Home Uncategorized ಸಿಎಂ ಬೊಮ್ಮಾಯಿ ಭರವಸೆ ನೀಡಿದರೂ ಅಂಧ ಕಲಾ ದಂಪತಿಗೆ ಸೂರು ನೀಡದ ಸರ್ಕಾರ!

ಸಿಎಂ ಬೊಮ್ಮಾಯಿ ಭರವಸೆ ನೀಡಿದರೂ ಅಂಧ ಕಲಾ ದಂಪತಿಗೆ ಸೂರು ನೀಡದ ಸರ್ಕಾರ!

17
0
Advertisement
bengaluru

ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಭರವಸೆ ನೀಡಿದರೂ ರಾಜ್ಯ ಸರ್ಕಾರ  ಮೈಸೂರಿನ ಪ್ರತಿಭಾವಂತ ಅಂಧ ಕಲಾ ದಂಪತಿಗಳಿಗೆ ರಾಜ್ಯ ಸರ್ಕಾರ ಸೂರು ನೀಡದೇ ನಿರ್ಲಕ್ಷ್ಯ ವಹಿಸಿದೆ. ಮೈಸೂರು: ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಭರವಸೆ ನೀಡಿದರೂ ರಾಜ್ಯ ಸರ್ಕಾರ  ಮೈಸೂರಿನ ಪ್ರತಿಭಾವಂತ ಅಂಧ ಕಲಾ ದಂಪತಿಗಳಿಗೆ ರಾಜ್ಯ ಸರ್ಕಾರ ಸೂರು ನೀಡದೇ ನಿರ್ಲಕ್ಷ್ಯ ವಹಿಸಿದೆ.

ಮೈಸೂರಿನಲ್ಲಿ ಆಶ್ರಯ ಪಡೆಯಲು ಕಳೆದ ಎರಡು ವರ್ಷಗಳಿಂದ ಒಂದು ಬಸ್ ನಿಲ್ದಾಣದಿಂದ ಮತ್ತೊಂದು ಬಸ್ ನಿಲ್ದಾಣಕ್ಕೆ ಅಲೆಯುತ್ತಿರುವ ಕುಮಾರ್(38) ಮತ್ತು ಸುಧಾ ಮಣಿ(37) ದೃಷ್ಟಿ ವಿಕಲಚೇತನರಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹಾರ್ಮೋನಿಯಂ ಮತ್ತು ತಬಲಾ ನುಡಿಸುವ ಮೂಲಕ ಜೀವನ ನಡೆಸುತ್ತಿದ್ದಾರೆ.

ಇದನ್ನು ಓದಿ: ಪತ್ನಿಯ ಒಪ್ಪಿಗೆಯಿಲ್ಲದೆ ಪತಿ ಮನೆಯ ವಸ್ತುಗಳು, ಆಭರಣ ತೆಗೆದುಕೊಳ್ಳಲು ಕಾನೂನಿನಲ್ಲಿ ಅನುಮತಿ ಇಲ್ಲ: ದೆಹಲಿ ಹೈಕೋರ್ಟ್

ಈ ದಂಪತಿ ‘ಜನತಾ ದರ್ಶನ’ದಲ್ಲಿ ತಮ್ಮನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಸ್ವತಃ ಸಿಎಂ ಮನೆ ಒದಗಿಸುವ ಭರವಸೆ ನೀಡಿದ್ದರು. ಆದರೆ ಅವರ ಕಡತ ಮುಂದೆ ಸಾಗಿದಂತೆ ಕಾಣುತ್ತಿಲ್ಲ. ಅಧಿಕಾರಿಗಳು ಇವರ ಸಂಕಷ್ಟಕ್ಕೆ ಸ್ಪಂದಿಸದಿರುವುದು ದುಃಖಕರ ವಿಚಾರ.

bengaluru bengaluru

ಈ ದಂಪತಿಗಳು ನಿತ್ಯ ಬಸ್ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಆಶ್ರಯ ಪಡೆದು ಹಾಡುವುದರಿಂದ ಬರುವ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ.

ಚನ್ನರಾಯಪಟ್ಟಣದವರಾದ ಕುಮಾರ್ ಹುಟ್ಟು ಕುರುಡರಾಗಿದ್ದು, ಎಸ್‌ಎಸ್‌ಎಲ್‌ಸಿವರೆಗೆ ಅಂಧರ ಶಾಲೆಯಲ್ಲಿ ಓದಿದ್ದರು. ಆದರೆ, ಕುಟುಂಬದ ನೆರವು ಸಿಗದ ಕಾರಣ ಶಿಕ್ಷಣ ಮುಂದುವರಿಸಲಾಗಲಿಲ್ಲ. ನಂತರ ಅವರು ಮನೆಯಿಂದ ಹೊರಬಂದು ಹಾರ್ಮೋನಿಯಂ ಮತ್ತು ತಬಲಾ ನುಡಿಸುವುದನ್ನು ಕಲಿತರು ಮತ್ತು ರೇಡಿಯೊದಲ್ಲಿ ಹಾಡುಗಳನ್ನು ಕೇಳುವ ಮೂಲಕ ತಮ್ಮ ಗಾಯನ ಕೌಶಲ್ಯವನ್ನು ಹೆಚ್ಚಿಸಿಕೊಂಡರು.

2021 ರಲ್ಲಿ, ಪಿರಿಯಾಪಟ್ಟಣ ತಾಲೂಕಿನ ಸುಧಾ ಮಣಿ ಅವರು ಸಹ ಹುಟ್ಟಿನಿಂದಲೇ ಕುರುಡರಾಗಿದ್ದು, ಅವರು ಬಸ್ ನಿಲ್ದಾಣದ ಬಳಿ ಹಾಡುವುದನ್ನು ಕೇಳಿದ ಕುಮಾರ್, ಅವರನ್ನು ಭೇಟಿ ಮಾಡಿದರು. ನಂತರ ಸ್ನೇಹಿತರಾದರು ಮತ್ತು ಮದುವೆಯಾಗಲು ನಿರ್ಧರಿಸಿದರು. ಆದರೆ, ಎರಡು ವರ್ಷ ಕಳೆದರೂ ಇಂದಿಗೂ ಅವರಿಗೆ ವಾಸಿಸಲು ಸೂರು ಸಿಕ್ಕಿಲ್ಲ. ನಮಗೆ ಮನೆ ಮಂಜೂರು ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಆದರೆ ಇದುವರೆಗೂ ಮನೆ ನೀಡಿಲ್ಲ ಎಂದು ಅಂಧ ದಂಪತಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮನೆ ನೀಡುವ ಬಗ್ಗೆ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ನಾವು ಅಂಗವಿಕಲರಿಗೆ ನೀಡುವ ಮಾಸಿಕ ಪಿಂಚಣಿ ಪಡೆಯುತ್ತೇವೆ. ಆದರೆ ಅದು ಸಾಕಾಗುವುದಿಲ್ಲ. ನಾನು ಸ್ವಂತ ಸಂಗೀತಗಾರರ ತಂಡ ಮತ್ತು ಬ್ಯಾಂಡ್ ಅನ್ನು ರಚಿಸಿ, ಸಾರ್ವಜನಿಕರಿಗೆ ಆರ್ಕೆಸ್ಟ್ರಾ ಆಯೋಜಿಸುವುದು ನನ್ನ ಗುರಿ ”ಎಂದು ಕುಮಾರ್ ಹೇಳಿದ್ದಾರೆ.


bengaluru

LEAVE A REPLY

Please enter your comment!
Please enter your name here