Home Uncategorized ಸಿರಿಧಾನ್ಯಗಳ ಇತಿಹಾಸ ತಿಳಿಸಲು 'ಮಿಲೆಟ್ಸ್ ಗ್ಯಾಲರಿ' ಸ್ಥಾಪಿಸಿದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ

ಸಿರಿಧಾನ್ಯಗಳ ಇತಿಹಾಸ ತಿಳಿಸಲು 'ಮಿಲೆಟ್ಸ್ ಗ್ಯಾಲರಿ' ಸ್ಥಾಪಿಸಿದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ

17
0
Advertisement
bengaluru

ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನು ಆಚರಿಸುತ್ತಿರುವ ಈ ಹೊತ್ನಿನಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (ಯುಎಎಸ್) ಬಹುಮುಖ ಧಾನ್ಯವನ್ನು ಉತ್ತೇಜಿಸುವಲ್ಲಿ ಅಗತ್ಯವಿರುವ ಎಲ್ಲ ಕೆಲಸವನ್ನು ಮಾಡಿದೆ. ಯುಎಎಸ್ ಇದೇ ಮೊದಲ ಬಾರಿಗೆ ಮಿಲೆಟ್ಸ್ (ಸಿರಿಧಾನ್ಯ) ಗ್ಯಾಲರಿಯನ್ನು ಸ್ಥಾಪಿಸಿದೆ.  ಬೆಂಗಳೂರು: ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನು ಆಚರಿಸುತ್ತಿರುವ ಈ ಹೊತ್ನಿನಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (ಯುಎಎಸ್) ಬಹುಮುಖ ಧಾನ್ಯವನ್ನು ಉತ್ತೇಜಿಸುವಲ್ಲಿ ಅಗತ್ಯವಿರುವ ಎಲ್ಲ ಕೆಲಸವನ್ನು ಮಾಡಿದೆ. ಯುಎಎಸ್ ಇದೇ ಮೊದಲ ಬಾರಿಗೆ ಮಿಲೆಟ್ಸ್ (ಸಿರಿಧಾನ್ಯ) ಗ್ಯಾಲರಿಯನ್ನು ಸ್ಥಾಪಿಸಿದೆ. ಗುರುವಾರ ಉದ್ಘಾಟಿಸಲಾಗಿರುವ ಗ್ಯಾಲರಿಯಲ್ಲಿ ರೈತರು, ವಿದ್ಯಾರ್ಥಿಗಳು ಮತ್ತು ಇತರ ಉತ್ಸಾಹಿಗಳ ಅನುಕೂಲಕ್ಕಾಗಿ ಸಿರಿಧಾನ್ಯಗಳ ಇತಿಹಾಸ, ಕೊಡುಗೆಗಳು ಮತ್ತು ಇತರ ಮಾಹಿತಿಯನ್ನು ಪ್ರದರ್ಶಿಸುತ್ತದೆ.

ಗ್ಯಾಲರಿಯು ಸಿರಿಧಾನ್ಯಗಳಿಗೆ ಮಾಹಿತಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಸಿರಿಧಾನ್ಯ ಸಂಶೋಧನೆಗೆ ಯುಎಎಸ್ ಕೊಡುಗೆಗಳನ್ನು ಎತ್ತಿ ತೋರಿಸುತ್ತದೆ. ಜೊತೆಗೆ ಕೃಷಿ ಪದ್ಧತಿಗಳು, ನಾಟಿ ಮಾಡುವಿಕೆ ಮತ್ತು ಸಿರಿಧಾನ್ಯಗಳ ಸಂಸ್ಕರಣೆಯ ಮಾಹಿತಿಯನ್ನು ತೋರಿಸುತ್ತದೆ. ಯುಎಎಸ್ ಅಗ್ರಿಕಲ್ಚರಲ್ ಸೈನ್ಸಸ್ ಮ್ಯೂಸಿಯಂ ಕಾಂಪ್ಲೆಕ್ಸ್‌ನಲ್ಲಿ ಆಯೋಜಿಸಲಾದ ಗ್ಯಾಲರಿಯಲ್ಲಿ ಸಿರಿಧಾನ್ಯದಿಂದ ಮಾಡಿದ ವಿವಿಧ ರೀತಿಯ ತಿಂಡಿಗಳನ್ನು ಸಹ ಪ್ರದರ್ಶನಕ್ಕಿಡಲಾಗಿದೆ.

ಇದನ್ನೂ ಓದಿ: ಸಿರಿಧಾನ್ಯಕ್ಕೆ ಉತ್ತೇಜನ: ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯದ ತಿಂಡಿ ತಿನಿಸು, ಪಾನೀಯ ಬಳಸಲು ಸುತ್ತೋಲೆ

ಈಮಧ್ಯೆ, ಮಾರ್ಚ್ 4 ಮತ್ತು 5 ರಂದು ನಡೆಯಲಿರುವ ಮುಂಬರುವ ‘ರಾಷ್ಟ್ರೀಯ ಸಿರಿಧಾನ್ಯ ಶೃಂಗಸಭೆ 2023’ ಕ್ಕಾಗಿ ಯುಎಎಸ್ ‘ಸಿರಿಧಾನ್ಯ: ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ’ ಎಂಬ ಥೀಮ್ ಅನ್ನು ಘೋಷಿಸಿತು. ಯುಎಎಸ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫುಡ್ ಟೆಕ್ನಾಲಜಿ, ಎಂಟರ್‌ಪ್ರೆನ್ಯೂರ್‌ಶಿಪ್ ಅಂಡ್ ಮ್ಯಾನೇಜ್‌ಮೆಂಟ್, ತಂಜಾವೂರು (ಎನ್‌ಐಎಫ್‌ಟಿಇಎಂ-ಟಿ) ​​ಜಂಟಿಯಾಗಿ ಆಯೋಜಿಸಿರುವ ಶೃಂಗಸಭೆಯನ್ನು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟಿಸಲಿದ್ದಾರೆ.

bengaluru bengaluru

ಶೃಂಗಸಭೆಯು ಸಿರಿಧಾನ್ಯ ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಪೋಷಿಸುವುದು ಮತ್ತು ಅಭಿವೃದ್ಧಿಪಡಿಸುವುದು, ಜೊತೆಗೆ ಉದ್ಯಮಿಗಳನ್ನು ಉತ್ತೇಜಿಸುವುದು, ನೂತನ ಮತ್ತು ಸ್ಥಾಪಿತ ಉತ್ಪನ್ನಗಳನ್ನು ಉತ್ತೇಜಿಸುವುದು, ಪೌಷ್ಟಿಕಾಂಶದ ಮಧ್ಯಸ್ಥಿಕೆಗಳು, ಕೌಶಲ್ಯ ಪ್ರಚಾರ ಮತ್ತು ಮಾರುಕಟ್ಟೆ ತಂತ್ರಗಳ ಬಗ್ಗೆ ಅರಿವು ಮೂಡಿಸುತ್ತದೆ.

ಇದನ್ನೂ ಓದಿ: ‘ಸಿರಿಧಾನ್ಯ… ಶ್ರೀ ಅನ್ನ’: ಭಾರತವನ್ನು ಸಿರಿಧಾನ್ಯ ತವರಾಗಿಸಲು ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಪಣ

ಸರ್ಕಾರಿ ಇಲಾಖೆಗಳು, ಶೈಕ್ಷಣಿಕ ಸಂಸ್ಥೆಗಳು, ಎನ್‌ಜಿಒಗಳು, ಸ್ವಸಹಾಯ ಗುಂಪುಗಳು ಮತ್ತು ಖಾಸಗಿ ಕಂಪನಿಗಳ 200 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗುವುದು. ಶೃಂಗಸಭೆಯು ಸರ್ಕಾರದ ಯೋಜನೆಗಳು, ಇತ್ತೀಚಿನ ಟ್ರೆಂಡ್‌ಗಳು, ಮೌಲ್ಯವರ್ಧನೆಗಾಗಿ ತಂತ್ರಜ್ಞಾನಗಳು ಮತ್ತು ರೈತರು ಮತ್ತು ಉದ್ಯಮಿಗಳನ್ನು ಗುರಿಯಾಗಿಟ್ಟುಕೊಂಡು ವಿವಿಧ ವಿಷಯಗಳ ಕುರಿತು ಎಂಟು ತಾಂತ್ರಿಕ ಸೆಷನ್‌ಗಳನ್ನು ಒಳಗೊಂಡಿರುತ್ತದೆ.


bengaluru

LEAVE A REPLY

Please enter your comment!
Please enter your name here