Home Uncategorized Love Jihad: ನನ್ನ ಮೇಲೆ ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಂದ ಮಹಿಳಾ ಟೆಕ್ಕಿ; ಕರ್ನಾಟಕ...

Love Jihad: ನನ್ನ ಮೇಲೆ ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಂದ ಮಹಿಳಾ ಟೆಕ್ಕಿ; ಕರ್ನಾಟಕ ಪೊಲೀಸರ ತನಿಖೆ ಆರಂಭ

5
0
Advertisement
bengaluru

ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೊಬ್ಬರು ಲವ್ ಜಿಹಾದ್ ಮತ್ತು ಲೈಂಗಿಕ ಶೋಷಣೆ, ಅಸ್ವಭಾವಿಕ ಲೈಂಗಿಕ ಕ್ರಿಯೆ ಕುರಿತು ವರದಿ ಮಾಡಿರುವ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೊಬ್ಬರು ಲವ್ ಜಿಹಾದ್ ಮತ್ತು ಲೈಂಗಿಕ ಶೋಷಣೆ, ಅಸ್ವಭಾವಿಕ ಲೈಂಗಿಕ ಕ್ರಿಯೆ ಕುರಿತು ವರದಿ ಮಾಡಿರುವ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಮಹಿಳೆಯೊಬ್ಬರು ತಾವು ಲವ್ ಜಿಹಾದ್ ಸಂತ್ರಸ್ಥೆಯಾಗಿದ್ದು, ತಮ್ಮ ಮೇಲೆ ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ವೇಗವಾಗಿ ಬಂದು ಶಾಲಾ ಮಕ್ಕಳ ಮೇಲೆ ಹರಿದ ಖಾಸಗಿ ಬಸ್: ಓರ್ವ ವಿದ್ಯಾರ್ಥಿನಿ ಸಾವು; ನಾಲ್ವರಿಗೆ ಗಾಯ

‘ಗುಪ್ತ ಭಾರತ @artiniart1’ ಖಾತೆಯಿಂದ ಈ ಪೋಸ್ಟ್ ಮಾಡಲಾಗಿದ್ದು, ಟೀಟ್ ನಲ್ಲಿ ಬೆಂಗಳೂರು ಪೊಲೀಸರನ್ನು ಉಲ್ಲೇಖಿಸಿ “ಸರ್, ನಾನು ಲವ್ ಜಿಹಾದ್, ಅತ್ಯಾಚಾರ, ಅಸಹಜ ಲೈಂಗಿಕತೆ ಮತ್ತು ಬಲವಂತದ ಧಾರ್ಮಿಕ ಮತಾಂತರಕ್ಕೆ ಬಲಿಯಾಗಿದ್ದೇನೆ. ನನ್ನ ಜೀವಕ್ಕೆ ಅಪಾಯವಿರುವುದರಿಂದ ದಯವಿಟ್ಟು ತಕ್ಷಣ ಬೆಂಗಳೂರಿನಲ್ಲಿ ಪೊಲೀಸರ ಸಹಾಯವನ್ನು ಒದಗಿಸಿ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಈ ಪೋಸ್ಟ್ ಅನ್ನು ಬೆಂಗಳೂರು ಪೊಲೀಸ್, ಕರ್ನಾಟಕ ಡಿಜಿಪಿ ಮತ್ತು ಪ್ರಧಾನ ಮಂತ್ರಿ ಕಚೇರಿಗೆ ಟ್ಯಾಗ್ ಕೂಡ ಮಾಡಲಾಗಿದೆ. ಈ ಪೋಸ್ಚ್ ಗೆ ತುರ್ತಾಗಿ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸರು, ಅಗತ್ಯ ಕ್ರಮಕ್ಕಾಗಿ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ತನ್ನ ಮನವಿಯನ್ನು ರವಾನಿಸಲು ನಿವಾಸದ ವಿಳಾಸದ ವಿವರಗಳನ್ನು ಹಂಚಿಕೊಳ್ಳಲು ಸಂತ್ರಸ್ತೆಯನ್ನು ಕೇಳಿದ್ದಾರೆ.

bengaluru bengaluru

ಅಂತೆಯೇ ಈ ಟ್ವೀಟ್ ಸಂತ್ರಸ್ಥೆ ಕೂಡ ಪೊಲೀಸರಿಗೆ ಧನ್ಯವಾದ ಹೇಳಿದ್ದು, ಪೋಸ್ಟ್‌ನಲ್ಲಿ ಬೆಂಗಳೂರಿನ ಡಿಸಿಪಿ ವೈಟ್‌ಫೀಲ್ಡ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. “ಧನ್ಯವಾದಗಳು, ನಾನು ಪೊಲೀಸ್ ಇನ್ಸ್‌ಪೆಕ್ಟರ್ ಅವರೊಂದಿಗೆ ಸಂಪರ್ಕ ಹೊಂದಿದ್ದೇನೆ ಮತ್ತು ಅವರು ನನ್ನ ಎಫ್‌ಐಆರ್ ಅನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳುತ್ತಿದ್ದಾರೆ, ನನ್ನ ಕುಟುಂಬ ಮತ್ತು ನನ್ನ ಸುರಕ್ಷತೆಯ ಬಗ್ಗೆ ನನಗೆ ಭರವಸೆ ಇದೆ” ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ. ಅಂತೆಯೇ  “ನಾನು ಯಾವುದೇ ಸುದ್ದಿ ಮಾಧ್ಯಮಗಳ ಮಧ್ಯಪ್ರವೇಶ ಬಯಸುವುದಿಲ್ಲ, ಪೊಲೀಸರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ” ಎಂದು ಸಂತ್ರಸ್ತೆ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮೆಟ್ರೋ ಪಿಲ್ಲರ್ ದುರಂತಕ್ಕೆ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ ನೌಕರರು ಹೊಣೆ

ಸಂತ್ರಸ್ತೆ ಈ ಹಿಂದೆ ಬಿಜೆಪಿ ಅಲ್ಪಸಂಖ್ಯಾತ ನಾಯಕಿ, ರಾಜ್ಯ ಸಮಿತಿ ಸದಸ್ಯೆ ನಾಜಿಯಾ ಇಲಾಹಿ ಖಾನ್‌ಗೆ ಹಲವು ಪೋಸ್ಟ್‌ಗಳನ್ನು ಟ್ಯಾಗ್ ಮಾಡಿದ್ದರು. “ನಾನು ಲವ್ ಜಿಹಾದ್ ಬಲಿಪಶು, ದಯವಿಟ್ಟು ನನ್ನ ಪ್ರಕರಣವನ್ನು ಆಲಿಸಬಹುದೇ ಮತ್ತು ನನ್ನ ಪ್ರಕರಣವನ್ನು ನೀವು ಹೋರಾಡಬಹುದೇ ಎಂದು  ಕೇಳಿದ್ದರು. ಸಂತ್ರಸ್ತೆ ತನ್ನ ಮೇಲ್ ನೋಡಲು ನಾಜಿಯಾ ಇಲಾಹಿ ಖಾನ್‌ಗೆ ಮನವಿ ಮಾಡಿದ್ದಾಳೆ. ಅಂತೆಯೇ “ಕಾಶ್ಮೀರಿ ವ್ಯಕ್ತಿ ಫೇಸ್‌ಬುಕ್ ಸ್ನೇಹಿತನಾಗಿದ್ದ. ಬಳಿಕ ನನ್ನ ಬಳಿ ಹಣ ತೆಗೆದುಕೊಂಡು ಅದನ್ನು ಹಿಂದಿರುಗಿಸುವಂತೆ ಕೇಳಿದಾಗ ಅವನು ನನಗೆ ಬೆದರಿಕೆ ಹಾಕುತ್ತಿದ್ದಾನೆ. ನಂತರ ನನ್ನನ್ನು ಮದುವೆಯಾಗುವುದಾಗಿ ನನ್ನ ವಿಶ್ವಾಸವನ್ನು ತೆಗೆದುಕೊಂಡು ನಂತರ ಹಣ ಕೇಳುತ್ತಲೇ ಇದ್ದ. ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ನನಗೆ ಸಹಾಯ ಮಾಡಿ, ಕಾಶ್ಮೀರ ಪೊಲೀಸರಿಂದ ನನಗೆ ಯಾವುದೇ ಸಹಾಯ ಸಿಗುತ್ತಿಲ್ಲ” ಎಂದು ಸಂತ್ರಸ್ತೆ ಮತ್ತೊಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಸಂತ್ರಸ್ತೆ 2022 ರ ನವೆಂಬರ್ 17 ರಂದು ಆಗಿನ ಬೆಂಗಳೂರು ಪೊಲೀಸ್ ಕಮಿಷನರ್ ಮತ್ತು ಪ್ರಸ್ತುತ ಬಿಜೆಪಿ ನಾಯಕ ಭಾಸ್ಕರ್ ರಾವ್ ಅವರಿಗೂ ಒಂದು ಪೋಸ್ಟ್ ಮಾಡಿದ್ದರು. ಪೋಸ್ಟ್ ನಲ್ಲಿ “ನೀವು ಸಹಾಯ ಮಾಡುತ್ತೀರಾ? ಹಿಂದೂ ಹುಡುಗಿಗೆ ಮದುವೆಯ ಭರವಸೆ ನೀಡಿ ಮೋಸ ಮಾಡಲಾಗಿದೆ. ಕಾಶ್ಮೀರಿ ಮುಸ್ಲಿಂ ವ್ಯಕ್ತಿ ಬಿಟ್ಟು ಹೋಗಿದ್ದಾನೆ ಎಂದು ಹೇಳಿಕೊಂಡಿದ್ದಳು.

ಇದನ್ನೂ ಓದಿ: ಕುವೈತ್‌ನಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚನೆ; ಆರು ತಿಂಗಳ ಸಂಕಷ್ಟದ ನಂತರ ತವರಿಗೆ ಮರಳಿದ ಯುವಕರು

ಪ್ರಸ್ತುತ ಬೆಳ್ಳಂದೂರು ಠಾಣೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಧಿಕೃತ ಹೇಳಿಕೆಯನ್ನು ನೀಡಿಲ್ಲ. 
 


bengaluru

LEAVE A REPLY

Please enter your comment!
Please enter your name here