
ಸಿನಿರಂಗದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಹಲವು ವರ್ಷಗಳಿಂದ ಅಭಿಮಾನಿಗಳಲ್ಲಿ ಕುತೂಹಲ, ನಿರೀಕ್ಷೆಗಳಿವೆ.

ಬಾಹುಬಲಿ, ಅರುಂಧತಿ, ರುದ್ರಮದೇವಿಯಂತಹ ಬ್ಲಾಕ್ ಬಾಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದ ಅನುಷ್ಕಾ ಶೆಟ್ಟಿ ಯಾರನ್ನು ವರಿಸಲಿದ್ದಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು.

ಬಾಹುಬಲಿ ಸಿನಿಮಾ ನಂತರ ಅನುಷ್ಕಾ ಶೆಟ್ಟಿ-ಪ್ರಭಾಸ್ ವಿವಾಹವಾಗಲಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು

ಆದರೆ ಈ ಗಾಸಿಪ್ ಬಗ್ಗೆ ಪ್ರಭಾಸ್-ಅನುಷ್ಕಾ ಶೆಟ್ಟಿ ಹಲವು ಬಾರಿ ಸ್ಪಷ್ಟನೆ ನೀಡಿದ್ದರೂ ಸಹ ಅಭಿಮಾನಿಗಳಲ್ಲಿ ಇರುವ ಊಹಾಪೋಹಗಳು ನಿಲ್ಲಲಿಲ್ಲ. ಈಗ ಅನುಷ್ಕಾ ಶೆಟ್ಟಿ ವಿವಾಹ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ

ಇತ್ತೀಚಿನ ಮಾಹಿತಿಯ ಪ್ರಕಾರ ಅನುಷ್ಕಾ ಶೆಟ್ಟಿ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಚಿತ್ರರಂಗದಲ್ಲಿರುವ ಅನುಷ್ಕಾ ಶೆಟ್ಟಿ ಚಿತ್ರರಂಗದವರನ್ನೇ ವಿವಾಹವಾಗಲಿದ್ದಾರೆ ಎಂಬ ಊಹಾಪೋಹಗಳಿತ್ತು.

ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ ಅನುಷ್ಕಾ ಮದುವೆಯಾಗಲಿರುವ ವ್ಯಕ್ತಿ ಚಿತ್ರರಂಗದವರಲ್ಲ

ಬೆಂಗಳೂರು ಮೂಲದ ಉದ್ಯಮಿಯೊಬ್ಬರನ್ನು ಅನುಷ್ಕಾ ಶೆಟ್ಟಿ ವಿವಾಹವಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅನುಷ್ಕಾ ಶೆಟ್ಟಿ-ಉದ್ಯಮಿ ಮದುವೆ ಎರಡು ಕುಟುಂಬಗಳ ಒಪ್ಪಿಗೆಯೊಂದಿಗೆ ನಡೆಯಲಿದೆ ಎನ್ನಲಾಗಿದೆ.

