Home ಬೆಂಗಳೂರು ನಗರ ಕಡಲೇಕಾಯಿ ಪರಿಷೆ ಜಾತ್ರೆಗೆ ಅಗತ್ಯ ಕ್ರಮ ಕೈಗೊಳ್ಳಿ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ

ಕಡಲೇಕಾಯಿ ಪರಿಷೆ ಜಾತ್ರೆಗೆ ಅಗತ್ಯ ಕ್ರಮ ಕೈಗೊಳ್ಳಿ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ

47
0
BBMP Chief Commissioner Gaurav Gupta directs to take necessary steps for peanut fair in Basavanagudi
bengaluru

ಬೆಂಗಳೂರು:

ಕಾರ್ತಿಕ ಮಾಸದ ಕಡೆಯ ಸೋಮವಾರ ನಡೆಯುವ ಪಾರಂಪರಿಕ ಕಡಲೇಕಾಯಿ ಪರಿಷೆ ಜಾತ್ರೆಗೆ ಅಗತ್ಯ ಕ್ರಮ ಸಂಬಂಧಿಸಿದ ಇಲಾಖೆಗಳು ಕೈಗೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರು ತಿಳಿಸಿದರು.

ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

BBMP Chief Commissioner Gaurav Gupta directs to take necessary steps for peanut fair in Basavanagudi

ನಾಡಿನ ಸಂಸ್ಕೃತಿ ಬಿಂಬಿಸುವ ನವೆಂಬರ್ 29 ರಂದು ನಡೆಯಲಿರುವ ಕಡಲೇಕಾಯಿ ಪರಿಷೆಯನ್ನು ಸಂಪ್ರದಾಯ, ಸಂಸ್ಕ್ರತಿ ಮತ್ತು ಜಾನಪದ ವೈಭವದಿಂದ ಆಚರಿಸಲಾಗುವುದು. ಅಧಿಕ ಜನರು ಭೇಟಿ ನೀಡುವುದರಿಂದ ಮೂಲಭೂತ ಸೌಕರ್ಯ, ರಕ್ಷಣೆಗಾಗಿ ಪೊಲೀಸ್ ಮತ್ತು ಬಿಬಿಎಂಪಿಯ 700 ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಸ್ಥಳೀಯ ಶಾಸಕ ಎಲ್.ಎ.ರವಿ ಸುಬ್ರಹ್ಮಣ್ಯ ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here