Home ಶಿವಮೊಗ್ಗ ಅಮೃತ್ ಭಾರತ್ ಯೋಜನೆಯಡಿ ರಾಜ್ಯದ 52 ರೈಲು ನಿಲ್ದಾಣ ಮೇಲ್ದರ್ಜೆಗೆ

ಅಮೃತ್ ಭಾರತ್ ಯೋಜನೆಯಡಿ ರಾಜ್ಯದ 52 ರೈಲು ನಿಲ್ದಾಣ ಮೇಲ್ದರ್ಜೆಗೆ

60
0
Upgradation of 52 railway stations in the state under Amrit Bharat scheme
Advertisement
bengaluru

ಶಿವಮೊಗ್ಗ:

ಅಮೃತ್ ಭಾರತ್ ಯೋಜನೆಯಡಿ ರಾಜ್ಯದ ಐವತ್ತೆರಡು ರೈಲು ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ,  ದೀರ್ಘಾವಧಿ ದೃಷ್ಟಿಯೊಂದಿಗೆ ನಿರಂತರ ಅಭಿವೃದ್ಧಿ ನಿರೀಕ್ಷಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ನಿಲ್ದಾಣಗಳನ್ನು ನಗರ ಕೇಂದ್ರಗಳಾಗಿಯೂ ಅಭಿವೃದ್ಧಿಪಡಿಸಲಾಗುತ್ತಿದೆ.

ಈ ನಿಲ್ದಾಣಗಳು ನೈರುತ್ಯ ರೈಲೈಯ ಬೆಂಗಳೂರು, ಮೈಸೂರು, ಹುಬ್ಬಳ್ಳಿ ವಿಭಾಗದಲ್ಲಿ ಬರುತ್ತವೆ. ಜನರು ರೈಲು ಹತ್ತಲು ಬರುವ ಸ್ಥಳವಾಗಿ ಮಾತ್ರವಲ್ಲದೇ, ನಗರ ಕೇಂದ್ರವಾಗಿಯೂ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಗುರಿ ಹೊಂದಲಾಗಿದೆ. 

ಗುರುತಿಸಲಾದ ರೈಲು ನಿಲ್ದಾಣಗಳಲ್ಲಿ ಕನಿಷ್ಠ ಅಗತ್ಯ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಆದರ್ಶ ನಿಲ್ದಾಣಗಳು ಎಂಬ ಯೋಜನೆ ಇದೆ. ನಿಲ್ದಾಣಗಳು ಕೇವಲ ರೈಲುಗಳನ್ನು ಹತ್ತಲು ಮತ್ತ ಇಳಿಯಲು ಇರುವ ಸ್ಥಳವಲ್ಲಾ, ಚಿಲ್ಲರೆ ಮಾರಾಟ ಮಳಿಗೆಗಳು, ಆಹಾರ ಮಳಿಗೆಗಳು, ಇನ್ಫೋಟೈನ್‌ಮೆಂಟ್ ಮತ್ತು ವಿರಾಮವನ್ನು ಉತ್ತೇಜಿಸುವ ನಗರ ಕೇಂದ್ರಗಳಾಗಿ ಹೊರಹೊಮ್ಮಬೇಕು ಎಂಬುದು ಪ್ರಧಾನಿಯವರ ದೂರದೃಷ್ಟಿಯಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗ್ಡೆ ತಿಳಿಸಿದ್ದಾರೆ. 

bengaluru bengaluru

ಇದನ್ನೂ ಓದಿ: ರೈಲ್ವೆ ಬಜೆಟ್: ಕರ್ನಾಟಕಕ್ಕೆ ದಾಖಲೆಯ 7,561 ಕೋಟಿ ರೂ. ಅನುದಾನ

ತಡೆ ರಹಿತ ಬಹು-ಮಾದರಿ ಸಂಪರ್ಕ ಮತ್ತು ನಿಲ್ದಾಣಗಳ ಸುತ್ತಲಿನ ಪ್ರವೇಶ ರಸ್ತೆಗಳ ಬಲವರ್ಧನೆಯು , ನಗರ ಕೇಂದ್ರವಾಗಿ ಕಾರ್ಯನಿರ್ವಹಿಸಲು, ಸ್ಥಳೀಯ ಆರ್ಥಿಕತೆಯ ಚಾಲಕನಾಗಿ ಕಾರ್ಯನಿರ್ವಹಿಸಲು ಮತ್ತು ಸಾರಿಗೆ-ಆಧಾರಿತ ಅಭಿವೃದ್ಧಿಗೆ ಅನುಕೂಲವಾಗುವಂತೆ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ. ಗುರಿ ತಲುಪಲು ಕಟ್ಟಡ ಪುನರ್ ನಿರ್ಮಾಣ, ಅಧುನಿಕ ಸೌಲಭ್ಯ ಸೇರಿದಂತೆ ವ್ಯಾಪಕ ಕಾಮಗಾರಿಗಳ ನಿರೀಕ್ಷೆಯಿದೆ. 

ಸುಗಮ ಸಂಚಾರಕ್ಕಾಗಿ ನೂತನ ರಸ್ತೆಗಳು, ಪಾದಚಾರಿ ಮಾರ್ಗಗಳು, ಸೈಕಲ್ ಪಥಗಳು, ಸ್ಕೈವಾಕ್‌ಗಳು ಮತ್ತು ಸೇತುವೆಗಳು ಇತ್ಯಾದಿಗಳನ್ನು ವಿಸ್ತರಿಸುವುದು, ಬಲಪಡಿಸುವುದು ಅಥವಾ ರಚಿಸುವುದು ಈ ಕಾಮಗಾರಿಗಳಲ್ಲಿ ಸೇರಿದಂತೆ
ನಿಲ್ದಾಣದ ಒಳಗೆ, ಪ್ರಯಾಣಿಕರು ಕ್ಯೂನ ನಲ್ಲಿ ಆರಾಮದಾಯಕವಾಗಿ ಸಾಗುವಂತೆ ವ್ಯವಸ್ಥೆ ಮಾಡುವುದು, ಶುದ್ಧ ಕುಡಿಯುವ ನೀರು, ಶೌಚಾಲಯ ಮತ್ತಿತರ ಸೌಕರ್ಯ ಒದಗಿಸಲಾಗುತ್ತದೆ.

ಸಂಪೂರ್ಣ ನವೀಕರಿಸಿದ ನಿಲ್ದಾಣದ ಸಂಕೀರ್ಣ ದಿವ್ಯಾಂಗ-ಸ್ನೇಹಿಯಾಗಿರಬೇಕು. ಮೇಲ್ದರ್ಜೆಗೇರಿದ ರೈಲು ನಿಲ್ದಾಣಗಳು ಸುಸ್ಥಿರತೆಯ ಅಂಶಗಳನ್ನು ಹೊಂದಿರಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.


bengaluru

LEAVE A REPLY

Please enter your comment!
Please enter your name here