ಯಲಹಂಕ ಟೋಲ್ ಬಳಿ ನಿವಾಸಿಗಳಿಗೆ ಉಚಿತ ರಸ್ತೆ ಮಾರ್ಗ: ಶಾಸಕ ಎಸ್‌ಆರ್‌ ವಿಶ್ವನಾಥ್‌

6
0
Advertisement
bengaluru

ಯಲಹಂಕ ಟೋಲ್ ಸುತ್ತಮುತ್ತಲಿನ ಸ್ಥಳೀಯ ನಿವಾಸಿಗಳ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದ್ದು, ನಿವಾಸಿಗಳಿಗೆ ಉಚಿತ ರಸ್ತೆ ಮಾರ್ಗದ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಎಸ್‌ಆರ್‌ ವಿಶ್ವನಾಥ್‌ ಹೇಳಿದ್ದಾರೆ. ಬೆಂಗಳೂರು: ಯಲಹಂಕ ಟೋಲ್ ಸುತ್ತಮುತ್ತಲಿನ ಸ್ಥಳೀಯ ನಿವಾಸಿಗಳ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದ್ದು, ನಿವಾಸಿಗಳಿಗೆ ಉಚಿತ ರಸ್ತೆ ಮಾರ್ಗದ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಎಸ್‌ಆರ್‌ ವಿಶ್ವನಾಥ್‌ ಹೇಳಿದ್ದಾರೆ.

ಟೋಲ್ ಪ್ಲಾಜಾದಿಂದ 2 ಕಿ.ಮೀ ಅಂತರದಲ್ಲಿರುವ ಮಾರಸಂದ್ರದ ಐಷಾರಾಮಿ ವಸತಿ ಸಂಕೀರ್ಣದ ನಿವಾಸಿಗಳು ಈ ಟೋಲ್ ಗೇಟ್ ಮೂಲಕ ಯಲಹಂಕಕ್ಕೆ ಹೋದಾಗಲೆಲ್ಲಾ 70 ರೂ ಪಾವತಿ ಮಾಡಲೇಬೇಕಾದ ಸ್ಥಿತಿ ಇದೆ. ಇದು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ಗೇಟ್‌ಗಳ 5 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರು ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂಬ ನಿಯಮಗಳ ಉಲ್ಲಂಘನೆಯಾಗಿದೆ. ಆದರೆ ಯಲಹಂಕ ಶಾಸಕ ಎಸ್‌ಆರ್‌ ವಿಶ್ವನಾಥ್‌ ಮಧ್ಯಪ್ರವೇಶದ ಬಳಿಕ ಡಿಸೆಂಬರ್‌ 26ರಿಂದ ಇಲ್ಲಿನ ಪರ್ಯಾಯ ಮಾರ್ಗ ರಚಿಸಲಾಗಿದ್ದು, ಸುಮಾರು 3,500 ನಿವಾಸಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ರದ್ದು: ಕೇಂದ್ರದ ನಿರ್ಧಾರಕ್ಕೆ ಧನ್ಯವಾದ ತಿಳಿಸಿದ ಸಂಸದ ಕಟೀಲ್ 

ಯಲಹಂಕ ಪ್ರವೇಶಿಸಲು ರಾಜ್ಯ ಹೆದ್ದಾರಿಯಲ್ಲಿರುವ ದೊಡ್ಡಬಳ್ಳಾಪುರ ಮುಖ್ಯರಸ್ತೆಯಲ್ಲಿರುವ ಕಡತನಮಲ ಟೋಲ್ ಗೇಟ್ ಬಳಸಿ ಮನೆಗೆ ಮರಳಬೇಕಾಗಿದ್ದ ಪ್ರಾವಿಡೆಂಟ್ ವೆಲ್ವರ್ತ್ ಸಿಟಿ (ಪಿಡಬ್ಲ್ಯುಸಿ) ನಿವಾಸಿಗಳು ಇದೀಗ ನಿರಾಳರಾಗಿದ್ದಾರೆ. ಈ ಹಿಂದೆ ಅವರು 70 ರೂಪಾಯಿಗಳನ್ನು ನಗದು ರೂಪದ ಟೋಲ್ ಮತ್ತು ಫಾಸ್ಟ್ಯಾಗ್ ಬಳಕೆದಾರರಿಗೆ 45 ರೂಪಾಯಿಗಳ ಪಾವತಿಸುತ್ತಿದ್ದರು. ಟೋಲ್ ವ್ಯವಸ್ಥೆಯು ಪಿಪಿಪಿ ಮಾದರಿಯಾಗಿದ್ದು, ರಾಜ್ಯ ಸರ್ಕಾರ ರಾಮಲಿಂಗ ನಿರ್ಮಾಣ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ.

bengaluru bengaluru

ಈ ಬಗ್ಗೆ ಮಾತನಾಡಿರುವ ನಿವಾಸಿಯೊಬ್ಬರು, “ಗುತ್ತಿಗೆದಾರರು 5-ಕಿಮೀ ವ್ಯಾಪ್ತಿಯಲ್ಲಿರುವ ಗ್ರಾಮಸ್ಥರಿಗೆ ಉಚಿತ ಪ್ರವೇಶವನ್ನು ಪಡೆಯಲು ಅನುಮತಿ ನೀಡಿಲಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ನಮಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಹೇಳಿದರು. ಆದರೆ, ಅಪಾರ್ಟ್‌ಮೆಂಟ್ ನಿವಾಸಿಗಳ ವಿರುದ್ಧ ಅಂತಹ ಯಾವುದೇ ನಿಯಮವಿಲ್ಲ ಮತ್ತು ನಾವು ಅದನ್ನು ತೀವ್ರವಾಗಿ ವಿರೋಧಿಸಿದ್ದೇವೆ. ಆದರೆ ಈ ಬಗ್ಗೆ ಗುತ್ತಿಗೆದಾರರು ಪಟ್ಟುಹಿಡಿದಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ರಾಜ್ಯದ ಹೆದ್ದಾರಿಗಳಲ್ಲಿರುವ ಅನಧಿಕೃತ ಟೋಲ್ ತೆರವುಗೊಳಿಸಲು ಎನ್ ಎಚ್ಎಐ ಒಪ್ಪಿಗೆ: ಸಚಿವ ಸಿಸಿ ಪಾಟೀಲ್

ಶನಿವಾರ RWA ಪ್ರತಿನಿಧಿಗಳು ಶಾಸಕರನ್ನು ಭೇಟಿ ಮಾಡಿದ್ದು, ಅವರು PWC ನಿವಾಸಿಗಳಿಂದ ಯಾವುದೇ ಟೋಲ್ ಶುಲ್ಕವನ್ನು ಸಂಗ್ರಹಿಸಬಾರದು ಎಂದು ಗುತ್ತಿಗೆದಾರರಿಗೆ ಸೂಚಿಸಿದರು ಎಂದು ಸಂಘದ ಸದಸ್ಯರು ಹೇಳಿದರು. ‘ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಶಾಸಕರು ಸೌಹಾರ್ದಯುತವಾಗಿ ಜವಾಬ್ದಾರಿ ತೋರಿಸುತ್ತಿದ್ದಾರೆ. ನಾನು ಕಳೆದ 11 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇನೆ. 10 ವರ್ಷಗಳ ಹಿಂದೆ ಚುನಾವಣೆಗೂ ಮುನ್ನ ನಡೆದದ್ದೇ ಪುನರಾವರ್ತನೆಯಾಗಿದೆ. ನಾವು ನಾಲ್ಕು ವರ್ಷಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ಚುನಾವಣೆಯ ಮೊದಲು ವಿನಾಯಿತಿ ಸಂಭವಿಸುತ್ತದೆ, ಎಂದು ಮನೆ ಮಾಲೀಕರು ಹೇಳಿದರು.

ವಿಶ್ವನಾಥ್ ಅವರು ಗುತ್ತಿಗೆದಾರರೊಂದಿಗೆ ಮಾತನಾಡಿ ನಿವಾಸಿಗಳಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿರುವುದನ್ನು ದೃಢಪಡಿಸಿದರು ಮತ್ತು ಗುತ್ತಿಗೆದಾರರೂ ಕೂಡ ಅದಕ್ಕೆ ಒಪ್ಪಿದ್ದಾರೆ ಎನ್ನಲಾಗಿದೆ. ಚುನಾವಣೆ ಸಂಬಂಧಿತ ತುಷ್ಟೀಕರಣದ ಆರೋಪಗಳನ್ನು ನಿರಾಕರಿಸಿದ ಶಾಸಕರು, “ನಾನು ನನ್ನ ಕ್ಷೇತ್ರದ ಗ್ರಾಮಸ್ಥರನ್ನು ಭೇಟಿ ಮಾಡುತ್ತಲೇ ಇರುತ್ತೇನೆ. ನನ್ನ ಕ್ಷೇತ್ರದ ಜನರೊಂದಿಗೆ ನಾನು ಬಲವಾದ ಬಾಂಧವ್ಯ ಹೊಂದಿದ್ದೇನೆ ಮತ್ತು ಅವರ ಕುಂದುಕೊರತೆಗಳನ್ನು ಪರಿಹರಿಸುತ್ತೇನೆ ಎಂದರು. 
 


bengaluru

LEAVE A REPLY

Please enter your comment!
Please enter your name here