Home Uncategorized ಒತ್ತುವರಿ ತೆರವುಗೊಳಿಸಲು ಸರಕಾರ ಬದ್ಧವಾಗಿದೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ಒತ್ತುವರಿ ತೆರವುಗೊಳಿಸಲು ಸರಕಾರ ಬದ್ಧವಾಗಿದೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ

15
0

ಒತ್ತುವರಿ ಅತಿಕ್ರಮಣ ತೆರವುಗೊಳಿಸಲು ಸರ್ಕಾರ ಶೀಘ್ರವೇ ಪ್ರಕ್ರಿಯೆ ಆರಂಭಿಸಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಅಧಿಕಾರಿಗಳ ಮುಂದೆ ಸರ್ಕಾರ ಮೇಲುಗೈ ಸಾಧಿಸಿದರೂ ಕೂಡ ರಾಜ್ಯಾದ್ಯಂತ ಅತಿಕ್ರಮಿತ ಭೂಮಿಯನ್ನು ವಾಪಸ್ ಪಡೆಯಲು ಅವರಿಗೆ ಮುಕ್ತ ಅವಕಾಶವನ್ನು ನೀಡಲಾಗುವುದು ಎಂದರು.  ಮೈಸೂರು: ಒತ್ತುವರಿ ಅತಿಕ್ರಮಣ ತೆರವುಗೊಳಿಸಲು ಸರ್ಕಾರ ಶೀಘ್ರವೇ ಪ್ರಕ್ರಿಯೆ ಆರಂಭಿಸಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಅಧಿಕಾರಿಗಳ ಮುಂದೆ ಸರ್ಕಾರ ಮೇಲುಗೈ ಸಾಧಿಸಿದರೂ ಕೂಡ ರಾಜ್ಯಾದ್ಯಂತ ಅತಿಕ್ರಮಿತ ಭೂಮಿಯನ್ನು ವಾಪಸ್ ಪಡೆಯಲು ಅವರಿಗೆ ಮುಕ್ತ ಅವಕಾಶವನ್ನು ನೀಡಲಾಗುವುದು ಎಂದರು. 

ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಪ್ರಕ್ರಿಯೆ ಕುರಿತು ಚರ್ಚಿಸಲು ಸಭೆ ನಡೆಸಲಾಗಿದೆ. ಯಾವುದೇ ರೀತಿಯ ಅಕ್ರಮ ಭೂಮಿ ಒತ್ತುವರಿಯನ್ನು ಸರ್ಕಾರ ಸಹಿಸುವುದಿಲ್ಲ. ಇದರ ಜೊತೆಗೆ ಯಾವುದೇ ಒತ್ತಡಕ್ಕೆ ಮಣಿಯದೆ ಅವುಗಳನ್ನು ತೆರವುಗೊಳಿಸಲು ಸಿಎಂ ನಿರ್ದೇಶನವನ್ನು ಪಡೆಯಲಾಗುವುದು ಎಂದರು. 

ಆಡಳಿತವನ್ನು ಸುಗಮಗೊಳಿಸಲು ಮತ್ತು ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಪ್ರತಿಪಾದಿಸಿದ ಅವರು, ಕಂದಾಯ ಅಧಿಕಾರಿಗಳ ಮುಂದೆ ಸಾವಿರಾರು ಭೂ ವಿವಾದ ಪ್ರಕರಣಗಳು ಬಾಕಿ ಉಳಿದಿರುವುದು ಸರ್ಕಾರಕ್ಕೆ ತಿಳಿದಿದೆ. ಕಾಂಗ್ರೆಸ್ ಸರ್ಕಾರವು 2013 ರಿಂದ 2018ರ ಅವಧಿಯಲ್ಲಿ ತನ್ನ ಹಿಂದಿನ ಅವಧಿಯಲ್ಲಿ ಮಾಡಿದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಕರಣಗಳನ್ನು ಪರಿಹರಿಸಲು ಅದಾಲತ್‌ಗಳನ್ನು ನಡೆಸಲು ಯೋಜಿಸುತ್ತಿದೆ ಎಂದರು. 

ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ಸಚಿವರಾದ ಎನ್ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದು ಭ್ರಷ್ಟಾಚಾರದ ಆರೋಪ ಹೊರಿಸಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ, ನಕಲಿ ಪತ್ರಗಳನ್ನು ಸೃಷ್ಟಿಸಿ ಸರ್ಕಾರದ ಮಾನಹಾನಿ ಮಾಡುವ ಷಡ್ಯಂತ್ರ ಇದಾಗಿದೆ. ಇತ್ತೀಚೆಗೆ ಪಕ್ಷದ ಶಾಸಕರು, ಸಚಿವರ ಬಗ್ಗೆಯೂ ದೂರಿ ಬರೆದಿದ್ದಾರೆ ಎನ್ನಲಾದ ಪತ್ರವೂ ನಕಲಿ, ಆದರೆ ಮಾಧ್ಯಮಗಳ ಗಮನ ಸೆಳೆದಿದೆ ಎಂದರು. ಕೃಷಿ ಇಲಾಖೆ ಅಧಿಕಾರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದು, ಪತ್ರ ನಕಲಿಯಾಗಿದೆ ಎಂದರು. 

“ಇದು ರಾಜಕೀಯ ಪಿತೂರಿ, ನಾವು ಇದನ್ನು ರಾಜಕೀಯವಾಗಿ ಎದುರಿಸುತ್ತೇವೆ. ಅಧಿಕಾರಿಗಳಿಗೆ ಸಮಸ್ಯೆಗಳಿದ್ದರೆ ಲೋಕಾಯುಕ್ತಕ್ಕೆ ಪತ್ರ ಬರೆಯಬಹುದಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲಿ ಮೂರು ಭರವಸೆಗಳನ್ನು ಜಾರಿಗೆ ತಂದಿರುವ ಸರ್ಕಾರದ ಜನಪ್ರಿಯತೆಯನ್ನು ಪ್ರತಿಪಕ್ಷಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕೃಷ್ಣ ಭೈರೇಗೌಡ ಟೀಕಿಸಿದರು.

LEAVE A REPLY

Please enter your comment!
Please enter your name here