Home Uncategorized ಬೆಂಗಳೂರು: ನಮ್ಮೂರ ತಿಂಡಿ ಹೋಟೆಲ್ ನಲ್ಲಿ ಬಾಯ್ಲರ್ ಸ್ಫೋಟ, ಮೂವರಿಗೆ ಗಾಯ

ಬೆಂಗಳೂರು: ನಮ್ಮೂರ ತಿಂಡಿ ಹೋಟೆಲ್ ನಲ್ಲಿ ಬಾಯ್ಲರ್ ಸ್ಫೋಟ, ಮೂವರಿಗೆ ಗಾಯ

17
0

ನಾಗರಭಾವಿಯಲ್ಲಿರುವ ನಮ್ಮೂರ ತಿಂಡಿ ಹೊಟೇಲ್‌ನೊಳಗಿನ ಸ್ಟೀಮ್ ಬಾಯ್ಲರ್ ಶನಿವಾರ ಬೆಳಗ್ಗೆ ಸ್ಫೋಟಗೊಂಡ ಪರಿಣಾಮ ಮೂವರು ಕಾರ್ಮಿಕರಿಗೆ  ಸುಟ್ಟ ಗಾಯಗಳಾಗಿವೆ. ಬೆಂಗಳೂರು: ನಾಗರಭಾವಿಯಲ್ಲಿರುವ ನಮ್ಮೂರ ತಿಂಡಿ ಹೊಟೇಲ್‌ನೊಳಗಿನ ಸ್ಟೀಮ್ ಬಾಯ್ಲರ್ ಶನಿವಾರ ಬೆಳಗ್ಗೆ ಸ್ಫೋಟಗೊಂಡ ಪರಿಣಾಮ ಮೂವರು ಕಾರ್ಮಿಕರಿಗೆ  ಸುಟ್ಟ ಗಾಯಗಳಾಗಿವೆ.

ಗಾಯಗೊಂಡವರು ಐಶ್ವರ್ಯ (19) ರವಿಕುಮಾರ್ (20) ಮತ್ತು ಕಾರ್ತಿಕ್ (18) ಎಂದು ಗುರುತಿಸಲಾಗಿದೆ. ಅವರೆಲ್ಲರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

ಕಾರ್ಮಿಕರು ಇಡ್ಲಿ ತಯಾರಿಸಲು ನೀರು ತುಂಬುತ್ತಿದ್ದಾಗ ಬಾಯ್ಲರ್ ಸ್ಫೋಟಗೊಂಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅದೃಷ್ಟವಶಾತ್ ಸ್ಫೋಟದಲ್ಲಿ ಹೋಟೆಲ್‌ನಲ್ಲಿದ್ದ ಗ್ರಾಹಕರಿಗೆ ಯಾವುದೇ ಹಾನಿಯಾಗಿಲ್ಲ. ಈ ಸಂಬಂಧ ಜ್ಞಾನಭಾರತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here