ತನ್ನ ಪಾಡಿಗೇ ವಿಡಿಯೋ ವ್ಲಾಗ್ ಮಾಡುತ್ತಿದ್ದ ವಿದೇಶಿ ಯೂಟ್ಯೂಬರ್ ಗೆ ಸ್ಥಳೀಯ ವ್ಯಾಪಾರಿಯೊಬ್ಬರು ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಸಂಡೇ ಬಜಾರ್ ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಬೆಂಗಳೂರು: ತನ್ನ ಪಾಡಿಗೇ ವಿಡಿಯೋ ವ್ಲಾಗ್ ಮಾಡುತ್ತಿದ್ದ ವಿದೇಶಿ ಯೂಟ್ಯೂಬರ್ ಗೆ ಸ್ಥಳೀಯ ವ್ಯಾಪಾರಿಯೊಬ್ಬರು ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಸಂಡೇ ಬಜಾರ್ ನಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ಬೆಂಗಳೂರು ನಗರದ ಚಿಕ್ಕಪಟೇಟೆಯಲ್ಲಿ ವ್ಯಾಪ್ತಿಯಲ್ಲಿ ನಡೆಯುವ ಸಂಡೇಬಜಾರ್ ನಲ್ಲಿ ಈ ಘಟನೆ ನಡೆದಿದ್ದು, ವಿದೇಶಿ ಯೂಟ್ಯೂಬರ್ ಮೇಲೆ ವ್ಯಾಪಾರಿಯೊಬ್ಬರು ಹಲ್ಲೆ ಯತ್ನ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ವೈರಲ್ ವಿಡಿಯೋದಲ್ಲಿ ಉತ್ಸಾಹದಿಂದಲೇ ನೆದರ್ಲ್ಯಾಂಡ್ನ ಪೆಡ್ರೋ ಮೊಟಾ ಎಂಬ ವ್ಯಕ್ತಿ ವಿಡಿಯೋ ಮಾಡುತ್ತಿದ್ದ. ಈ ವೇಳೆ ತಾನ್ನು ಇಷ್ಟು ದೊಡ್ಡ ಮಾರುಕಟ್ಟೆಯಲ್ಲಿ ತಾನು ಏನಾದರೂ ಖರೀದಿ ಮಾಡಿಯೇ ತೀರುತ್ತೇನೆ ಎಂದು ಹೇಳುವಾಗಲೇ ಸ್ಥಳೀಯ ವ್ಯಾಪಾರಿಯೋರ್ವ ಆತನ ಕೈ ಹಿಡಿದು ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಅಗ್ರಹಿಸಿದ್ದಾನೆ.
ಇದನ್ನೂ ಓದಿ: ಚಿತ್ರದುರ್ಗ ಬಳಿ ಫಾರ್ಚುನರ್ ಕಾರು-ಲಾರಿ ಅಪಘಾತ: 3 ತಿಂಗಳ ಹಸುಳೆ ಸೇರಿ ಮೂವರ ಸಾವು
ಆದರೆ ಆತನ ಮಾತು ಅರ್ಥವಾಗದ ವಿದೇಶಿ ಯೂಟ್ಯೂಬರ್ ಅಲ್ಲಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾನೆ. ಆದರೂ ಆತನನ್ನು ಆ ವ್ಯಾಪಾರಿ ಮತ್ತು ಇತರರು ಅಟ್ಟಾಡಿಸಿದ್ದಾರೆ. ಆದರೆ ಕೆಲವೇ ಕ್ಷಣಗಳ ಅಂತರದಲ್ಲಿ ವಿದೇಶಿ ಯೂಟ್ಯೂಬರ್ ಪಾರಾಗಿದ್ದಾನೆ. ಈ ಕೃತ್ಯಕ್ಕೆ ಭಾರೀ ಖಂಡನೆ ವ್ಯಕ್ತವಾಗುತ್ತಿದ್ದು, ಪಶ್ಚಿಮ ವಿಭಾಗದ ಡಿಸಿಪಿ ಗಮನಕ್ಕೂ ತರಲಾಗಿದೆ.
@BlrCityPolice Dutch tourist/Youtuber attacked in Chicpet, Bengaluru without any reason.https://t.co/DzofarcZT0 pic.twitter.com/EaablNuzoU
— Jaspal Singh (@jaspal811982) June 11, 2023
ವಿಡಿಯೋದಲ್ಲಿ ಏನಿದೆ..?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ವಿದೇಶಿ ಪ್ರಜೆ ಲೈವ್ ವಿಡಿಯೋ ಮಾಡುತ್ತ ರಸ್ತೆಯಲ್ಲಿ ಹೋಗುತ್ತಿರುತ್ತಾರೆ. ಈ ವೇಳೆ ಆತನ ವಿರುದ್ಧ ದಿಕ್ಕಿನಿಂದ ಬಂದ ಓರ್ವ ವ್ಯಕ್ತಿ ಆತನನ್ನು ತಡೆದು ನಿಲ್ಲಿಸಿದ್ದಾನೆ. ಆಗ ವಿದೇಶಿ ಪ್ರಜೆ ‘ನಮಸ್ತೆ, ನಮಸ್ಕಾರ್’ ಎಂದು ಮಾತನಾಡಿಸಲು ಮುಂದಾಗಿದ್ದಾರೆ. ಆಗ, ಕೈಹಿಡಿದುಕೊಂಡಿದ್ದ ವ್ಯಕ್ತಿ ಕೈ ತೋರಿಸುತ್ತ ‘ಏನ್ ನಮಸ್ಕಾರ್..? ಏನಿದು’ ಎಂದು ಪ್ರಶ್ನೆ ಮಾಡಿ, ವಿಡಿಯೋ ರೆಕಾರ್ಡಿಂಗ್ ನಿಲ್ಲಿಸು ಎಂದಿದ್ದಾರೆ. ನಂತರ, ಒಂದಷ್ಟು ಮಂದಿ ಯೂಟ್ಯೂಬರ್ ಸುತ್ತುವರಿದಿದ್ದಾರೆ. ಕೂಡಲೇ ಆತ ಪರಾರಿಯಾಗಿ ಅವರಿಂದ ತಪ್ಪಿಸಿಕೊಂಡಿದ್ದಾರೆ.
Karnataka | A Dutch vlogger Pedro Mota was manhandled on a busy road in the Chickpet area of Bengaluru while the YouTuber was recording a vlog on the streets
Regarding a complaint about misbehaving with foreigner Pedro Mota, a case has been registered against the person Navab… pic.twitter.com/P72rOzH2x8
— ANI (@ANI) June 12, 2023
ಘಟನೆಯ ಕುರಿತು ಮುದಾಸಿರ್ ಅಹಮದ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಘಟನೆ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಘಟನೆಯ ಕುರಿತು ಬೆಂಗಳೂರುನಗರ ಪೊಲೀಸರು ರಿ ಟ್ವೀಟ್ ಮಾಡಿ, ಅಗತ್ಯ ಕ್ರಮಕ್ಕಾಗಿ ನಿಮ್ಮ ಮನವಿಯನ್ನು ಪಶ್ಚಿಮ ವಿಭಾಗದ ಡಿಸಿಪಿಯವರ ಗಮನಕ್ಕೆ ತರಲಾಗಿದೆ ಎಂದು ಬರೆದಿದ್ದಾರೆ.
ಆರೋಪಿ ಬಂಧನ:
ಕಾಟನ್ ಪೇಟೆ ಠಾಣಾ ಪೊಲೀಸರು ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ನವಾಬ್ ಹಯಾತ್ ಶರೀಫ್ ಎಂಬಾತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
This random guy in chickpet harassed a foreigner, is this how we treat our guests, pls take action, the foreigner name is Pedro Mota he is a youtuber from netherlands https://t.co/oyOb8dunjA https://t.co/0MKVarBiwM@PoliceBangalore @CPBlr @BlrCityPolice @Chickpetebcp pic.twitter.com/XccAyRv0Nu
— Mudassir Ahmed (@tajirmudassir) June 11, 2023
ತಪ್ಪಿತಸ್ಥರ ವಿರುದ್ಧ ಕ್ರಮ
ಇನ್ನು ಈ ವೈರಲ್ ವಿಡಿಯೋವನ್ನು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಈ ಕುರಿತು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆಯುವುದಾಗಿ ಹೇಳಿದ್ದಾರೆ. ಅಲ್ಲದೆ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಸೂಚಿಸಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಮತ್ತೊಂದು ‘ಐಎಎಸ್ ದಂಪತಿ’ ಕೈಯಲ್ಲಿ ಶಕ್ತಿ ಸೌಧ: ರಜನೀಶ್ ಗೋಯೆಲ್ ಪತ್ನಿ ಶಾಲಿನಿ ಸರ್ಕಾರದ ಮುಂದಿನ ಮುಖ್ಯಕಾರ್ಯದರ್ಶಿ?
ಕಳೆದ ವರ್ಷ ಡಿಸೆಂಬರ್ನಲ್ಲಿ, ದಕ್ಷಿಣ ಕೊರಿಯಾದ ಯೂಟ್ಯೂಬರ್ಗೆ ಮುಂಬೈ ಬೀದಿಯಲ್ಲಿ ಇಬ್ಬರು ವ್ಯಕ್ತಿಗಳು ಲೈವ್ ಸ್ಟ್ರೀಮಿಂಗ್ ಮಾಡುವಾಗ ಕಿರುಕುಳ ನೀಡಿದ್ದರು. ಘಟನೆಯ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮುಂಬೈ ಪೊಲೀಸರು ಮೊಬೀನ್ ಚಂದ್ ಮೊಹಮ್ಮದ್ ಶೇಖ್ ಮತ್ತು ಮೊಹಮ್ಮದ್ ನಕೀಬ್ ಸದ್ರೇಲಂ ಅನ್ಸಾರಿ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ನಂತರ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೊರಿಯನ್ ಯೂಟ್ಯೂಬರ್ಗೆ ಸಂಪೂರ್ಣ ರಕ್ಷಣೆಯನ್ನು ಭರವಸೆ ನೀಡಿತ್ತು.
