Home Uncategorized ಹೈಕೋರ್ಟ್ ಆದೇಶ ಧಿಕ್ಕರಿಸಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸುತ್ತಲೂ ವಿವಿಧ ಪಕ್ಷಗಳ ರಾಜಕೀಯ ನಾಯಕರ ಪೋಸ್ಟರ್

ಹೈಕೋರ್ಟ್ ಆದೇಶ ಧಿಕ್ಕರಿಸಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸುತ್ತಲೂ ವಿವಿಧ ಪಕ್ಷಗಳ ರಾಜಕೀಯ ನಾಯಕರ ಪೋಸ್ಟರ್

25
0
Advertisement
bengaluru

ನಗರದಾದ್ಯಂತ ಬ್ಯಾನರ್, ಪೋಸ್ಟರ್ ಮತ್ತು ಕಟೌಟ್‌ಗಳನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದ್ದರೂ, ವಿವಿಧ ರಾಜಕೀಯ ಪಕ್ಷಗಳು ಇನ್ನೂ ಅದನ್ನೂ ಬಿಟ್ಟಿಲ್ಲ. ದೊಮ್ಮಲೂರು-ಇಂದಿರಾನಗರ ಜಂಕ್ಷನ್ ಸುತ್ತಲೂ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ತಮ್ಮದು ಎಂದು ಹೇಳಿಕೊಂಡಿರುವ ವಿವಿಧ ಪಕ್ಷಗಳ ಭಿತ್ತಿ ಪತ್ರಗಳು ರಾರಾಜಿಸುತ್ತಿವೆ. ಬೆಂಗಳೂರು: ನಗರದಾದ್ಯಂತ ಬ್ಯಾನರ್, ಪೋಸ್ಟರ್ ಮತ್ತು ಕಟೌಟ್‌ಗಳನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದ್ದರೂ, ವಿವಿಧ ರಾಜಕೀಯ ಪಕ್ಷಗಳು ಇನ್ನೂ ಅದನ್ನೂ ಬಿಟ್ಟಿಲ್ಲ. ದೊಮ್ಮಲೂರು-ಇಂದಿರಾನಗರ ಜಂಕ್ಷನ್ ಸುತ್ತಲೂ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ತಮ್ಮದು ಎಂದು ಹೇಳಿಕೊಂಡಿರುವ ವಿವಿಧ ಪಕ್ಷಗಳ ಭಿತ್ತಿ ಪತ್ರಗಳು ರಾರಾಜಿಸುತ್ತಿದ್ದು, ಬಿಬಿಎಂಪಿಯಿಂದ ಅನುಮತಿ ಪಡೆದಿರುವ ಪ್ರದೇಶದ ವಿವಿಧ ಖಾಸಗಿ ಸಂಸ್ಥೆಗಳು ಇದಕ್ಕೆ ಅನುದಾನ ನೀಡುತ್ತಿವೆ.

ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಬೆಂಬಲಿಗರು ಈ ಕೆಲಸ ತಮ್ಮದು ಎಂದು ಕಟೌಟ್ ಹಾಕಿದ್ದಾರೆ. ಬಿಜೆಪಿ ಮುಖಂಡ ಹಾಗೂ ಮಾಜಿ ಕಾರ್ಪೊರೇಟರ್ ಶಿವಕುಮಾರ್ ಬೆಂಬಲಿಗರು ಕೂಡ ಇದನ್ನೇ ಹೇಳಿಕೊಂಡು ಕಟೌಟ್ ಹಾಕಿದ್ದಾರೆ. ರಾಜಕೀಯ ನಾಯಕರ ಬೆಂಬಲಿಗರು ಪೋಸ್ಟರ್‌ಗಳನ್ನು ಹಾಕುವ ಮೂಲಕ ಓಲ್ಡ್ ಏರ್‌ಪೋರ್ಟ್ ರಸ್ತೆಯ 200 ಮೀ ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವರದಿಗಳ ಪ್ರಕಾರ, ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆಯನ್ನು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರು ಜನವರಿ 15 ರಂದು ಅನಾವರಣಗೊಳಿಸಲಿದ್ದಾರೆ. ಶಿವಕುಮಾರ್ ಬೆಂಬಲಿಗರು ಶಾಂತಿನಗರದ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಬೃಹತ್ ಬ್ಯಾನರ್‌ಗಳನ್ನು ಹಾಕಿದ್ದಾರೆ.

ಇದನ್ನೂ ಓದಿ: ನಗರದಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್​ಗಳು: ಹೈಕೋರ್ಟ್​ ಆದೇಶಕ್ಕೆ ಕ್ಯಾರೆ ಎನ್ನದ ರಾಜಕಾರಣಿಗಳ ಬೆಂಬಲಿಗರು!

bengaluru bengaluru

ಕಳೆದ ಬಾರಿ ದೊಮ್ಮಲೂರು ವಾರ್ಡ್ ಪ್ರತಿನಿಧಿಸಿದ್ದ ಲಕ್ಷ್ಮೀನಾರಾಯಣ ಗುಂಡಣ್ಣ ತಮ್ಮ ಬೆಂಬಲಿಗರಿಗೆ ಒಂದೇ ಒಂದು ಪೋಸ್ಟರ್ ಕೂಡ ಹಾಕದಂತೆ ಮನವಿ ಮಾಡಿದ್ದಾರೆ. ‘ಹೈಕೋರ್ಟ್ ನಿರ್ದೇಶನಗಳ ಬಗ್ಗೆ ನನಗೆ ತಿಳಿದಿದೆ ಮತ್ತು ನಾನು ಈ ಪೋಸ್ಟರ್ ಸಂಸ್ಕೃತಿಯಲ್ಲಿ ಭಾಗಿಯಾಗುವುದಿಲ್ಲ’ ಎಂದು ಗುಂಡಣ್ಣ ಹೇಳಿದರು.

ಹೈಕೋರ್ಟ್ ಆದೇಶ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಕಂದಾಯ ಇಲಾಖೆ ವಿಶೇಷ ಆಯುಕ್ತ ಆರ್.ಎಲ್. ದೀಪಕ್ ಮಾತನಾಡಿ, ‘ಈಗಾಗಲೇ ಎಂಟು ವಲಯಗಳ ಎಲ್ಲಾ ಜಂಟಿ ಆಯುಕ್ತರು ಹಾಗೂ ಬಿಬಿಎಂಪಿಯ ಕಂದಾಯ ಅಧಿಕಾರಿಗಳಿಗೆ ಬ್ಯಾನರ್ ತೆರವು ಮಾಡಿ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ.

ಈ ಘಟನೆಗೂ ಇದು ಅನ್ವಯಿಸುತ್ತದೆ. ನಾವು ಎಲ್ಲಾ ಬ್ಯಾನರ್‌ಗಳು ಮತ್ತು ಕಟೌಟ್‌ಗಳನ್ನು ತೆಗೆದುಹಾಕುತ್ತೇವೆ ಮತ್ತು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಪ್ರಕರಣಗಳನ್ನು ದಾಖಲಿಸಲು ಅಧಿಕಾರಿಗಳಿಗೆ ಸೂಚಿಸುತ್ತೇವೆ ಎಂದಿದ್ದಾರೆ.


bengaluru

LEAVE A REPLY

Please enter your comment!
Please enter your name here