ಮಂಗಳೂರು: ದ.ಕ.ಜಿಲ್ಲೆಯ 88 ಕೇಂದ್ರಗಳಲ್ಲಿ ಶನಿವಾರ ನಡೆದ ಎಸೆಸ್ಸೆಲ್ಸಿ ವಿಜ್ಞಾನ ಪರೀಕ್ಷೆಗೆ 343 ಮಂದಿ ಗೈರಾಗಿ ದ್ದಾರೆ. ಒಟ್ಟು 29,346 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ಈ ಪೈಕಿ 29,003 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಬಂಟ್ವಾಳ ಶೈಕ್ಷಣಿಕ ವಲಯದಲ್ಲಿ 5,893 ವಿದ್ಯಾರ್ಥಿಗಳ ಪೈಕಿ 5,802 ಮಂದಿ ಹಾಜರಾಗಿದ್ದರೆ, 91 ಮಂದಿ ಗೈರಾಗಿದ್ದಾರೆ. ಬೆಳ್ತಂಗಡಿ ವಲಯದಲ್ಲಿ 3,929 ವಿದ್ಯಾರ್ಥಿಗಳ ಪೈಕಿ 3,895 ಮಂದಿ ಹಾಜರಾಗಿದ್ದರೆ, 34 ಮಂದಿ ಗೈರಾಗಿದ್ದಾರೆ.
ಮಂಗಳೂರು ಉತ್ತರ ವಲಯದಲ್ಲಿ 5,631 ವಿದ್ಯಾರ್ಥಿಗಳ ಪೈಕಿ 5,577 ಮಂದಿ ಹಾಜರಾಗಿದ್ದರೆ, 54 ಮಂದಿ ಗೈರಾಗಿ ದ್ದಾರೆ. ಮಂಗಳೂರು ದಕ್ಷಿಣ ವಲಯದಲ್ಲಿ 5,282 ವಿದ್ಯಾರ್ಥಿಗಳ ಪೈಕಿ 5,230 ಮಂದಿ ಹಾಜರಾಗಿದ್ದರೆ, 52 ಮಂದಿ ಗೈರಾಗಿದ್ದಾರೆ.
ಮೂಡುಬಿದಿರೆ ವಲಯದಲ್ಲಿ 1,903 ವಿದ್ಯಾರ್ಥಿಗಳ ಪೈಕಿ 1,886 ಮಂದಿ ಹಾಜರಾಗಿದ್ದರೆ, 17 ಮಂದಿ ಗೈರಾಗಿದ್ದಾರೆ. ಪುತ್ತೂರು ವಲಯದಲ್ಲಿ 4,775 ವಿದ್ಯಾರ್ಥಿಗಳ ಪೈಕಿ 4,742 ಮಂದಿ ಹಾಜರಾಗಿದ್ದರೆ, 33 ಮಂದಿ ಗೈರಾಗಿದ್ದಾರೆ. ಸುಳ್ಯ ಶೈಕ್ಷಣಿಕ ವಲಯದಲ್ಲಿ 1,933 ವಿದ್ಯಾರ್ಥಿಗಳ ಪೈಕಿ 1,871 ಮಂದಿ ಹಾಜರಾಗಿದ್ದರೆ, 62 ಮಂದಿ ಗೈರಾಗಿದ್ದಾರೆ.
